spot_img
Friday, April 24, 2026
spot_img

ಬಗ್ವಾಡಿ: ಅಮ್ಮ ಸೇವಾ ವೇದಿಕೆ ನೇತೃತ್ವದಲ್ಲಿ ನಿರ್ಮಿಸಲಾದ ಮನೆ ಹಸ್ತಾಂತರ

ಕುಂದಾಪುರ: ಅಮ್ಮ ಸೇವಾ ವೇದಿಕೆಯ ನೇತೃತ್ವದಲ್ಲಿ ಬಗ್ವಾಡಿಯಲ್ಲಿ 98ವರ್ಷ ಪ್ರಾಯದ ವಯೋವೃದ್ದೆ ದೊಟ್ಟಮ್ಮ ಮೊಗವೀರ, ವಿಧವೆ ಲಕ್ಷ್ಮೀ ಮೊಗವೀರ ಹಾಗೂ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಇವರ ವಾಸಕ್ಕೆ ಮನೆ ನಿರ್ಮಾಣ ಮಾಡಿದ್ದು ಏಪ್ರಿಲ್ 6 ಗುರುವಾರ ನಾಡೋಜ ಡಾ.ಜಿ.ಶಂಕರ್ ನೂತನ ಮನೆಯನ್ನು ದೊಟ್ಟಮ್ಮ ಮೊಗವೀರ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ.

2021ರ ಜುಲೈ ತಿಂಗಳಲ್ಲಿ ಯುವ ಯಕ್ಷಗಾನ ಕಲಾವಿದರಾಗಿದ್ದ ಸುಬ್ರಹ್ಮಣ್ಯ ಮೊಗವೀರ ಅವರ ಬೈಕ್‌ಗೆ ನಾಯಿ ಅಡ್ಡಬಂದು ಅಪಘಾತವಾಗುತ್ತದೆ. ಆಗ ಆ ಕುಟುಂಬ ತೀವ್ರ ಬಡತನದಿಂದ ಜೀವನ ನಡೆಸುತ್ತಿರುವುದು, ವಾಸಕ್ಕೆ ಯೋಗ್ಯ ಮನೆ ಇಲ್ಲದಿರುವುದು ಅಮ್ಮಾ ಸೇವಾ ವೇದಿಕೆಯ ಗಮನಕ್ಕೆ ಬರುತ್ತದೆ. ತಕ್ಷಣ ವೇದಿಕೆ ಸದಸ್ಯರು ಅಲ್ಲಿಗೆ ಭೇಟಿ ಮಾಡಿದಾಗ ಅಲ್ಲಿನ ಸ್ಥಿತಿ ಕಂಡು ವ್ಯಥೆ ಪಡುತ್ತಾರೆ. ಟಾರ್ಪಲ್ ಹೊದಿಕೆಯ ಸಣ್ಣ ಗುಡಿಸಲು, ವಯೋವೃದ್ದೆ ಅಜ್ಜಿ, ವಿಧವೆ ತಾಯಿ, ಯಾವುದೇ ಮೂಲ ಸೌಕರ್ಯಗಳಿಲ್ಲದೆ ಆ ಸೂರಿನಲ್ಲಿಯೇ ದಿನದೂಡುತ್ತಿದ್ದ ಕುಟುಂಬದ ವ್ಯಥೆಯ ಸ್ಥಿತಿಯನ್ನು ಒಂದು ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡುವ ಸಂಕಲ್ಪ ಮಾಡುತ್ತಾರೆ.

ಒಂದು ಯಕ್ಷಗಾನ ಕಲಾವಿದ, ಇನ್ನೊಂದು ವಿಧವೆ ತಾಯಿ, ಮೂರನೆಯದು ವಯೋವೃದ್ದೆ ಅಜ್ಜಿ ಈ ಮೂರು ಅಂಶವನ್ನು ಆಧಾರವಾಗಿಟ್ಟುಕೊಂಡು ಗುಡಿಸಲು ಮನೆಯ ಹಿರಿಯ ಜೀವ ದೊಟ್ಟಮ್ಮನಿಗೊಂದು ಸುಸಜ್ಜಿತ ಸೂರು ನಿರ್ಮಾಣ ಮಾಡಿಕೊಡುವ ಅಮ್ಮ ವೇದಿಕೆಯ ಸಂಕಲ್ಪಕ್ಕೆ ಉತ್ತಮ ಸ್ಪಂದನೆ ಸಿಗುತ್ತದೆ. ಸುಬ್ರಹ್ಮಣ್ಯ ಮೊಗವೀರರಿಗೆ ನೆರವಿಗೆ ಬರುತ್ತಿರುವ ಸಹೃದಯಿಗಳ ಆರ್ಥಿಕ ನೆರವು, ಅಮ್ಮ ಸೇವಾ ವೇದಿಕೆಯ ಪುಣ್ಯ ಕಾರ್ಯಕ್ಕೆ ಸಾರ್ವಜನಿಕವಾಗಿ ದೊರಕಿದ ದೇಣಿಗೆಯನನು ಬಳಸಿಕೊಂಡು ಸುಮಾರು ರೂ. 7.5ಲಕ್ಷ ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಮಾಡಿದೆ. ಈ ಸೇವಾಕಾರ್ಯದಲ್ಲಿ ತನು-ಮನ-ಧನ ಸಹಾಯ ನೀಡಿದ ಸಹೃದಯಿಗಳಿಗೆ ಹಾಗೂ ಪ್ರತ್ಯೇಕ್ಷವಾಗಿ, ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅಮ್ಮ ಸೇವಾ ವೇದಿಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದೆ.

ಏ.6ರಂದು ಜರುಗುವ ಬಗ್ವಾಡಿ ರಥೋತ್ಸವದ ಪುಣ್ಯಕಾಲದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಅವರ ಅಮೃತಹಸ್ತದಿಂದ ದೊಟ್ಟಮ್ಮ ಅವರಿಗೆ ಮನೆಯ ಕೀ ಹಸ್ತಾಂತರ ಮಾಡಲಿದ್ದು, ಈ ಸಂದರ್ಭದಲ್ಲಿ ಅಮ್ಮ ಸೇವಾ ವೇದಿಕೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಫಲಾನುಭವಿಗೆ ಶುಭ ಹಾರೈಸಬೇಕು ಎಂದು ಅಮ್ಮ ಸೇವಾ ವೇದಿಕೆಯ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಚಂದ್ರ ಮೊಗವೀರ ಕಂಡ್ಲೂರು, ಕೋಶಾಧಿಕಾರಿ ಜಗದೀಶ ಮಾರ್ಕೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!