spot_img
Wednesday, January 22, 2025
spot_img

ಕುಂದಾಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಉದ್ಘಾಟನೆ

ಕುಂದಾಪುರ, ನ.1: ದೇಶದ ಪ್ರಗತಿಗೆ ಸಹಕಾರ ರಂಗದ ಕೊಡುಗೆ ಹಿರಿದಾದುದು. ಸಹಕಾರ ಕ್ಷೇತ್ರ ಬೆಳೆಯಲು ಸದಸ್ಯರೇ ಕಾರಣ. ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವುದು ಸಹಕಾರ ಸಂಘಗಳ ನೌಕರರ ಜವಬ್ದಾರಿ. ಸಂಘದ ಸದಸ್ಯರು, ಸಾಲಗಾರರು, ಠೇವಣಿದಾರರಿಗೆ ತೃಪ್ತಿಯಾದರೆ ಸಂಘ ಬೆಳೆಯುತ್ತದೆ. ಹಾಗಾಗಿ ಮೂಲವನ್ನು ಸರಿಪಡಿಸುವ ಕೆಲಸ ನೌಕರರದ್ದು. ಏಕ ಮನಸ್ಸಿನಿಂದ ಸಹಕಾರ ಕ್ಷೇತ್ರದಲ್ಲಿ ದುಡಿಯಬೇಕು ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಹೇಳಿದರು

ಕುಂದಾಪುರದ ಹೋಟೆಲ್ ಶರೋನ್ ಸಭಾಂಗಣದಲ್ಲಿ ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ಕುಂದಾಪುರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರ ಇವತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿಯಾಗಿ ಬೆಳೆದಿದೆ. ಜನಸಾಮಾನ್ಯರಿಗೆ ಆಪ್ತವಾಗಿ ಸೇವೆ ನೀಡುತ್ತಿವೆ. ಇದರ ನೌಕರರು ಸೂಕ್ತ ತರಬೇತಿಗಳನ್ನು ಪಡೆದುಕೊಳ್ಳುವುದು ಕೂಡಾ ಮುಖ್ಯವಾಗಿರುತ್ತದೆ. ಈ ವ್ಯಕ್ತಿತ್ವ ವಿಕಸರ ತರಬೇತಿಯನ್ನು ಎಲ್ಲರೂ ಪಡೆದುಕೊಂಡು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ, ಸಹಕಾರ ಸಂಘಗಳ ನೌಕರರಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿಯ ಅವಶ್ಯಕತೆ ಇರುತ್ತದೆ. ವ್ಯಕ್ತಿತ್ವ ವಿಕಸನ ತರಬೇತಿ ವ್ಯವಹಾರದಲ್ಲಿ ಅನುಕೂಲವಾಗುತ್ತದೆ. ಸಹಕಾರಿ ನೌಕರರನ್ನು ಗುರುತಿಸುವ ಕಾರ್ಯವೂ ಶ್ಲಾಘನೀಯ, ಪ್ರತಿವರ್ಷವೂ ಇಂತಹ ತರಬೇತಿ ಕಾರ್ಯಕ್ರಮ ನಡೆಯಲಿ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು, ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ ಪಿ.ಎಸ್, ಸಾಲಿಗ್ರಾಮದ ಶ್ರೀ ಗುರುನರಸಿಂಹ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಸೋಮಾಯಾಜಿ, ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಐತಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬಳಿಕ ‘ದೈನಂದಿನ ವ್ಯವಹಾರದಲ್ಲಿ ಸಿಬ್ಬಂದಿಯವರ ಪಾತ್ರ’ದ ಕುರಿತು ಶ್ರೀಧರ ಸೋಮಾಯಾಜಿ, ಹಾಗೂ ‘ಸಾಲ ವಸೂಲಾತಿಯಲ್ಲಿ ಸಿಬ್ಬಂದಿಯವರ ಪಾತ್ರ ಮತ್ತು ಮಾನವ ಸಂಪನ್ಮೂಲ ಅಭಿವೃದ್ದಿ’ ಕುರಿತು ಶ್ರೀಧರ ಪಿ.ಎಸ್ ಉಪನ್ಯಾಸ ನೀಡಿದರು.

ಕುಂದಾಪುರ ತಾ.ಪ್ರಾ.ಕೃ.ಪ.ಸ.ಸಂ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಐತಾಳ್ ಸ್ವಾಗತಿಸಿ, ಕಾರ್ಯದರ್ಶಿ ಕೀರ್ತಿಕುಮಾರ್ ವಂದಿಸಿದರು. ಅನುಷಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!