spot_img
Thursday, April 23, 2026
spot_img

ಕಾಲ್ತೋಡು: ಜೋಗಿಜೆಡ್ಡು ಜಟ್ಟಿಗೇಶ್ವರ ಕ್ಷೇತ್ರ ಮಹಾತ್ಮೆ ಲೋಕಾರ್ಪಣೆ

ಕುಂದಾಪುರ : ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ವಿರಚಿತ ಕ್ಷೇತ್ರಪುರಾಣವನ್ನೊಳಗೊಂಡ 66ನೇ ವಿನೂತನ ಪ್ರಸಂಗ ಜೋಗಿಜೆಡ್ಡು ಶ್ರೀಜಟ್ಟಿಗೇಶ್ವರ ಕ್ಷೇತ್ರ ಮಹಾತ್ಮೆ ಕಥಾನಕವನ್ನು ಯರುಕೋಣೆ ಮಠದ ವೇದಮೂರ್ತಿ ಎಂ. ಕೃಷ್ಣ ಭಟ್‌ರವರು ಲೋಕಾರ್ಪಣೆ ಮಾಡಿದರು.

ಜಟ್ಟಿಗೇಶ್ವರ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕರಾದ ಗೋಪಾಲ್ ಪೂಜಾರಿಯವರು ಮಾತನಾಡುತ್ತಾ, ಬಸವರಾಜ್ ಶೆಟ್ಟಿಗಾರ್‌ರವರು ವಿವಿಧ ಕ್ಷೇತ್ರಗಳನ್ನು ಅಧ್ಯಯನ ಮಾಡಿ 46 ಕ್ಷೇತ್ರ ಮಹಾತ್ಮೆಯನ್ನು ಬರೆದು ರಂಗಕ್ಕೆ ನೀಡಿರುವುದು ಒಂದು ದಾಖಲೆಯಾಗಿದೆ. ಶೆಟ್ಟಿಗಾರರು ಸ್ವತಃ ಜ್ಯೋತಿಷಿಯಾದ ಕಾರಣ ಪ್ರಸಂಗವನ್ನು ಪರಿಪೂರ್ಣವಾಗಿ, ನವರಸಭರಿತವಾಗಿ ಅರ್ಥಪೂರ್ಣವಾಗಿ ಪ್ರಸಂಗವನ್ನು ಸೃಷ್ಟಿಗೊಳಿಸುತ್ತಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಾಹಾಲಿಂಗ ನಾಯಕ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್‌ರವರು 599ನೇ ಧಾರ್ಮಿಕ ಪ್ರವಚನವನ್ನು ನೀಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ, ಮೇಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಆಡಳಿತ ಮುಕ್ತೇಸರರಾದ ಚಂದ್ರಯ್ಯ ಆಚಾರ್ಯ ಕಳಿ, ಅರ್ಚಕರಾದ ಗೋರ್ಕಲ್ಲು ಸುಬ್ರಹ್ಮಣ್ಯ ಮಯ್ಯ, ಜೋಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್‌ ಮತ್ತು ಮೇಳದ ಯಜಮಾನರಾದ ವಿಠಲ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಹಾಗೂ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಅಣ್ಣಪ್ಪಯ್ಯ ಆಚಾರ್‌ ಸ್ವಾಗತಿಸಿ, ಆರ್.ಜೆ. ನಯನ ಕಾರ್ಯಕ್ರಮ ನಿರೂಪಸಿದರೆ, ಉದಯ ನಾಯ್ಕ ವಂದಿಸಿದರು. ನಂತರ ಶ್ರೀ ಕ್ಷೇತ್ರ ಗೋಳಿಗರಡಿ ಮೇಳದವರಿಂದ ಜೋಗಿಜೆಡ್ಡು ಕ್ಷೇತ್ರ ಮಹಾತ್ಮೆ ಪ್ರಥಮ ಪ್ರದರ್ಶನ ಅದ್ಧೂರಿಯಾಗಿ ಜರಗಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!