spot_img
Monday, November 23, 2026
spot_img

ತಲ್ಲೂರು: ದೇವಾಡಿಗರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ  ಉದ್ಘಾಟನೆ

ಕುಂದಾಪುರ: ದೇವಾಡಿಗರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ತಲ್ಲೂರು ಇದರ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ನವಂಬರ್ ೨೨ರ ಭಾನುವಾರ ನಡೆಯಿತು.

ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದರ ಸದಸ್ಯರು ಹಾಗೂ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಪೀಠಾಧಿಪತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿ ಈ ಸೊಸೈಟಿ ಇದರ ಅಡಿಪಾಯವೇ ಸಹಕಾರ. ಈ ಸಹಕಾರ ತತ್ವವನ್ನು ಮೊದಲು ಜಗತ್ತಿಗೆ ಪರಿಚಯಿಸಿದವನೇ ಶ್ರೀ ಕೃಷ್ಣ ಪರಮಾತ್ಮ. ಪರಸ್ಪರ ಸೌಹಾರ್ದ ಸಹಕಾರಿ ತತ್ವ ನಮ್ಮಲ್ಲಿರಬೇಕು. ಸಮಾಜದಲ್ಲಿ ನಮ್ಮನ್ನು ನಾವು ಮೇಲೆತ್ತಬೇಕು ಹಾಗೆಯೇ ದೇವಾಡಿಗರ ಸಮಾಜವನ್ನು ಈ ಕೋ ಆಪರೇಟಿವ್ ಸೊಸೈಟಿಯ ಮೂಲಕ ಸಮಾಜವನ್ನು ಮೇಲೆತ್ತಬೇಕು ಎಂಬ ಸಂಕಲ್ಪವನ್ನು ಮಾಡಿರುವುದು ತುಂಬಾ ಸಂತಸದ ವಿಷಯ. ಸಮಾಜ ಸೊಸೈಟಿಯನ್ನು ಅಭಿವೃದ್ಧಿಯತ್ತ ನಡೆಸಿಕೊಂಡು ಹೋಗುತ್ತದೆಯೋ ಸೊಸೈಟಿ ಬೆಳೆಯುತ್ತದೆ ಹಾಗೆಯೇ ಸೊಸೈಟಿ ಬೆಳೆಯುತ್ತಿರುವಾಗಲೇ ಸಮಾಜ ಊರು ಬೆಳೆಯುತ್ತದೆ ಇಂತಹ ಸೌಹಾರ್ದ ಸಹಕಾರ ಅಡಿಪಾಯ ನಿಂತಿದೆ ಇಂತಹ ಚ್ಯುತಿ ಬಾರದಂತೆ ಎರಡು ಕಡೆ ನಡೆದುಕೊಂಡು ಹೋದರೆ ಸೊಸೈಟಿ ಉತ್ತುಂಗಕ್ಕೆ ಏರಲು ಸಾಧ್ಯ. ಈ ಸೊಸೈಟಿ ತಲೆಯೆತ್ತಿ ನಿಲ್ಲಲಿ ಎಂದು ಶುಭ ಹಾರೈಸಿದರು.

ಬೆಂಗಳೂರಿನ ಉದ್ಯಮಿಗಳಾದ ರಮೇಶ್ ದೇವಾಡಿಗ ವಂಡ್ಸೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ರಿ. ಅಧ್ಯಕ್ಷರಾದ ಅಣ್ಣಯ್ಯ ಶೇರಿಗಾರ ಬಾರ್ಕೂರು ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಎಲ್ ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟ್ ಉದ್ಯಮಿಗಳಾದ ನಾಗರಾಜ ಡಿ ಪಡುಕೋಣೆ ಗಣಕಯಂತ್ರ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಇದರ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಇವರು ಸ್ವಸಹಾಯ ಗುಂಪು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಶಂಕರ ಅಂಕದಕಟ್ಟೆ, ಕುಂದಾಪುರ ವಕೀಲರಾದ ರಾಜಕುಮಾರ್ ನೆಂಪು, ವಂಡ್ಸೆ ಕಂದಾಯ ನಿರೀಕ್ಷಕರಾದ ರಾಘವೇಂದ್ರ ದೇವಾಡಿಗ ಹೊಸ್ಕಳಿ, ತಲ್ಲೂರು ಎಸ್ ಎಸ್ ಕಾಂಪ್ಲೆಕ್ಸ್ ಮಾಲಕರಾದ ಸುಧಾಕರ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ, ಉಪಾಧ್ಯಕ್ಷರಾದ ಕಿರಣ ದೇವಾಡಿಗ ಹಾಗೂ ನಿರ್ದೇಶಕರಾದ ನಾಗೇಶ ದೇವಾಡಿಗ ಉಪ್ಪಿನಕುದ್ರು, ಸತೀಶ ದೇವಾಡಿಗ ಹಟ್ಟಿ ಅಂಗಡಿ, ಮಹೇಶ ದೇವಾಡಿಗ ಹಟ್ಟಿಯಂಗಡಿ, ಸುರೇಶ ದೇವಾಡಿಗ ತಲ್ಲೂರು, ನಾಗರಾಜ ದೇವಾಡಿಗ ಕಾವ್ರಾಡಿ, ಜಗನ್ನಾಥ ದೇವಾಡಿಗ ಜಾಲಾಡಿ, ನಾಗೇಶ ದೇವಾಡಿಗ ಬಾಡಬೆಟ್ಟು, ದಿನೇಶ ದೇವಾಡಿಗ ತಲ್ಲೂರು, ಮಹೇಂದ್ರ ದೇವಾಡಿಗ ಹೆಮ್ಮಾಡಿ, ಜ್ಯೋತಿ ದೇವಾಡಿಗ ನೇರಳಕಟ್ಟೆ ಶೋಭಾ ದೇವಾಡಿಗ ಗುಡ್ರಿ ಹಾಗೂ ಕಿರಣ ದೇವಾಡಿಗ ಮುಖ್ಯ ಕಾರ್ಯನಿರ್ವನಾಧಿಕಾರಿ ಕಿರಣ ದೇವಾಡಿಗ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಶ್ರೇಯ ಪ್ರಾರ್ಥನೆಗೆದರು. ಕಿರಣ್ ದೇವಾಡಿಗ ಸ್ವಾಗತಿಸಿ, ರವಿ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!