spot_img
Monday, April 13, 2026
spot_img

ಮಹಿಮಾ ಕುಂದಾಪುರಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ: ಕುಂದಾಪುರ ಜೂನಿಯರ್ ಕಾಲೇಜು (ಬೋರ್ಡ್ ಹೈಸ್ಕೂಲು) ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿನಿ ಯೋಗ, ನೃತ್ಯ, ಈಜು ಕ್ಷೇತ್ರದ ಪ್ರತಿಭೆ ಮಹಿಮಾ ಕುಂದಾಪುರ ಇವರಿಗೆ ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಈಗಾಗಲೇ ಮಹಿಮಾ ನೃತ್ಯ, ಈಜು, ಯೋಗಾಸನದಲ್ಲಿ ಸತತವಾಗಿ ದಾಖಲೆ ನಿರ್ಮಿಸಿ ವಿಶ್ವ ಯೋಗಾಸನ ಸ್ಪೋರ್ಟ್ಸ್ ರೆಕಾರ್ಡ್ ಬುಕ್-2022ಗೆ ದಾಖಲುಗೊಂಡಿದ್ದಾರೆ. 900ಕ್ಕೂ ಅಧಿಕ ನೃತ್ಯ ಹಾಗೂ ಯೋಗಾಸನ ಪ್ರದರ್ಶನ ನೀಡಿದ್ದಾರೆ.

ಕುಂದಾಪುರದ ಪಿ. ಎಂ.ರಾಮ ಹಾಗೂ ಲತಾ ರಾಮ ದಂಪತಿಗಳ ಪುತ್ರಿಯಾಗಿರುವ ಮಹಿಮಾ ನೃತ್ಯ, ಯೋಗ ವಿಶೇಷ ಆಸಕ್ತಿ ಹೊಂದಿ ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಇವರ ಸಾಧನೆಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಕರ್ನಾಟಕ ನಾಟ್ಯ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ 2022, ಕರ್ನಾಟಕ ರತ್ನ ಶ್ರೀ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಕರುನಾಡ ಸಿರಿ ಪ್ರಶಸ್ತಿ, ನೇಷನಲ್ ಲೆವೆಲ್ ಓಪನ್ ಯೋಗದಲ್ಲಿ ಪ್ರಥಮ ರನ್ನರ್ಸ್ ಆಫ್, ಕರ್ನಾಟಕ ರಾಜ್ಯ ಯೋಗ ಕಲಾ ಪ್ರತಿಭಾ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟ್ಯ ರತ್ನ ಪ್ರಶಸ್ತಿ, ಅಮೃತ ಸೇವಾ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2021-22, ಗ್ಲೋಬಲ್ ವರ್ಲ್ಡ್ ರೆಕಾರ್ಡ್ 2021, ಭಾರತ ಮಹಿಳಾ ಶ್ರೇಷ್ಠ ರತ್ನ ರಾಷ್ಟ್ರೀಯ ಪ್ರಶಸ್ತಿ, ಕುಂದಾಪುರ ಪ್ರತಿಭೆ ಪ್ರಶಸ್ತಿ, ಪಂಜಾಬ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ದೆಯಲ್ಲಿ 2 ಬಾರಿ ಪ್ರಥಮ ಸ್ಥಾನ, ಸ್ಟೇಟ್ ಲೆವೆಲ್ ಡಾನ್ಸ್ ಕಾಂಪಿಟೇಶನ್ ವಿನ್ನರ್, ರಾಷ್ಟ್ರ ಮಟ್ಟದ ಮಾಡೆಲ್ ಐಕಾನ್ ಹಂಟ್-೨೦೨೦ ಮೊದಲಾದ ಪ್ರಶಸ್ತಿಗಳು ಲಭಿಸಿವೆ.

ಉಡುಪಿ ಕೃಷ್ಣಮಠದ ಪರ್ಯಾಯ ಶ್ರೀ ಕಾಣಿಯೂರು ಮಠದಿಂದ ಪ್ರಶಸ್ತಿ ಪತ್ರ, ಮಣಿಪಾಲ ಗ್ರೂಫ್ ಸಂಸ್ಥೆಯಿಂದ ಸನ್ಮಾನ, ಈಜು ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿಯೂ ಬಹುಮಾನ ಲಭಿಸಿದೆ. ಕಲ್ಲರ್‍ಸ್ ಕನ್ನಡ, ಚಿಂಟು ಟಿವಿ ಸೇರಿದಂತೆ ಅನೇಕ ರಾಜ್ಯಮಟ್ಟದ ಟಿವಿ ವಾಹಿನಿಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!