spot_img
Tuesday, April 28, 2026
spot_img

ಕೋಟ ವಿವೇಕ ಪದವಿಪೂರ್ವ ಕಾಲೇಜು: ವಿದ್ಯಾರ್ಥಿ ಸರಕಾರ ಉದ್ಘಾಟನೆ


ಕೋಟ: ಒಂದು ದೇಶದ ಸಂಸತ್ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಗುಲವೇ ಆಗಿರುತ್ತದೆ. ಇಲ್ಲಿ ತೆಗೆದು ಕೊಳ್ಳುವ ನಿರ್ಣಯಗಳು ಆ ದೇಶವನ್ನು ಪ್ರಗತಿ ಪಥದತ್ತ ಸಾಗಿಸಲು ಸಹಕಾರಿಯಾಗುತ್ತದೆ. ಹೀಗೆ ಶಾಲಾ ಎಂಬ ವಿದ್ಯಾದೇಗುಲದಲ್ಲಿ ಶಾಲಾ ಸಂಸತ್ ಅಥವಾ ವಿದ್ಯಾರ್ಥಿ ಸರಕಾರ ಎನ್ನುವುದು ಬಹು ಮುಖ್ಯ ಪಾತ್ರವನ್ನು ಪಡೆಯುತ್ತದೆ. ಶಾಲಾ ವಾತಾವರಣದಲ್ಲಿ ವಿದ್ಯಾರ್ಥಿಗಳ ಎಲ್ಲಾ ಕಾರ್ಯ ಚಟುವಟಿಕೆಗಳು ಸಸೂತ್ರವಾಗಿ ನಡೆಯಲು ಈ ಸಂಸತ್ ತುಂಬಾ ಸಹಕಾರಿ. ಹಾಗೆಯೇ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ, ಶಿಸ್ತು ಬದ್ಧವಾದ ಕಾರ್ಯವನ್ನು ನಿರ್ಣಯಗಳನ್ನು ತೆಗೆದುಕೊಳ್ಳುವ ಗುಣಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದುಮಂಜುನಾಥ ಎಸ್.ಕೆ., ವಕೀಲರು, ನೋಟರಿ, ಸಾಲಿಗ್ರಾಮ ಇವರು ತಿಳಿಸಿದರು.

ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಕರ್ತವ್ಯ, ಜವಾಬ್ದಾರಿ ನಿರ್ವಹಿಸಬೇಕೆಂದು ತಿಳಿಸಿದರು.

ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ವೆಂಕಟೇಶ ಉಡುಪರು ಶುಭಾಶಂಸನೆಗೈದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಮಂತ್ರಿ ಮಂಡಲದ ಎಲ್ಲಾ ಸಚಿವರಿಗೆ ಪ್ರಾಂಶುಪಾಲರು ಪ್ರಮಾಣ ವಚನ ಬೋಧಿಸಿದರು. ವಾಕ್ಪತಿಯಾಗಿ ವಿದ್ಯಾರ್ಥಿನಿ ಕುಮಾರಿ ಲಾವಣ್ಯ, ಉಪವಾಕ್ಪತಿಯಾಗಿ ನಾದೇಶ ಉಪಾಧ್ಯ ಆಯ್ಕೆಯಾದರು.
ವಿದ್ಯಾರ್ಥಿ ಸರಕಾರದ ಮುಖ್ಯಮಂತ್ರಿ ಶರಣ್ ಯು. ಸ್ವಾಗತಿಸಿದರು, ಉಪಮುಖ್ಯಮಂತ್ರಿ ಪಂಕಜ್ ವಂದಿಸಿದರು. ಕುಮಾರಿ ಶ್ರೀಜನ್ಯ ಅಡಿಗ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕ ಗಣೇಶ್‌ಕುಮಾರ್ ಶೆಟ್ಟಿ ಮತ್ತು ಶ್ರೀಮತಿ ರತಿ ಬಾ ಸಹಕರಿಸಿದರು. ಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!