spot_img
Monday, April 27, 2026
spot_img

ಕುಂದಾಪುರ ವಿಧಾನಸಭಾ ಕ್ಷೇತ್ರ: ಚುನಾವಣೆಗೆ ಸರ್ವ ಸನ್ನದ್ಧ


ಕುಂದಾಪುರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಕುಂದಾಪುರ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಮೇ.10ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಮತದಾರರು ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ಅನುಮೋದಿಸಿದ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಚುನಾವಣಾಧಿಕಾರಿ, ಸಹಾಯಕ ಆಯುಕ್ತರಾದ ರಶ್ಮಿ ಅವರು ತಿಳಿಸಿದರು.

ಅವರು ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 209592 ಮತದಾರರಿದ್ದಾರೆ. ಒಟ್ಟು 222 ಮತಗಟ್ಟೆಗಳಿವೆ. ಇದರಲ್ಲಿ 38 ನಗರ ಪ್ರದೇಶ, 184 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ. ಈ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಅಧ್ಯಕ್ಷಾಧಿಕಾರಿ 222+45, ಸಹಾಯಕ ಅಧ್ಯಕ್ಷಾಧಿಕಾರಿ 222+45, 3 ಮತ್ತು 4 ಮತಗಟ್ಟೆ ಅಧಿಕಾರಿ 444+90, ಡಿ ದರ್ಜೆ ನೌಕರರು 222, ಮೈಕ್ರೋ ಅಬ್ಸಾವೇರ್ 21, ನಿಯೋಜನೆ ಮಾಡಲಾಗಿದೆ.

80+ ಮತ್ತು ವಿಕಲ ಚೇತನ ಮತದಾರರಿಗೆ ಅಂಚೆಮತ ಪತ್ರಗಳ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟವರು 852 ಮಂದಿ ಇದ್ದು 832 ಮತ ಚಲಾವಣೆಯಾಗಿದೆ. ಪಿಡಬ್ಯೂಡಿ 139 ಅಪೇಕ್ಷೆ ಇದ್ದು 136 ಮತ ಚಲಾವಣೆಯಾಗಿದೆ ಎಂದರು.

ಈ ಸಾಲಿನ ಚುನಾವಣೆಗಾಗಿ ಮಹಿಳಾ ಮತಗಟ್ಟೆಯ ಅಧಿಕಾರಿಗಳಿಂದ ನಡೆಸುವ ಸಖೀ ಮತಗಟ್ಟೆ, ವಿಶೇಷ ಚೇತನ ಅಧಿಕಾರಿಗಳಿಂದ ನಡೆಸಲಾಗುವ ಪಿಡಬ್ಯೂಡಿ ಮತಗಟ್ಟೆ, ಹಾಗೂ ethinc ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆ ಸಂಖ್ಯೆ ೬೭, ೬೮ ಸರಕಾರಿ ಹಿ.ಪ್ರಾ.ಶಾಲೆ ಕಾಳಾವರ ಪೂರ್ವಭಾಗ, ಪಶ್ಚಿಮ ಭಾಗ ಹಾಗೂ ಮತಗಟ್ಟೆ ಸಂಖ್ಯೆ ೨೦೧ರಿಂದ ೨೦೩ ನ್ಯಾಶನಲ್ ಜೂನಿಯರ್ ಕಾಲೇಜು ಬಾರ್ಕೂರು ಪೂರ್ವಭಾಗ, ದಕ್ಷಿಣ ಭಾಗ, ಪಶ್ಚಿಮ ಭಾಗ ಸಖೀ ಮತಗಟ್ಟೆಗಳಾಗಿವೆ. ಮತಗಟ್ಟೆ ಸಂಖ್ಯೆ ೬೨ ಸ.ಹಿ.ಪ್ರಾ,ಶಾಲೆ ಉಳ್ಳೂರು ಕಂದಾವರ ಪಿಡಬ್ಯೂಡಿ ಮತಗಟ್ಟೆ, ಮತಗಟ್ಟೆ ಸಂಖ್ಯೆ ೩೯ ಸ.ಪ.ಪೂಕಾಲೇಜು ಕೋಟೇಶ್ವರ ಹಳೆ ಕಟ್ಟಡದ ಉತ್ತರ ಭಾಗ ಯುವ ಮತದಾರರ ಬೂತ್, ಮತಗಟ್ಟೆ ಸಂಖ್ಯೆ ೪೦ ಸ.ಪ.ಪೂ.ಕಾಲೇಜು ಕೋಟೇಶ್ವರ ಥೀಮ್ ಬೇಸ್ಡ್ ಬೂತ್, ಮತಗಟ್ಟೆ ಸಂಖ್ಯೆ ೧೦೩ ಸ.ಹಿ,ಪ್ರಾ.ಶಾಲೆ ಸೌಡ ethinc ಮತಗಟ್ಟೆ.

ಚುನಾವಣೆಯ ಕರ್ತವ್ಯದಲ್ಲಿ ಭಾಗವಹಿಸುವ ಅಧಿಕಾರಿಗಳು ಮತದಾನ ಕೇಂದ್ರಕ್ಕೆ ತೆರಳಲು ಹಾಗೂ ಮರಳಿ ಬರಲು ಬಸ್ಸು ೩೨, ಮಿನಿಬಸ್ಸು ೮, ಟೆಂಪೋ ಟ್ರಾವೆಲ್ಲರ್, ಮ್ಯಾಕ್ಸಿಕ್ಯಾಬ್ ವ್ಯಾನ್ ೧೨, ಜೀಪ್ ೧೧ ವ್ಯವಸ್ಥೆ ಮಾಡಲಾಗಿದ್ದು ಜಿಪಿ‌ಎಸ್ ಅಳವಡಿಸಲಾಗಿದೆ.
ಮೇ ೯ರಂದು ಕುಂದಾಪುರದ ಭಂಡಾಕಾರ್ಸ್ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ನಡೆಯಲಿದೆ. ಮತ ಎಣಿಕೆ ಉಡುಪಿಯ ಸೈಂಟ್ ಸಿಸಿಲಿಯಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದರು.

ಸುದ್ಧಿಗೋಷ್ಟಿಯಲ್ಲಿ ತಹಶೀಲ್ದಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!