spot_img
Tuesday, April 28, 2026
spot_img

ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ನೂತನ ಪದಾಧಿಕಾರಿಗಳ ಪದಗ್ರಹಣ


ಕುಂದಾಪುರ: ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹೆಮ್ಮಾಡಿ ಹೋಟೆಲ್ ಜ್ಯೂವೆಲ್ ಪಾರ್ಕ್ ನಲ್ಲಿ ನಡೆಯಿತು.

ನಿಕಟಪೂರ್ವ ಅಧ್ಯಕ್ಷರಾದ ನಾಗೇಶ್ ಪೂಜಾರಿ ಸ್ವಾಗತಿಸಿದರು. ಪದಗ್ರಹಣ ಅಧಿಕಾರಿ ಮಾಜಿ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ್ ಶೆಟ್ಟಿ ಅವರನ್ನು ಸತೀಶ್ ಶೆಟ್ಟಿ ಸಭೆಗೆ ಪರಿಚಯಿಸಿದರು. ನೂತನ ಅಧ್ಯಕ್ಷರಾಗಿ ಗಣಪಯ್ಯ ಶೆಟ್ಟಿ ಬಾಳೆಮನೆ ಕಾರ್ಯದರ್ಶಿಯಾಗಿ ಸಂಜೀವ ಬಿಲ್ಲವ ಕೋಶಾಧಿಕಾರಿಯಾಗಿ ಶೇಖರ್ ಬಳೆಗಾರ ಅಧಿಕಾರ ಸ್ವೀಕರಿಸಿದರು.

ಸಭೆಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಏಕನಾಥ ಬೋಳಾರ್ ಕಾರ್ಯದರ್ಶಿ ಚಂದ್ರಶೇಖರ್ ವಲಯಾಧ್ಯಕ್ಷರಾದ ಲಯನ್ ಜಗದೀಶ್ ಶೆಟ್ಟಿ ಕುದ್ರುಕೊಡು ನಿಕಟಪೂರ್ವ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಕೋಶಾಧಿಕಾರಿ ಸುರೇಶ್ ಹಕ್ಲಾಡಿ ವೇದಿಕೆಯಲ್ಲಿದ್ದರು. ಇದೆ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಶಶಿಧರ್ ಶೆಟ್ಟಿ ಭಾರತಿ ಕೆ.ಶೆಟ್ಟಿ, ಪೂರ್ಣಿಮಾ s ಬಿಲ್ಲವ ಇವರುಗಳು ಲಯನ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸುಮಾರು ರೂ. 50,000 ಮಿಕ್ಕಿ ಸಮಾಜದ ಅಶಕ್ತರಿಗೆ , ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಯಿತು. 2022-23ರ ಸಾಲಿನಲ್ಲಿ ಶೈಕ್ಷಣಿಕವಾಗಿ ಸಾಧನೆ ಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಡಾ ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಸಂಜೀವ ಬಿಲ್ಲವ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!