spot_img
Friday, April 17, 2026
spot_img

ಕುಂದಾಪುರ: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ರೋಜರಿ ಸಭಾ ಭವನ ಉದ್ಘಾಟನೆ

ಕುಂದಾಪುರ: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ತನ್ನ 31 ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಕುಂದಾಪುರದ ಪ್ರಧಾನ ಕಛೇರಿಯ ಕಟ್ಟಡದಲ್ಲಿ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ರೋಜರಿ ಸಭಾಭವನ ಉದ್ಘಾಟನಾ ಕಾರ್ಯಕ್ರಮ ಮತ್ತು ಸಂಸ್ಥಾಪಕರ ದಿನವನ್ನು ನೂತನ ಸಭಾಭವನದಲ್ಲಿ ಆಚರಿಸಲಾಯಿತು.

ನೂತನ ಸಭಾಭವನವನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಇದರ ಅಧ್ಯಕ್ಷ ಜೊನ್ಸನ್ ಡಿ ಆಲ್ಮೇಡಾ ಉದ್ಘಾಟಿಸಿ ನಮ್ಮ ಸಂಸ್ಥೆಯ ಹಲವಾರು ಯೋಜನೆಗಳಲ್ಲಿ ಈ ಸಭಾಭವನದ ಕನಸು ಒಂದಾಗಿದ್ದು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಸಂಸ್ಥೆಯ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದು ಕೂಡ ನಮ್ಮ ಬಹಳ ದಿನಗಳ ಕನಸಾಗಿತ್ತು. ನಮ್ಮ ಹಿರಿಯರು ಬಹಳ ಒತ್ತಾಸೆಯಿಂದ ನಮ್ಮ ಹಿತಕ್ಕಾಗಿ ಸ್ಥಾಪಿಸಲ್ಪಟ್ಟ ಸೊಸೈಟಿಯಾಗಿದ್ದು. ಅವರೆಲ್ಲಾ ಈ ಸಂಸ್ಥೆಗೆ ನಿಸ್ವಾರ್ಥದಿಂದ ಸೇವೆ ನೀಡಿದ್ದಾರೆ. ಅವರ ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದಿದೆ, ಅವರನ್ನಲ್ಲ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ ಎಂದು ಹೇಳಿದ ಅವರು, ಬ್ಯಾಂಕಿನ ಏಳಿಗೆಯ ಜೊತೆ ನಮ್ಮ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣಕ್ಕೆ ಸಾಲ ಕೊಡುವ ಯೋಜನೆಯನ್ನು ಜ್ಯಾರಿಗೊಳಿಸಿದ್ದೇವೆ, ಇದರ ಪ್ರಯೋಜನವನ್ನು ಸದಸ್ಯರು ಪಡಿಸಿಕೊಳ್ಳಬೇಕು ಎಂದರು.

ದೀಪ ಬೆಳಗಿಸಿ ಆಶೀರ್ವಚನ ನೀಡಿದ ಸಂಸ್ಥೆಯ ಅಧ್ಯಾತ್ಮಿಕ ನಿರ್ದೇಶಕರು, ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ.ವಂ.ಸ್ಟ್ಯಾನಿ ತಾವ್ರೊ ಸಂಸ್ಥೆ ವಿಶ್ವಾಸ, ಪ್ರಾಮಾಣಿಕತೆಯಿಂದ ಸೇವೆ ನೀಡಿದ್ದರಿಂದ ಸಮಾಜದಲ್ಲಿ ಗುರುತಿಸಿಕೊಂಡಿದೆ, ಇದರ ಯಶಸ್ಸಿ ಹಿಂದೆ ಸಂಸ್ಥಾಪಕರು, ನಿರ್ದೇಶಕರು ಮತ್ತು ಸಿಬಂದಿ ವರ್ಗದ ಕಾರ್ಯಕ್ಷಮತೆ ಮಹತ್ತರವಾದುದು. ರೋಜರಿ ಅಮ್ಮನವರ ಆಶೀರ್ವಾದದಿಂದ ಸ್ಥಾಪನೆಯಾದ ಈ ಸಂಸ್ಥೆಯ ಸಂಸ್ಥಾಪಕಿ ರೋಜರಿ ಮಾತೆಯೆ ಆಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಬ್ರಹ್ಮಾವರ ಇದರ ಅಧ್ಯಕ್ಷರಾದ ವಲೇರಿಯನ್ ಮಿನೇಜಸ್ ವಹಿಸಿದ್ದರು.

ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಫಿಲಿಫ್ ಡಿಕೋಸ್ತಾ ರೋಜರಿ ಕ್ರೆಡಿಟ್ ಸಂಸ್ಥೆಯ ಪಕ್ಷಿನೋಟ ಮುಂದಿಟ್ಟರು. ಈ ಸಂದರ್ಭದಲ್ಲಿ ಈ ಸಹಕಾರಿ ಸಂಘದ ಕನಸು ಕಂಡ ಸ್ಥಾಪಕ ಅಧ್ಯಕ್ಷರಾದ ಪಡುಕೋಣೆಯ ದಿ.ಆಲ್ಫೊನ್ಸ್ ಲೋಬೊ ಅವರ ಪರವಾಗಿ ಅವರ ಪುತ್ರ ನವೀನ್ ಲೋಬೊ, ನಂತರ ಅಧ್ಯಕ್ಷರಾದ ಬೇಸಿಲ್ ಡಿಸೋಜಾ, ದಿ. ಮಾರ್ಟಿನ್ ಡಾಯಸ್ ಪರವಾಗಿ ಅವರ ಪತ್ನಿ ಶಾಂತಿ ಡಾಯಸ್, ಫಿಲಿಫ್ ಡಿಕೋಸ್ತಾ, ಎ.ಜೆ ಬುತೆಲ್ಲೊ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಎಲ್ಲಾ ಮಾಜಿ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಎಲ್ಲ ಹಾಲಿ ನಿದೇಶಕರನ್ನು ಕೂಡ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಹಾಲಿ ನಿರ್ದೇಶಕಿ ಡಯಾನಾ ಡಿ‌ಆಲ್ಮೇಡಾ, ಶಾಂತಿ ಆರ್. ಕರ್ವಾಲ್ಲೊ ನಿರ್ವಹಿಸಿದರು. ಸುದೀರ್ಘ ಸೇವೆ ನೀಡಿದ ಮುಖ್ಯ ನಿರ್ವಹಣಾಧಿಕಾರಿ ದಿ.ಪಾಸ್ಕಲ್ ಡಿಸೋಜಾರ ಪರವಾಗಿ ಅವರ ಪತ್ನಿ ವಿನೀತಾ ಡಿಸೋಜಾರನ್ನು ಸನ್ಮಾನಿಸಲಾಯಿತು. ಸಭಾಭವನ ನಿರ್ಮಿಸುವಲ್ಲಿ ಸಹಕಾರ ನೀಡಿದ ಎಂಜಿನಿಯರ್ ಮತ್ತು ಇತರರಿಗೆ ಗುರುತಿಸಲಾಯಿತು.

ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು. ಮುಖ್ಯ ನಿರ್ವಹಣಾಧಿಕಾರಿ ಮೇಬಲ್ ಡಿ‌ಆಲ್ಮೇಡಾ ವಂದಿಸಿದರು. ನಿರ್ದೇಶಕ ವಿನೋದ್ ಕ್ರಾಸ್ಟೊ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!