Sunday, September 8, 2024

ಉದ್ಯಮ ಕ್ಷೇತ್ರದಲ್ಲೂ ಸ್ಪರ್ಧೆ ಎದುರಿಸಲು ಸದಾ ಸಿದ್ಧರಿರಬೇಕು-ಜಯಪ್ರಕಾಶ್ ಹೆಗ್ಡೆ

ಕುಂದಾಪುರ, ಮಾ.25: ನನಗೂ ಸಾಧ್ಯ ಎಂಬ ಮನಸ್ಸಿನ ದೃಢ ಸಂಕಲ್ಪದಿಂದ ಉದ್ಯಮ ಆರಂಭಿಸಿ ಶ್ರದ್ದೆ, ಪರಿಶ್ರಮ, ನಿರಂತರ ಆಸಕ್ತಿಯಿಂದ ಮುನ್ನೆಡೆದಾಗ ಯಶಸ್ಸು ಸಾಧ್ಯ. ಸ್ಪರ್ಧಾತ್ಮಕವಾದ ಈ ದಿನಗಳಲ್ಲಿ ಉದ್ಯಮ ಕ್ಷೇತ್ರಗಳಲ್ಲಿಯೂ ಕೂಡಾ ಸ್ಪರ್ಧೆ ಎದುರಿಸಲು ಸಿದ್ಧವಿರಬೇಕು ಎಂದು ಹಿಂದುಳಿದ ವರ್ಗಗಳ ಅಭಿವೃದ್ದಿ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.

ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ,ಇವರ ಉದ್ಯೋಗ ಮತ್ತು ಸ್ಥಾನೀಕರಣ ಘಟಕ ಆಶ್ರಯದಲ್ಲಿ ಅಂತರಾಳ ಫೌಂಡೇಶನ್ ರಿ., ಕುಂದಾಪುರ ಇವರ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಒಂದು ದಿನದ ಉದ್ಯಮಶೀಲತಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ದಿಯ ಪ್ರಥಮ ಆದ್ಯತೆಗಳು ಆರೋಗ್ಯ ಮತ್ತು ಶಿಕ್ಷಣಕ್ಕೆ ಸಿಗಬೇಕು. ಸರ್ಕಾರ ವ್ಯವಸ್ಥೆಯಲ್ಲಿಯೂ ಕೂಡಾ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೌಲಭ್ಯಗಳಿಂದ ಕೂಡಿರಬೇಕು ಎಂದರು.

ಮೊಗವೀರ ಸಮಾಜದ ಪುರುಷರು ಮೀನು ಹಿಡಿದುಕೊಂಡು ಬಂದರೆ ಮಹಿಳೆಯರು ಮಾರಾಟ ಮಾಡುತ್ತಿದ್ದರು. ಕುಡುಬಿ ಸಮಾಜದಲ್ಲಿ ಗಂಡಸರು ಕೃಷಿ ಮಾಡಿದರೆ ಹೆಂಗಸರು ಆ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಇಲ್ಲಿ ಯಾವುದೇ ಉದ್ಯಮಶೀಲತೆಯ ತರಬೇತಿ ಇರಲಿಲ್ಲ. ಇವತ್ತು ತರಬೇತಿಗಳು, ಕೌಶಲ್ಯ ಅಭಿವೃದ್ದಿಗೆ ಪೂರಕವಾಗಿವೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು.

ಅರಣ್ಯ ಗುತ್ತಿಗೆದಾರರಾದ ಜೆ.ಪಿ ಶೆಟ್ಟಿ, ಅಂತರಾಳ ಫೌಂಡೇಶನ್ ನಿರ್ದೇಶಕಿ ಲೀನಾ ನಾಯಕ್, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ನಾಗರಾಜ ಯು ಉಪಸ್ಥಿತರಿದ್ದರು.

ಅಂತರಾಳ ಫೌಂಡೇಶನ್ ಟ್ರಸ್ಟಿ ವಿವೇಕ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಉದ್ಯಮಶೀಲತೆಯ ಜ್ಞಾನವನ್ನು ಪಡೆದುಕೊಂಡರೆ ಅದು ವ್ಯರ್ಥವಾಗುವುದಿಲ್ಲ. ಭವಿಷ್ಯತ್ತಿನ ಅದು ಪೂರಕವಾಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತದೆ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಅಂತರಾಳ ಫೌಂಡೇಶನ್ ಸೇವಾ ಮನಸ್ಥಿತಿಯಿಂದ ಹುಟ್ಟುಹಾಕಲಾದ ಸಂಸ್ಥೆ. ಇದು ಸೇವಾಮನೋಭಾವದಿಂದ ಕಾರ್ಯನಿರ್ವಹಿಸಲಿದೆ ಎಂದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿಗಳು ಮತು ಉದ್ಯೋಗ ಮತ್ತು ಸ್ಥಾನೀಕರಿಣ ಘಟಕದ ರಾಮರಾಯ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಉದ್ಯಮಶೀಲತೆ ಮತ್ತು ಸರ್ಕಾರಿ ಯೋಜನೆಗಳು ಗೋಷ್ಠಿಯಲ್ಲಿ ಪಿ‌ಎಮ್‌ಎಫ್‌ಎಮ್‌ಎಲ್ ಘಟಕ ಉಡುಪಿ ಇದರ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟಿ ವಿಷಯ ತಜ್ಞರಾಗಿ ಭಾಗವಹಿಸಿದ್ದರು. ಸ್ವ-ಉದ್ಯೋಗ ತರಬೇತಿ ಸವಾಲುಗಳು ಮತ್ತು ಹಣಕಾಸು ಸಂಸ್ಥೆಗಳ ನೆರವಿನ ಅರಿವು ಗೋಷ್ಠಿಯಲ್ಲಿ ಉಜಿರೆ ರುಟ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಬ್ರಹ್ಮಾವರ ರುಟ್‌ಸೆಟ್‌ನ ನಿರ್ದೇಶಕ ಲಕ್ಷ್ಮೀಶ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!