spot_img
Saturday, April 18, 2026
spot_img

ವಂಡ್ಸೆ ಸುರ್ಗೇಡಿ ದೈವಸ್ಥಾನ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಂಡ್ಸೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಿ., ವಂಡ್ಸೆ ಒಕ್ಕೂಟದ ನೇತೃತ್ವದಲ್ಲಿ ವಂಡ್ಸೆ ಸುರ್ಗೇಡಿ ಶ್ರೀ ಕುಂಜ್ಞಾಡಿ ಹೈಗುಳಿ, ಮರ್ಲುಚಿಕ್ಕು ಹಾಗೂ ಸಪರಿವಾರ ದೈವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಫೆ.8ರಿಂದ ಫೆ.11ರ ತನಕ ಇಲ್ಲಿ ವಾರ್ಷಿಕ ವರ್ಧಂತಿ, ಗೆಂಡಸೇವೆ ಸಹಿತ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ, ದೈವಸ್ಥಾನದ ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ವಂಡ್ಸೆ ದೊಡ್ಮನೆ ಸತ್ಯನಾರಾಯಣ ಶೆಟ್ಟಿ ಕಾನ್ಕಿ, ಆಡಳಿತ ಮಂಡಳಿಯ ಪ್ರೇಮಾನಂದ ಆಚಾರ್ಯ, ಚಂದ್ರ ರಾಯಪ್ಪನಡಿ, ನಿರ್ಮಲ ಶೆಟ್ಟಿ, ಗಣೇಶ ಮಡಿವಾಳ, ವಂಡ್ಸೆ ವಲಯ ಮೇಲ್ವಿಚಾರಕ ಚಂದ್ರ ಮಧುವನ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವಂಡ್ಸೆ ಒಕ್ಕೂಟದ ಅಧ್ಯಕ್ಷ ಗಿರೀಶ್ ಎನ್.ನಾಯ್ಕ್, ನಿಯೋಜಿತ ಅಧ್ಯಕ್ಷೆ ಚಂದ್ರವತಿ ಶೆಟ್ಟಿ, ರವಿಕಿರಣ್ ಆಚಾರ್ಯ, ಸೇವಾ ಪ್ರತಿನಿಧಿ ಮಮತಾ, ಒಕ್ಕೂಟದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಒಕ್ಕೂಟದ ಸದಸ್ಯರು ಸ್ವಚ್ಛತಾ ಸೇವೆಯಲ್ಲಿ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!