Sunday, September 8, 2024

ಸದಾನಂದ ಬೈಂದೂರ್ ಇವರಿಗೆ ಪಿ‌.ಎಚ್.ಡಿ. ಪದವಿ

ಸದಾನಂದ ಬೈಂದೂರು ಇವರು ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ. ಎಂ ದಿನೇಶ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಸಾದರಪಡಿಸಿರುವ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 ಮತ್ತು
ಸಾಮಾಜಿಕ ನ್ಯಾಯ : ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ
ಕುರಿತ ಸಂಶೋಧನಾ ಮಹಾಪ್ರಬಂಧಕ್ಕಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಶಿಗ್ಗಾಂವ ಇವರು ರಾಜ್ಯಶಾಸ್ತ್ರ ವಿಭಾಗದ ಅನ್ವಯಿಕ ಜಾನಪದ ನಿಕಾಯದಡಿಯಲ್ಲಿ ಡಾಕ್ಟರ್ ಆಫ್ ಫಿಲಾಸಫಿ ( ಪಿ‌ಎಚ್.ಡಿ ) ಪದವಿಯನ್ನು ಘೋಷಿಸಿದೆ.

ಸದಾನಂದ ಬೈಂದೂರ್ ಇವರು ಮೂಲತಃ ಬೈಂದೂರಿನವರಾಗಿದ್ದು ವೆಂಕಮ್ಮ ಹಾಗೂ ಗೋವಿಂದ ನಾಯ್ಕ್ ಅವರ ಪುತ್ರ. ಇವರು ಪ್ರಾಥಮಿಕ ಶಿಕ್ಷಣವನ್ನು ಕೋಟೇಬಾಗಿಲಿನ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಬೈಂದೂರಿನಲ್ಲಿ ಪೂರ್ಣಗೊಳಿಸಿದ್ದು, ಪದವಿ ಹಾಗೂ ರಾಜ್ಯಶಾಸ್ತ್ರ, ಇತಿಹಾಸ, ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಮೈಸೂರು ಹಾಗೂ ದಾರವಾಡ ವಿಶ್ವವಿದ್ಯಾನಿಲಯಗಲ್ಲಿ ಪೂರ್ಣಗೊಳಿಸಿದ್ದಾರೆ. ಅಲ್ಲದೇ ನೀನಾಸಮ್ ರಂಗಶಿಕ್ಷಣ ಡಿಪ್ಲೊಮಾವನ್ನು ಪಡೆದಿದ್ದಾರೆ.

ಇವರು 17 ವಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, 10 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ 5 ವರ್ಷ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇಲ್ಲಿ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

ಪ್ರಸ್ತುತ ಇವರು ಕುಂದಾಪುರ ವಲಯದ ಸರಕಾರಿ ಪ್ರೌಢಶಾಲೆ ಬೀಜಾಡಿ ಇಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!