spot_img
Tuesday, April 28, 2026
spot_img

ಬಜೆಟ್ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯ ಶಾಸಕರ ಸಾಧನೆ ಶೂನ್ಯ-ವಿಕಾಸ್ ಹೆಗ್ಡೆ


ಕುಂದಾಪುರ: ಒಂದು ಕ್ಷೇತ್ರ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ಅಧಿವೇಶನ ಅಂದರೆ ಅದು ಬಜೆಟ್ ಅಧಿವೇಶನ. ಆದರೆ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಉಡುಪಿ ಜಿಲ್ಲೆಯ ಶಾಸಕರುಗಳ ಸಾಧನೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಟೀಕಿಸಿದ್ದಾರೆ.

ವಿರೋಧ ಪಕ್ಷದ ಶಾಸಕರು ಆದರೂ ಸಹ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸರ್ಕಾರಕ್ಕೆ ತಮ್ಮ ಕ್ಷೇತ್ರದ ಹಾಗೂ ಜಿಲ್ಲೆಯ ಅತೀ ಅವಶ್ಯಕತೆಗಳ ಬಗ್ಗೆ ಗಮನಕ್ಕೆ ತಂದು ಅದನ್ನು ಮುಖ್ಯಮಂತ್ರಿಗಳ ಬಜೆಟ್ ಮೇಲಿನ ವಂದನಾ ಭಾಷಣದಲ್ಲಿ ಸೇರಿಸುವಲ್ಲಿ ಶ್ರಮವಹಿಸುವುದು ಹಿಂದಿನಿಂದ ನಡೆದು ಬಂದ ಕ್ರಮ, ಆದರೆ ಜಿಲ್ಲೆಯ ಶಾಸಕರು ಬಜೆಟ್ ಅಧಿವೇಶನವನ್ನು ಕೇವಲ ಪ್ರಚಾರ ಹಾಗೂ ರಾಜಕಾರಣಕ್ಕೆ ಬಳಸಿಕೊಂಡದ್ದು ಅವರ ಕ್ಷೇತ್ರ ಹಾಗೂ ಜಿಲ್ಲೆಗೆ ಮಾಡಿದ ಅನ್ಯಾಯ. ವಿಧಾನ ಸಭೆಯ ಕಾರ್ಯ ಕಲಾಪಗಳಲ್ಲಿ ಸಕ್ರಿಯ ಭಾಗವಹಿಸುವುದರ ಮೂಲಕ ಸದನದ ನೀತಿ, ನಿಯಮಗಳನ್ನು ಕಲಿಯ ಬೇಕಾದ ನೂತನ ಶಾಸಕರುಗಳು ಅದನ್ನಾ ಮಾಡದೆ ಕಾಗದ ಪತ್ರಗಳನ್ನು ವಿಧಾನ ಸಭಾ ಅಧ್ಯಕ್ಷರ ಪೀಠದ ಮೇಲೆ ಎಸೆದು ದುರ್ವರ್ತನೆ ತೋರಿ ಅಧಿವೇಶನದಿಂದ ಅಮಾನತು ಗೊಂಡಿದ್ದು ಜಿಲ್ಲೆಯ ಮತದಾರರು ನಾಚಿಕೆ ಪಡುವ ಸಂಗತಿ. ಇನ್ನಾದರೂ ಜೆಲ್ಲೆಯ ಬಿಜೆಪಿ ಶಾಸಕರುಗಳು ದ್ವೇಷದ ರಾಜಕಾರಣದ ಮೂಲಕ ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಜಿಲ್ಲೆಯ ಅಭಿವೃದ್ಧಿಯ ಪರ ಇನ್ನು ಮುಂದಾದರೂ ಚಿಂತಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!