spot_img
Sunday, June 14, 2026
spot_img

ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವಳ: ಪ್ರತಿಷ್ಠಾ ವರ್ಧಂತಿ

ಕುಂದಾಪುರ : ಪುರಾಣಗಳಲ್ಲಿ ಲವಣಪುರ ಎಂದು ಉಲ್ಲೇಖಿಸಲ್ಪಟ್ಟ ಪ್ರಸಿದ್ಧ ವಿನಾಯಕ ಪುಣ್ಯಕ್ಷೇತ್ರ ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವವು ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಉತ್ಸವದಂಗವಾಗಿ ಚಂಡಿಕಾ ಯಾಗವನ್ನು ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ  ಅವನೀಶ ಹೊಳ್ಳ – ಪದ್ಮಲತಾ ದಂಪತಿ ಯಾಜಕರಾಗಿ ಯಾಗ ನೆರವೇರಿಸಿದರು. ವೇದಮೂರ್ತಿಗಳಾದ ಪರಮೇಶ್ವರ ಭಟ್, ಅನಿಲ್ ಭಟ್, ವಿವೇಕ ಹೆಗಡೆ,  ವಿಘನೇಶ್ ಭಟ್, ಸುಮುಖ ಭಾರಧ್ವಾಜ್, ವಿನಾಯಕ ಭಟ್ ಇನ್ನಿತರರು ಧಾರ್ಮಿಕ ಕಾರ್ಯಗಳಲ್ಲಿ ಸಹಕರಿಸಿದರು.

ಯಾಗ ಪೂರ್ಣಾಹುತಿ ನಂತರ ಶ್ರೀ ಸಿದ್ಧಿ ವಿನಾಯಕ ದೇವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ರಾತ್ರಿ ರಂಗಪುಜಾ ಉತ್ಸವ ನಡೆಯಿತು.

ದೇವಳ ಆಡಳಿತ ಮಂಡಳಿ ಅಧ್ಯಕ್ಷ ಬಿ. ನಾಗೇಶ್ ಶ್ಯಾನುಭಾಗ,  ಸದಸ್ಯರಾದ ಪಿ. ಪ್ರಭಾಕರ ಮಧ್ಯಸ್ಥ,  ಯು. ವೆಂಕಟರಮಣ ಹೊಳ್ಳ, ಅಮ್ಮಯ್ಯ ದೇವಾಡಿಗ, ಚಂದ್ರ, ಶಾರದಾ, ಪ್ರೇಮಲತಾ ಉಪಸ್ಥಿತರಿದ್ದು ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!