spot_img
Friday, April 24, 2026
spot_img

ಬೈಂದೂರು ವಿಧಾನಸಭಾ ಕ್ಷೇತ್ರ: ಬಿಜೆಪಿ ಟಿಕೆಟ್ ಆಕಾಂಕ್ಷಿ ಪಟ್ಟಿಯಲ್ಲಿ ಸುಖಾನಂದ ಶೆಟ್ಟಿ

ಬೈಂದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಏರುತ್ತಲೆ ಇದೆ. ಇದೀಗ ಉದ್ಯಮಿ ಸುಖಾನಂದ ಶೆಟ್ಟಿ ಅವರ ಹೆಸರು ಮುನ್ನೆಲೆ ಬರುತ್ತಿದೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬೈಂದೂರಿನವರಾದ ಸುಖಾನಂದ ಶೆಟ್ಟಿಯವರು ಈ ಚುನಾವಣೆಯ ಟೆಕೆಟ್ ಅಕಾಂಕ್ಷಿ.

ಸುಖಾನಂದ ಶೆಟ್ಟಿಯವರು ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಕಳೆದ ಮೂರು ಅವಧಿಯ ಚುನಾವಣೆಗಳಲ್ಲಿಯೂ ಕೂಡಾ ಅವರು ಅಭ್ಯರ್ಥಿ ಅಕಾಂಕ್ಷಿಯಾಗಿದ್ದರು. ಪಕ್ಷ ಅವರನ್ನು ನಿರಾಸೆ ಮಾಡುತ್ತಲೇ ಬಂದಿದೆ.

2008, 2013, 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ಟೆಕೆಟ್ ಅಕಾಂಕ್ಷಿಯಾಗಿದ್ದರು. ಟಿಕೆಟ್ ಘೋಷಣೆಯ ಕೊನೆಯ ತನಕ ಅವರ ಹೆಸರು ಕೇಳಿ ಬರುತ್ತಿತ್ತು. ಮೂರು ಚುನಾವಣೆಗಳಲ್ಲಿಯೂ ಸುಖಾನಂದ ಶೆಟ್ಟರಿಗೆ ಟಿಕೆಟ್ ಲಭ್ಯವಾಗಿರಲಿಲ್ಲ. ಈ ಬಾರಿಯೂ ಅವರ ಹೆಸರು ಕೇಳಿ ಬರುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಫರ್ಧೆ ಮಾಡಲು ಅವರು ಉತ್ಸುಕರಾಗಿದ್ದಾರೆ.

ಈ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ 12ಕ್ಕೂ ಹೆಚ್ಚು ಉಮೇದುವಾರರ ಹೆಸರು ಕೇಳಿ ಬರುತ್ತಿದೆ. ದಿನಕ್ಕೊಂದು ಹೆಸರು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ. ಇಡೀ ಜಿಲ್ಲೆಯ ಗಮನವನ್ನು ಬೈಂದೂರು ಕ್ಷೇತ್ರ ಸಳೆದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!