spot_img
Saturday, November 21, 2026
spot_img

ನ.24ಕ್ಕೆ ಉಡುಪಿಯಲ್ಲಿ ಪಂಚಗ್ಯಾರಂಟಿ ಸಮಾವೇಶ ಯಶಸ್ವಿಗೊಳಿಸಲು ಎಚ್.ಹರಿಪ್ರಸಾದ್ ಶೆಟ್ಟಿ ಕರೆ

ಕುಂದಾಪುರ: ಪಂಚಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ ನ.24ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಅದೇ ರೀತಿ ಭಾರತ್ ಜೋಡೋ ಕಾರ್ಯಕ್ರಮ ಕೂಡಾ ಗ್ಯಾರಂಟಿ ಸಮಿತಿಯ ಮೂಲಕವೇ ಅನುಷ್ಠಾನಗೊಳ್ಳುತ್ತಿದ್ದು, ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ನೋಂದಣಿ ಮಾಡುವ ಕೆಲಸ ಆಗಬೇಕು. ಯುವ ಸಬಲೀಕರಣ. ಆಡಳಿತದಲ್ಲಿ ಯುವ ಜನಾಂಗದ ಸಕ್ರೀಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ್ ಜೋಡೊ ಪ್ರಮುಖ ಪಾತ್ರ ವಹಿಸಲಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಎಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಅವರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ಮಾಸಿಕ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ಟೋಬರ್ ಮಾಹೆಯಲ್ಲಿ ಕುಂದಾಪುರ ತಾಲೂಕಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ 21379 ಫಲಾನುಭವಿಗಳಿಗೆ 138104000, ಗೃಹಜ್ಯೋತಿಯಲ್ಲಿ 4,50,32,520, ಅನ್ನಭಾಗ್ಯದಲ್ಲಿ 2,40,66,508, ಯುವ ನಿಧಿಯಲ್ಲಿ 2079000, ಶಕ್ತಿ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 8,97,985 ಜನ ಮಹಿಳೆಯರು ಪ್ರಯಾಣ ಮಾಡಿದ್ದು ರೂ.3,59,32,987 ಪ್ರಯೋಜನ ಲಭಿಸಿದೆ. ಒಟ್ಟು ಪಂಚಗ್ಯಾರಂಟಿ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 24,52,15,015 ಬಂದಿದ್ದು, 2024 ಅಕ್ಟೋಬರ್ ಮಾಹೆಯಿಂದ ಇಲ್ಲಿಯ ತನಕ ಕುಂದಾಪುರ ತಾಲೂಕಿಗೆ ಪಂಚಗ್ಯಾರಂಟಿ ಯೋಜನೆಯಲ್ಲಿ ರೂ.6,74,85,08,451 ಅನುದಾನ ಬಂದಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ರಾಜ್ಯದಲ್ಲಿ ಯಾರಿಗೂ ಬಂದಿಲ್ಲ ಎಂದರು ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿ ಮಾಹಿತಿ ನೀಡಿದರು.

ಗೃಹಲಕ್ಷ್ಮೀ ಪರಿಷ್ಕರಣೆ ಸಂದರ್ಭ ಫಲಾನುಭವಿಯ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಫಲಾನುಭವಿಯ ಹೆಸರಿಲ್ಲಿಯೇ ಇರಬೇಕು ಎನ್ನುವ ಸುದ್ದಿ ಹರಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಮಂಜು ಕೊಠಾರಿ, ವಸುಂಧರ ಹೆಗ್ಡೆ ಮನವಿ ಮಾಡಿದರು. ಈ ಕುರಿತಂತೆ ಯಾವುದೇ ಸುತ್ತೋಲೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಸರಕಾರ ಕೂಡಾ ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ, ಪರಿಷ್ಕರಣೆಯ ಸಂದರ್ಭದಲ್ಲಿಯೂ ಕೂಡಾ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ಅಧ್ಯಕ್ಷರಾದ ಎಚ್.ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮೊಬೈಲ್ ಮೂಲಕ ಬಿಲ್ ಪಾವತಿಸಿದಾಗ ಯ್ಯಪ್ ನಲ್ಲಿನ ಗೊಂದಲದ ಬಗ್ಗೆ ಚಂದ್ರ ಕಾಂಚನ್ ಸಭೆಯ ಗಮನ ಸಳೆದರು. ಲೈನ್ ಮ್ಯಾನ್‍ಗಳ ವರ್ಗಾವಣೆಯಾಗಿದ್ದು, ಖಾಲಿ ಇರುವ ಸ್ಥಳಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಸೇವೆ ಒದಗಿಸುತ್ತಿದ್ದರೂ ಕೂಡಾ ಖಾಯಂ ನೆಲೆಯಲ್ಲಿ ಲೈನ್ ಮ್ಯಾನ್‍ಗಳನ್ನು ಒದಗಿಸುವಂತೆ ಗ್ಯಾರಂಟಿ ಸಮಿತಿ ಸದಸ್ಯರು ಒತ್ತಾಯಿಸಿದರು. ಅಭಿಜಿತ್ ಪೂಜಾರಿ ಧ್ವನಿಗೂಡಿಸಿದರು.

ಗ್ರಾಮ ಒನ್ ಕೇಂದ್ರವರು ಗ್ರಾಮ ಸಭೆಯಲ್ಲಿ ಸರಕಾರಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳಲು ಅಧಿಕಾರವಿದೆಯೇ? ಎಂದು ಗ್ಯಾರಂಟಿ ಸಮಿತಿ ಸದಸ್ಯ ವಸುಂಧರ ಹೆಗ್ಡೆ ಪ್ರಶ್ನಿಸಿದರು. ಗ್ರಾಮಸಭೆಯೊಂದರಲ್ಲಿ ಗ್ರಾಮ ಒನ್ ಕೇಂದ್ರದವರು ಸರಕಾರಿ ಅಧಿಕಾರಿಯನ್ನೇ ಪ್ರಶ್ನಿಸುತ್ತಿರುವುದನ್ನು ಗಮನಿಸಿದ್ದೇನೆ ಎಂದು ಅವರು ಹೇಳಿದರು.

ಗ್ಯಾರಂಟಿ ಸಮಿತಿ ಸದಸ್ಯರನ್ನು ಗ್ರಾಮ ಸಭೆ, ಪ್ರಜಾಸೇವಾ ಅಂದೋಲನ ಸಭೆಯಲ್ಲಿ ಕನಿಷ್ಠ ಗುರುತಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಪಂಚಾಯತ್ ಮಟ್ಟದಲ್ಲಿ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಚಂದ್ರ ಕಾಂಚನ್ ಆಗ್ರಹಿಸಿದರು. ಮಂಜು ಕೊಠಾರಿ, ವಾಣಿ ಆರ್.ಶೆಟ್ಟಿ ಧ್ವನಿಗೂಡಿಸಿದರು.

ಸಮಿತಿ ಕಾರ್ಯದರ್ಶಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ ಜಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗೆ ತಲಾ ಆರು ಜನರನ್ನು ಆಯ್ಕೆ ಮಾಡಲಾಗಿದೆ. ಕೆಲವರು ಈ ಬಗ್ಗೆ ನಾವು ಕೇಳಿದ ಮಾಹಿತಿ ನೀಡಲಿಲ್ಲ. ಮಾಹಿತಿ ಒದಗಿಸಿದವರ ಗುರುತು ಚೀಟಿ ಸಿದ್ಧವಾಗಿದೆ. ಸಮಾವೇಶದ ಒಳಗೆ ಹಂಚಿಕೆ ಮಾಡಲಾಗುವುದು ಎಂದರು.

ಗ್ರಾಮ ಸಮಿತಿಗೆ ಇಷ್ಟ ಇಲ್ಲದವರನ್ನು ಏಕೆ ಸೇರಿಸಿಕೊಳ್ಳುತ್ತಿರಿ? ಬೇರೆಯವರನ್ನು ಆಯ್ಕೆ ಮಾಡಿ ಎಂದು ತಾ.ಗ್ಯಾರಂಟಿ ಸಮಿತಿ ಸದಸ್ಯ ಗಣೇಶ ವಿ ಪ್ರಶ್ನಿಸಿದರು.

ಕುಂದಾಪುರ-ಕೆರಾಡಿ ಕೆ.ಎಸ್.ಆರ್.ಟಿಸಿ ಬಸ್ ದಿನಕ್ಕೆ ಟ್ರಿಪ್ ಮಾಡುತ್ತಿದೆ. ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಲಕ್ಕೆ ಬಸ್ ಸೌಕರ್ಯವೇ ಇಲ್ಲ. ಬೆಳ್ಳಾಲ ಗ್ರಾಮದವರು ಕೆರಾಡಿ ಪಂಚಾಯತ್ ಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಹಾಗಾಗಿ ಎರಡು ಟ್ರಿಪ್ ಬೆಳ್ಳಾಲ ಕೆರಾಡಿ ಮೂಲಕ ಸಂಚರಿಸಿದರೆ ಅನುಕೂಲವಾಗುತ್ತದೆ. ಎರಡು ಮಾರ್ಗ ಕೂಡಾ ಕುಂದಾಪುರಕ್ಕೆ 32 ಕಿ.ಮೀ ಆಗುತ್ತಿದೆ ಎಂದು ಸದಸ್ಯ ಮಂಜು ಕೊಠಾರಿ ವಿನಂತಿಸಿದರು.

ಜಡ್ಡಿನಗದ್ದೆ ಅಮಾಸೆಬೈಲು ಬಸ್ ಸಂಚಾರ ನಿರಂತರತೆ ಬಗ್ಗೆ ವಸುಂಧರ ಹೆಗ್ಡೆ ಸಭೆಯ ಗಮನ ಸಳೆದರು. ಶಕ್ತಿ ಯೋಜನೆಯಲ್ಲಿ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿ ತೋರಿಸಿದರೆ ಕೆಲವು ನಿರ್ವಹಕರು ಒಪ್ಪುವುದಿಲ್ಲ ಎಂದು ಆಶಾ ಕರ್ವಾಲ್ಲೋ ಹೇಳಿದರು. ಈ ಕುರಿತ ಚರ್ಚೆಯಲ್ಲಿ ವಾಣಿ ಆರ್. ಶೆಟ್ಟಿ ಸವಿತಾ ಪೂಜಾರಿ ವಿಷಯ ಸಭೆಯ ಮುಂದಿಟ್ಟರು. ಜಹೀರ್ ಆಹಮ್ಮದ್ ಗಂಗೊಳ್ಳಿ-ಬೈಂದೂರು ಬಸ್ ಸಂಚಾರದ ಬಗ್ಗೆ ಮತ್ತೆ ಅಧಿಕಾರಿಗಳ ಗಮನ ಸಳೆದರು. ನಾರಾಯಣ ಆಚಾರ್ ಕೋಣಿ ಸಂಚಾರ ಸುರಕ್ಷತೆ ವಿಚಾರದಲ್ಲಿ ಘಟನೆಯೊಂದನ್ನು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಈ ಸಾಲಿನ ಶಿವರಾಮ ಕಾರಂತ ಪುರಸ್ಕಾರ ಪುರಸ್ಕøತರಾದ ಸಮಿತಿ ಸದಸ್ಯರಾದ ಗಣೇಶ ವಿ ಅವರನ್ನು ಗ್ಯಾರಂಟಿ ಅನುಷ್ಟಾನ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!