Friday, March 29, 2024

ಅಮೃತ ಸಮಾನ ಪಾನೀಯ ಎಳನೀರು :ನಿಮಗಿದು ತಿಳಿದಿರಲೇ ಬೇಕು…

 

ಬಿಸಿಲಿನ ಬೇಗೆಗೆ, ದೇಹದ ದಣಿವಿನ ಪರಿಹಾರಕ್ಕೆ, ಪ್ರಾಕೃತಿಕವಾಗಿ ದೊರೆಯುವ ಅಮೃತ ಸಮಾನ ಪಾನೀಯವೆಂದರೆ ‘ಸಿಯಾಳ’.

ಎಳನೀರನ್ನು ವೈದ್ಯರೆಲ್ಲರೂ ಹಲವಾರು ದೇಹದ ತೊಂದರೆಗಳಲ್ಲಿ ಯಥೇಚ್ಛ ಸೇವಿಸಲು ಪ್ರೋತ್ಸಾಹಿಸುತ್ತಾರೆ. ದೇಹ ನಿರ್ಜಲೀಕರಣಗೊಂಡ ಸ್ಥಿತಿಯಲ್ಲಿ ತಲೆತಿರುಗಿ ಕಣ್ಣು ಕತ್ತಲು ಬರುವುದು, ಮೈಯೆಲ್ಲ ಉರಿ, ಅತಿಬೆವರು ಕೈ ಕಾಲುಗಳಲ್ಲಿ ದಣಿವು, ಜ್ವರ, ಗೋರದಂತಹ ಬೊಕ್ಕೆಗಳಾಗುವುದು, ಉರಿಮೂತ್ರ, ಮೂತ್ರದ ಸೋಂಕಿನ ಲಕ್ಷಣಗಳು, ಅರುಚಿ, ಹಸಿವಿಲ್ಲದಿರುವುದು, ಬಾಯಿಹಣ್ಣು ಚರ್ಮ ಒಣಗುವುದು, ಕೂದಲುದುರುವುದು, ಮಲಬದ್ದತೆ ಇವೆ ಮೊದಲಾದ ಲಕ್ಷಣಗಳು ಗೋಚರಿಸುತ್ತವೆ.

ದೇಹಕ್ಕೆ ಜೀವ ಜಲವನ್ನು ಪೊರೈಕೆ ಮಾಡುವ ಪಾನೀಯದಲ್ಲಿ ಎಳನೀರು ಅತಿಶ್ರೇಷ್ಠವಾದ ಕಲ್ಪವೃಕ್ಷವೆಂದು ಕರೆಯಲ್ಪಡುವ ತೆಂಗಿನ ಮರದ ಎಳೆಕಾಯಿಯ ಒಳಗಿನ ನೀರಿಗೆ ರಾಸಾಯನಿಕ ವಸ್ತುಗಳ ಕಲಬೆರಕೆ ಅಪ್ರಾಕೃತ ಬಣ್ಣ, ಸಕ್ಕರೆಯ  ಕಲಬೆರಕೆ ಮಾಡಲಾಗುದಿಲ್ಲ. ಬೇಸಿಗೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇದರ ಸೇವನೆ ಮಾಡಿ  Dehydration  ನ ತೊಂದರೆಗಳನ್ನು ದೂರ ಮಾಡಿಕೊಳ್ಳಬಹುದು.

ಆರ್ಯುವೇದ ‘ನಾರಿಕೇಲ’ ಬಲವನ್ನು ಸ್ನೇಹಾಂಶದಿಂದ ಕೂಡಿರುವ ಸಿಹಿದ್ರವ, ವಾತ, ಮತ್ತು ಪಿತ್ತದ ತೊಂದರೆಗಳನ್ನು ಪರಿಹರಿಸಿ ದೇಹವನ್ನು ತಂಪಾಗಿ ಇರಿಸುತ್ತದೆ. ಜೀರ್ಣಕ್ಕೆ ಸುಲಭವಾಗಿದೆ. ಬಾಯರಿಕೆ ಪರಿಹಾರ ಮಾಡುವುದಲ್ಲದೆ ಅಗ್ನಿ ದೀಪನ ಕಾರ್ಯ ಮಾಡಿ ಹಸಿವೆಯನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ದಿ ಮಾಡುತ್ತದೆ.

“ಬಸ್ತಿಶೋಧನ” ಅಂದರೆ ಮೂತ್ರಾಶಯ (bladder) ಅನ್ನು ಶುದ್ದಿಗೊಳಿಸಿ ಮೂತ್ರಕ್ಕೆ ಸಂಬಂದಪಟ್ಟ ಹಲವು ತೊಂದರೆಗಳನ್ನು ಪರಿಹರಿಸುತ್ತದೆ ಎಂದಿದೆ. ಬಾಲಕರು, ವೃದ್ದರು, ಗರ್ಭಿಣಿಯರು, ಸುಕುಮಾರರು ಕಣ್ಣು ಕೂದಲಿನ ಸಮಸ್ಯೆ ಉಳ್ಳವರು ಇದನ್ನು ಬಳಸಲು ಹೇಳಿದೆ.

ನಾರಿಕೇಲೋದಕಂ ಸ್ನಿಗ್ಧಂ ಸ್ವಾದು ಹಿಮಂ ಲಘು|

ತೃಷ್ಣಾ ಪಿತ್ತಾನಿಲಹರಂ ದೀಪನಂ ಬಸ್ತಿಶೋಧನಂ||

                           ( ಅ, ಹೃ, ಸೂ)

ವಾತಪಿತ್ತದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳಲ್ಲಿ ನಾರಿಕೇಲ ಜಲ ಪರಿಶೇಕ ಮಾಡಿ ಎಂದಿದ್ದಾರೆ. ಆಮ್ಲಪಿತ್ತ ( ಆಸಿಡಿಟಿ) ತೊಂದರೆಯಲ್ಲಿ ತೆಂಗಿನಕಾಯಿ ಸೈಂದವಲವಣದಿಂದ “ನಾರಿಕೇಲವಣ” ಎಂಬ ಔಷಧವನ್ನು ತಯಾರಿಸಿ ಸೇವಿಸಲು ಹೇಳಿದ್ದಾರೆ. ಹೆಂಗಸರ ಬಿಳಿಸ್ರಾವ, ಮಾಸಿಕ ಅತಿಸ್ರಾವದಲ್ಲಿ ನಾರಿಕೇಲದಿಂದ ರಸಾಯನ ತಯಾರಿಸಿ ಸೇವಿಸಲು ಪರಿಹಾರ ಸಿಗುತ್ತದೆ. ತೆಂಗಿನ ಹೂವಿನಿಂದ ತಯಾರಾದ “ಕೇರ ಪೂಕ್ಕುಲಾದಿ ರಸಾಯನ” ಸ್ತ್ರೀಯರ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ.

ಎಳನೀರು ಪ್ರಾಕೃತವಾಗಿ ಸಿಗುವ ಹೆಲ್ತ್‍ಡ್ರಿಂಕ್ಸ್ ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ಇತರ ಪೋಷಕಾಂಶಗಳನ್ನು ಅಂದರೆ ಕಾರ್ಬೋಹೈಡ್ರೆಟ್, ಪ್ರೋಟೀನ್, ಪೈಬರ್, ಪೋಟಸಿಯಂ ಸೋಡಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ವಿಟಮಿನ್ ‘ಸಿ’ ಯನ್ನು ಹೊಂದಿದೆ ಬೇರೆ ಬೇರೆ ಕಾರಣಗಳಿಂದ ಹಣವಿಲ್ಲ ಎಂದು ಹೇಳುವವರು ಘನ ಆಹಾರದ ಬದಲಿಗೆ ‘ಸಿಯಾಳ’ ಸೇವಿಸಿದರೆ ಶಕ್ತಿಯೊಂದಿಗೆ ಹಸಿವೆಯೂ ವೃದ್ದಿಯಾಗುತ್ತದೆ. ಹಾಗಾಗಿ ವಾಂತಿ, ಅತಿಸಾರ, ಟೈಪಾಡ್, ಜ್ವರ, ಗ್ಯಾಸ್ಟ್ರೆಟಿಸ್ ತೊಂದರೆಗಳಲ್ಲಿ ವೈದ್ಯರು ಎಳನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಕಿಡ್ನಿಗೆ ಸಂಬ0ದಿಸಿದ ಮೂತ್ರದ ಕಲ್ಲುಗಳಿಗೆ ಸಂಬಂಧಿಸಿದ ತೊಂದರೆಗಳಲ್ಲಿ ಇದು ಸಹಾಯ ಮಾಡುತ್ತದೆ. ‘arginine’ ಅಮೈನೊ ಆಸಿಡ್ ದೇಹದೆಲ್ಲೆಡೆ ರಕ್ತ ಸರಾಗವಾಗಿ ಸರಾಬರಾಜು ಆಗುವಂತೆ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಎಳನೀರನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿದರೆ ರಕ್ತವೃದ್ದಿಯಾಗಲು ಸಹಾಯವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ‘ಪೈಬರ್’ ಅಂಶ ಇರುವುದರಿಂದ ಜೀರ್ಣಕ್ರಿಯೆಯಲ್ಲಿ, ಮಲವಿಸರ್ಜನೆಯಲ್ಲಿ ಸಹಾಯವಾಗಿ ಮಲಬದ್ದತೆ ನಿವಾರಣೆ ಆಗುತ್ತದೆ ‘ಪೊಟಸಿಯಂ’ ಹೇರಳವಾಗಿರುವುದರಿಂದ ರಕ್ತದೊತ್ತಡ ಸಹಜವಾಗಿರುವಂತೆ ನೋಡಿಕೊಳ್ಳುತ್ತದೆ.

ಹೃದಯಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ.ಮಧುಮೇಹ ತೊಂದರೆ ಉಳ್ಳವರು ಸೋಪ್ಟ್ ಡ್ರಿಂಕ್ಸ್ ಕುಡಿಯುವ ಬದಲು ಎಳನೀರನ್ನು ಕುಡಿದರೆ ಅನೇಕ ಉಪಯೋಗಗಳು ಉಂಟಾಗುತ್ತದೆ. ಮೆದುಳು ಶಾಂತಗೊಂಡು ಒಳ್ಳೆಯ ನಿದ್ದೆ ಬರುತ್ತದೆ.

ಎಳನೀರು ಮರದಿಂದ ಕಿತ್ತು ತಕ್ಷಣ ಕುಡಿಯಬೇಕು ಹಲವಾರು ದಿನದಿಂದ ಸಂಗ್ರಹಿಸಿಟ್ಟ ಎಳನೀರನಲ್ಲಿ ಎಳನೀರನ್ನು ಸಂಗ್ರಹಿಸಿ ಅದರಿಂದ ತಯಾರಿಸಿದ

‘ಬಾಟಲಿ’ ಪಾನೀಯಗಳಲ್ಲಿ ಪೋಷಕಾಂಶಗಳು ನಶಿಸಿ ಹೋಗಿರುತ್ತದೆ. ಆರೋಗ್ಯಕ್ಕೆ ಲಾಭಕಾರವಾದ ಅಂಶಗಳಿರುವುದಿಲ್ಲ.

♦ಲೇಖನ: ಡಾ|ರೂಪಶ್ರೀ ಮರವಂತೆ

ಚೇತನಾ ಚಿಕಿತ್ಸಾಲಯ

ಎನ್.ಎಚ್.66, ಮರವಂತೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!