spot_img
Tuesday, April 28, 2026
spot_img

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಂಪನ್ನಗೊಂಡ ‘ಹರಿದ್ವರ್ಣ’ ರಾಷ್ಟ್ರೀಯ ಕಾರ್ಯಾಗಾರ

ಕುಂದಾಪುರ: ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ, ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ ಇಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಐಸಿ‌ಎಸ್‌ಇ ಮತ್ತು ಸಿಬಿ‌ಎಸ್‌ಇ ಶಾಲೆಗಳ ಸಂಘದ ಜಂಟಿ ಆಶ್ರಯದಲ್ಲಿ “ಹರಿದ್ವರ್ಣ”ರಾಷ್ಟ್ರೀಯ ಕಾರ್ಯಾಗಾರ ನ.3 ರಂದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ನಡೆಯಿತು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಸಿದ್ದಪ್ಪ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಈ ಶಾಲೆಯು ಹಸಿರು ಶಾಲೆಯಾಗಿ ಮಾರ್ಪಟ್ಟಿದ್ದು, ಎಲ್ಲಾ ಶಾಲೆಗಳನ್ನೂ ಈ ರೀತಿ ಹಸಿರು ಶಾಲೆಗಳನ್ನಾಗಿ ಮಾರ್ಪಡಿಸಲು ಇದು ವೇದಿಕೆಯಾಗಲಿ.” ಎಂದರು.

ಮೊದಲ ಕಾರ್ಯಾಗಾರದಲ್ಲಿ ಶ್ರೀ ಸಂದೀಪ್ ವುಲ್ಲಿಕಾಂತಿ ಹಿರಿಯ ಸಲಹೆಗಾರರು, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್, ಹೈದರಾಬಾದ್, ತೆಲಂಗಾಣ ಇವರು “ಹಸಿರು ಶಾಲೆಗಳ ಪರಿಕಲ್ಪನೆಗಳು ಮತ್ತು ಪ್ರಯೋಜನಗಳು” ಎಂಬ ವಿಷಯದಲ್ಲಿ ಮಾಹಿತಿಗಳನ್ನು ನೀಡಿದರು.

ದ್ವಿತೀಯ ಕಾರ್ಯಾಗಾರದಲ್ಲಿ ಶ್ರೀ ಶ್ರೇಯಸ್ ಸಜೀವನ್, ಪ್ರಾಜೆಕ್ಟ್ ಆಫೀಸರ್, YRE, LLC, ಪರಿಸರ ಶಿಕ್ಷಣಕ್ಕಾಗಿ ಪರಿಸರ-ಶಾಲೆಗಳ ಕಾರ್ಯಕ್ರಮ ಕೇಂದ್ರ, ಅಹಮದಾಬಾದ್, ಗುಜರಾತ್ ಇವರು “ ಸುಸ್ಥಿರ ಶಾಲೆ” ಎಂಬ ವಿಷಯದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಮೂರನೆಯ ಕಾರ್ಯಾಗಾರದಲ್ಲಿ ವೀರೇಂದ್ರ ರಾವತ್ ಸಂಸ್ಥಾಪಕರು, ಗ್ರೀನ್ ಮೆಂಟರ್, ಅಹಮದಾಬಾದ್, ಗುಜರಾತ್ ಇವರು “ ಪ್ರತಿ ಮಗುವಿಗೆ ಹಸಿರು ಶಾಲೆ” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು.

ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಕವಿತಾ ಉಮಾಶಂಕರ್ ಮಿಶ್ರಾ ಪ್ರಗತಿಪರ ರೈತ ಮಹಿಳೆ, ರಾಯಚೂರು ಇವರು ಮಾತನಾಡುತ್ತಾ “ತಮ್ಮ ಜೀವನದ ಪ್ರತಿಘಟ್ಟದಲ್ಲೂ ಹಸಿರುಕ್ರಾಂತಿಗೆ ಇಟ್ಟ ತಮ್ಮದಾದ ದಿಟ್ಟ ಹೆಜ್ಜೆಗಳ ಅನುಭವವನ್ನು ಮನಮುಟ್ಟುವಂತೆ ತಿಳಿಸುತ್ತಾ, ಒಬ್ಬ ರೈತ ಒಂದು ತುತ್ತು ಅನ್ನ ಬೆಳೆಯಲು ಪಡುವ ಬವಣೆಗಳನ್ನು ತಿಳಿಸಿಕೊಡುತ್ತಾ ಶಾಲೆಗಳು ಕೇವಲ ಇಂಜಿನಿಯರ್ ಡಾಕ್ಟರ್ ಗಳನ್ನು ಉತ್ಪಾದಿಸುವ ಫ್ಯಾಕ್ಟರಿಗಳಾಗದೆ ಮಕ್ಕಳನ್ನು ಸ್ವಾಭಿಮಾನದಿಂದ ದೇಶಕ್ಕೆ ಅನ್ನಕೊಡುವ ರೈತರನ್ನಾಗಿಸಬೇಕು. ಹಾಗಾದಾಗ ಮಾತ್ರ ಈ ಹರಿದ್ವರ್ಣ ಕಾರ್ಯಕ್ರಮ ತನ್ನ ಸಫಲತೆಯನ್ನು ಕಾಣುತ್ತದೆ.” ಎಂದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಐಸಿ‌ಎಸ್‌ಇ ಮತ್ತು ಸಿಬಿ‌ಎಸ್‌ಇ ಶಾಲೆಗಳ ಸಂಘದ ಅಧ್ಯಕ್ಷರಾದ ಮನಮೋಹನ್ ನಾಯ್ಕ್, ಅಧ್ಯಕ್ಷೀಯ ನುಡಿಗಳಲ್ಲಿ “ನಮ್ಮ ಮನಸ್ಸು, ಬುದ್ಧಿ ಮೊದಲು ಹಸಿರಾದರೆ, ದೇಶವೇ ಹಸಿರಾಗಲು ವೇದಿಕೆಯಾಗುತ್ತದೆ. ಈ ಹರಿದ್ವರ್ಣ ವೇದಿಕೆ ನಮ್ಮ ಮನಸ್ಸನ್ನು ಹಸಿರಾಗಿಸಲು ಮೊದಲ ಹೆಜ್ಜೆಯಾಗಿದೆ” ಎಂದರು.
ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್ ವಂದಿಸಿದರು.

ಶಿಕ್ಷಕರಾದ ಮಧು ಮತ್ತು ಕುಮಾರಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಸಿದ್ಧಿವಿನಾಯಕ ಶಾಲಾ ಪ್ರಾಂಶುಪಾಲರೂ ಹಾಗೂ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಸರ್ವರನ್ನೂ ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ನಾವು ಪ್ರಕೃತಿಯನ್ನು ಪ್ರೀತಿಸಬೇಕು. ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣದ ಅಗತ್ಯತೆಯನ್ನು ತಿಳಿಸಿದರು.

ಈ ಕಾರ್ಯಾಗಾರಗಳಲ್ಲಿ ಡಾ. ಗೀತಾ ಶಶಿಧರ್, ಕಾರ್ಯದರ್ಶಿಗಳು,AICS, ಪ್ರಾಂಶುಪಾಲರು ಆನಂದತೀರ್ಥ ವಿದ್ಯಾಲಯ, ಉಡುಪಿ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಶ್ರೀ ಹೆಚ್. ಗಣೇಶ್ ಕಾಮತ್, ಉಡುಪಿಯ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಪ್ರಿನ್ಸಿಪಾಲ್ ವಿನ್ಸೆಂಟ್ ಡಿಕೋಸ್ಟ್, ಬಂಟ್ವಾಳ ಸೈಂಟ್ ಡೊಮೆನಿಕ್ ಸ್ಕೂಲ್ ಪ್ರಿನ್ಸಿಪಾಲ್ ಫಾದರ್ ಫ್ರಾನ್ಸಿಸ್ ಅರುಣ ಡಿಸೋಜಾ ಮತ್ತು 78ಕ್ಕೂ ಅಧಿಕ ಶಾಲೆಯ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಹಿರಿಯ ಶಿಕ್ಷಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!