Sunday, September 8, 2024

ಗಾಣಿಗ ಪ್ರತಿಷ್ಟಾನ ಬೈಂದೂರು ವತಿಯಿಂದ ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ


ಬೈಂದೂರು, ಜು. 29: ಗಾಣಿಗ ಪ್ರತಿಷ್ಠಾನ ರಿ., ಬೈಂದೂರು ವತಿಯಿಂದ ಸಮಾಜದ ಆಸಕ್ತ ಮಹಿಳೆಯರಿಗೆ ಬೈಂದೂರಿನಲ್ಲಿ ಉಚಿತ ಹೊಲಿಗೆ ತರಬೇತಿ ಕೇಂದ್ರವನ್ನು ಜು.29ರಂದು ಉದ್ಘಾಟಿಸಲಾಯಿತು.

ಉಚಿತ ಹೊಲಿಗೆ ತರಬೇತಿಯನ್ನು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು, ಉದ್ಯಮಿ ಸುಧೀರ್ ಪಂಡಿತ್ ಉದ್ಘಾಟಿಸಿ ಹೊಲಿಗೆ ಕಲಿಯುವುದರಿಂದ ಸ್ವ ಉದ್ಯೋಗ ಸ್ಥಾಪಿಸಬಹುದು. ಸಾಕಷ್ಟು ಬೇಡಿಕೆ ಕೂಡಾ ಇದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ಈ ತರಬೇತಿ ಕೇಂದ್ರ ಒಂದು ಹೊಲಿಗೆ ಯಂತ್ರವನ್ನು ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೈಂದೂರು ಗಾಣಿಗ ಪ್ರತಿಷ್ಟಾನದ ಅಧ್ಯಕ್ಷರು, ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಗಾಣಿಗ ಕೊಲ್ಲೂರು ಮಾತನಾಡಿ, ಗಾಣಿಗ ಪ್ರತಿಷ್ಟಾನದ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ಉಚಿತ ಹೊಲಿಗೆ ತರಬೇತಿಯನ್ನು ಆರಂಭಿಸಲಾಗುತ್ತದೆ. ಆರು ತಿಂಗಳ ತರಬೇತಿ ಪಡೆದು ಸ್ವ ಉದ್ಯೋಗ ಆರಂಭಿಸುವವರಿಗೆ ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು. ತರಬೇತಿ ಪಡೆದವರು ಇನ್ನಷ್ಟು ಆಸಕ್ತರಿಗೆ ಕಲಿಸುವುದುರ ಮೂಲಕ ಸ್ವಾಲಂಬನೆಗೆ ಒತ್ತು ನೀಡಬೇಕು ಎಂದರು.

ಗಾಣಿಗ ಪ್ರತಿಷ್ಟಾನದಿಂದ ಕಂಪ್ಯೂಟರ್ ತರಬೇತಿ, ಯಕ್ಷಗಾನ ತರಬೇತಿ, ಭಜನಾ ತರಬೇತಿ ನೀಡುವ ಬಗ್ಗೆ ಚಿಂತನೆಗಳಿವೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಆರಂಭಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀಧರ ಎಸ್.ವಿ.ಎಮ್.ಎಸ್, ಪುಟ್ಟಯ್ಯ ಗಾಣಿಗ, ಗೋಪಿನಾಥ ದೇವಸ್ಥಾನ ಬೈಂದೂರು ಇದರ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಸೀತರಾಮ ಗಾಣಿಗ, ಕೋಶಾಧಿಕಾರಿ ರಾಜು ಗಾಣಿಗ, ಹಿರಿಯ ಸಲಹೆಗಾರರಾದ ಚಿಕ್ಕಯ್ಯ ಗಾಣಿಗ, ಕಾರ್ಯದರ್ಶಿ ನಾಗರಾಜ ಗಾಣಿಗ, ಗಾಣಿಗ ಪ್ರತಿಷ್ಠಾನದ ನಿರ್ದೇಶಕಿ ಪ್ರೇಮಾ, ಪ್ರತಿಷ್ಠಾನದ ನಿರ್ದೇಶಕ ಗಣಪತಿ, ಕೊಡಚಾದ್ರಿ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಗಾಣಿಗ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೊಲಿಗೆ ತರಬೇತಿದಾರರು ಹಾಗೂ ಪ್ರತಿಷ್ಠಾನದ ನಿರ್ದೇಶಕರಾದ ಸುಬ್ಭಣ್ಣ ಗಾಣಿಗರನ್ನು ಸನ್ಮಾನಿಸಲಾಯಿತು. ನಾಗರಾಜ ಗಾಣಿಗ ಸ್ವಾಗತಿಸಿದರು. ಗಣಪತಿ ಗಾಣಿಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!