spot_img
Monday, March 23, 2026
spot_img

ವಿಶ್ವ ವಿನಾಯಕ ತೆಕ್ಕಟ್ಟೆ: ಬಾಲ ಪ್ರತಿಭೆ ಶ್ಲಾಘಾಗೆ ಮುಖ್ಯಮಂತ್ರಿಗಳಿಂದ ಸನ್ಮಾನ

ಕುಂದಾಪುರ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನ ಬಾಲ ಪ್ರತಿಭೆ ಶ್ಲಾಘಾ ಸಾಲಿಗ್ರಾಮರವರನ್ನು ಸಿ.ಎಮ್. ಬಸವರಾಜ್ ಬೊಮ್ಮಾಯಿಯವರು ಸನ್ಮಾನಿಸಿದರು.

ಇತ್ತೀಚೆಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ಲಾಘಾ ಅವರಿಗೆ ನಗದು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಸಿನಿಮಾ ಕ್ಷೇತ್ರದಲ್ಲಿ ವಿಶಿಷ್ಟ ಅಭಿನಯದೊಂದಿಗೆ ಮನೆ ಮಾತಾಗಿರುವ ಬಾಲ ಪ್ರತಿಭೆ ಸಾಲಿಗ್ರಾಮದ ರಾಘವೇಂದ್ರ ಆಚಾರ್ ಹಾಗೂ ಶ್ರೀಮತಿ ಮಾಲಾ ದಂಪತಿಗಳ ಪುತ್ರಿ ಶ್ಲಾಘಾ ಪ್ರಸ್ತುತ ವಿಶ್ವ ವಿನಾಯಕ ಸಿ.ಬಿ.ಎಸ್.ಇ. ಸ್ಕೂಲ್‌ನಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಬಾಲನಟಿಯಾಗಿ ಕಟಕ, ಗಿರ್ಮಿಟ್ ಹಾಗೂ ಇನ್ನೂ ಹಲವು ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿ ಇನ್ನೂ ಹಲವು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುತ್ತಾಳೆ. ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿದ್ದು ನಗುಮೊಗದ ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾಳೆ. ಇಂತಹ ಬಾಲ ಪ್ರತಿಭೆಗಳು ಇನ್ನಷ್ಟು ಹುಟ್ಟಿ ಬಂದು ಹೆತ್ತವರಿಗೆ, ಶಾಲೆಗೆ ಹಾಗೂ ನಮ್ಮೂರಿಗೆ ಕೀರ್ತಿ ತರುವಂತಾಗಲಿ ಎಂದು ಶಾಲಾ ಆಡಳಿತ ನಿರ್ದೇಶಕ ಪ್ರಭಾಕರ ಶೆಟ್ಟಿ ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ ಆಲ್ಮೇಡಾರವರು ಮಾತನಾಡಿ ಮಕ್ಕಳಲ್ಲಿನ ಇಂತಹ ಸುಪ್ತ ಪ್ರತಿಭೆಗಳನ್ನು ಜಾಗೃತಗೊಳಿಸಿ ಪೋಷಿಸಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!