spot_img
Monday, April 27, 2026
spot_img

ಕೋಟೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮತದಾನ ಅರಿವು ಕಾರ್ಯಕ್ರಮ

ಪ್ರಜಾ ಪ್ರಭುತ್ವವೇ ಸಮಾಜದ ಜೀವಾಳ. ಮತದಾನವೇ ಪ್ರಜಾಪ್ರಭುತ್ವದ ಆಧಾರ ಮತ್ತು ನಮ್ಮ ಮತ ಯಾವತ್ತು ಮಾರಾಟಕ್ಕಿಲ್ಲ. ಇದೊಂದು ಪವಿತ್ರ ಕರ್ತವ್ಯ ನೆರವೇರಿಸಿ, ಮತದಾನ ಒಂದು ಪ್ರಬಲ ಅಸ್ತ್ರ ಅದನ್ನು ಚಲಾಯಿಸಿ ಎಂದು ಸಿಡ್ಲ್ಯೂಸಿ ಸಂಸ್ಥೆ ನಮ್ಮ ಭೂಮಿ ಇಲ್ಲಿನ ಶ್ರೀಮತಿ ಕೃಪಾ ಎಂ.ಎಂ., ಹೇಳಿದರು.

ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ: ಕೋಟೇಶ್ವರ ಇಲ್ಲಿ ಚುನಾವಣಾ ಸಾಕ್ಷರತ ಕ್ಲಬ್ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನಮ್ಮ ಭೂಮಿ ಸಂಸ್ಥೆಯ ಸುರೇಶ ಸುರೇಶ ವಿದ್ಯಾರ್ಥಿಗಳ ಜೊತೆಗೆ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೆಂದ್ರ ಎಸ್. ನಾಯಕ ವಹಿಸಿ, ಚುನಾವಣೆಯು ಪ್ರಜಾಪ್ರಭುತ್ವದ ಜೀವನಾಡಿ, ಇದೊಂದು ಬೃಹತ್ತರ ಸಾರ್ವಜನಿಕ ಚಟುವಟಿಕೆ. ಪ್ರತಿಯೊಂದು ಮನೆಯ 18ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯ ಸಹಭಾಗಿತ್ವ ಖಂಡಿತವಾಗಿಯೂ ಬೇಕು. ಜನರು ಮತದಾನ ಮಾಡುವ ಮೂಲಕ ತಮ್ಮ ಆಡಳಿತ ವ್ಯವಸ್ಥೆಯನ್ನು ತಾವೇ ರೂಪಿಸಿಕೊಳ್ಳುವ ಜನರ ಪ್ರಕ್ರಿಯೆಯಾಗಿದೆ. ಮತ ಮಾರಾಟಕ್ಕಲ್ಲ. ಮತದಾನ ನಮ್ಮ ಪವಿತ್ರ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಮರಾಯ ಆಚಾರ್ಯ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ನಾಗರಾಜ ವೈದ್ಯ ಇವರು ಉಪಸ್ಥಿತರಿದ್ದರು.

ಸ್ವರೂಪ, ದ್ವಿತೀಯ ಬಿ.ಎ. ಇವರು ಪ್ರಾರ್ಥಿಸಿದರು. ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ ಇವರು ಸ್ವಾಗತಿಸಿದರು. ಕುಮಾರಿ ಪವಿತ್ರಾ ದೇವಾಡಿಗ, ದ್ವಿತೀಯ ಬಿ.ಎ. ಇವರು ವಂದಿಸಿದರು. ಮತ್ತು ಕುಮಾರಿ ಸಿಂಚನಾ ತೃತೀಯ ಬಿ.ಎ. ಇವರು ಕಾರ್ಯಕ್ರಮವನ್ನು ಸಂಘಟಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!