spot_img
Wednesday, January 22, 2025
spot_img

ಮೊಗವೀರರ ಉಚಿತ ಸಾಮೂಹಿಕ ವಿವಾಹ: ಎ. 5ರಂದು ಕುಂದಾಪುರದಲ್ಲಿ ವೀಳ್ಯಶಾಸ್ತ್ರ, ವಧು ವರರಿಗೆ ಉಡುಗೆ ವಿತರಣೆ

ಕುಂದಾಪುರ: ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಮತ್ತು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೀಳ್ಯಶಾಸ್ತ್ರ ಮತ್ತು ವಧು-ವರರಿಗೆ ಉಡುಗೆ-ತೊಡುಗೆ ವಿತರಣೆ ಏಪ್ರಿಲ್ 5ರಂದು ಕುಂದಾಪುರದ ಚಿಕ್ಕನ್‌ಸಾಲ್ ರಸ್ತೆಯ ಮೊಗವೀರ ಭವನದಲ್ಲಿ ನಡೆಯಲಿದೆ.

ಈ ವರ್ಷ ಮೊಗವೀರ ಸಮಾಜ ಬಾಂಧವರ 20 ಜೋಡಿಗಳು ಹಸೆಮಣೆಗೆ ಏರಲಿದ್ದಾರೆ. ಸಮಾಜ ಬಾಂಧವರ ಸಹಕಾರದೊಂದಿಗೆ ವಧುವಿಗೆ ಕಾಲುಂಗುರ, ಸೀರೆ, ರವಿಕೆ ಕಣ, ವರನಿಗೆ ಕುರ್ತಾ, ಪೈಜಾಮ ಸಹಿತ ಉಡುಗೊರೆಯನ್ನು ಸಂಘಟನೆ ವತಿಯಿಂದ ಜೋಡಿಗಳಿಗೆ ನೀಡಲಾಗುವುದು. ವಧುವಿಗೆ ತಾಳಿ ಸರವನ್ನು ವಿವಾಹ ಸಂದರ್ಭದಲ್ಲಿ ಡಾ.ಜಿ. ಶಂಕರ್ ದಂಪತಿ, ಸಮಾಜ ಮುಖಂಡರು ಹಾಗೂ ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೀಡಲಾಗುತ್ತದೆ.

ಸಮಾಜದಲ್ಲಿ ನಡೆಯುತ್ತಿರುವ ವಿವಾಹ ಸಮಾರಂಭಗಳಲ್ಲಿ ಹೆಚ್ಚುತ್ತಿರುವ ದುಂದು ವೆಚ್ಚ ಆಡಂಬರಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುವ ನಿಟ್ಟಿನಲ್ಲಿ ಈ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಸಂಘಟನೆಯ ವತಿಯಿಂದ ವಿವಾಹ ನೋಂದಣಿಯನ್ನು ನಡೆಸಲಾಗುತ್ತದೆ. ಈ ಸಾಮೂಹಿಕ ವೀಳ್ಳಶಾಸ್ತ್ರ ಕಾರ್ಯಕ್ರಮದಲ್ಲಿ ನೂತನ ವಧು ವರರಿಗೆ ಡಾ.ಜಿ ಶಂಕರ್ ದಂಪತಿ ಮತ್ತು ಸಮಾಜದ ಪ್ರಮುಖ ಗಣ್ಯರ ಮೂಲಕ ಉಡುಗೆ ತೊಡುಗೆಗಳನ್ನು ವಿತರಿಸಲಾಗುವುದು ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!