spot_img
Sunday, March 29, 2026
spot_img

ಗಾಣಿಗ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಯ ಆಶಯ: ಯುವ ಮಾನಸ ಗಾಣಿಗ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ಗೆ ಚಾಲನೆ

ಕುಂದಾಪುರ, ಎ.14: ಉಡುಪಿ, ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಕಲಿಯುತ್ತಿರುವ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಜನೆಯನ್ನು ಉನ್ನತೀಕರಿಸುವ, ಪ್ರೋತ್ಸಾಹಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿರುವ ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ರಿ., ಉಪ್ಪುಂದ ಇದರ ಉದ್ಘಾಟನಾ ಕಾರ್ಯಕ್ರಮ ಎ.14ರಂದು ಕಟ್‌ಬೇಲ್ತೂರು ರಾಮ ಲಕ್ಷ್ಮಣ ಸಭಾಭವನದಲ್ಲಿ ನಡೆಯಿತು.

ದೀಪ ಬೆಳಗಿಸುವ ಮೂಲಕ ಟ್ರಸ್ಟ್‌ನ ವಿದ್ಯುಕ್ತ ಉದ್ಘಾಟನೆ ನಡೆಯಿತು. ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಅಧ್ಯಕ್ಷರಾದ ಎಚ್.ಸುಬ್ಬಯ್ಯ ಗಾಣಿಗ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಕೆ.ಎ.ಎಸ್.ಅಧಿಕಾರಿ ಆರ್.ನಾಗರಾಜ ಶೆಟ್ಟಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಜಿ.ಕೆ ಬಸವರಾಜ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ರಿ., ಬಾರಕೂರು ಇದರ ಅಧ್ಯಕ್ಷ ವಾಸುದೇವ ಬೈಕಾಡಿ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಉತ್ತರ ಕನ್ನಡ ಗಾಣಿಗ ಸಂಘ ಕುಮಟಾ ಇದರ ಅಧ್ಯಕ್ಷ ದಾಮೋದರ ಕೆ.ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ನಾಗರಾಜ, ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಫ್ ಸೊಸೈಟಿ ಬೆಂಗಳೂರು ಅಧ್ಯಕ್ಷ ಎಮ್.ವೇಣುಗೋಪಾಲಕೃಷ್ಣ, ಸಂಪರ್ಕಸುಧಾ ಪತ್ರಿಕೆ ಸಂಪಾದಕ ರಘುರಾಮ ಬೈಕಾಡಿ, ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಗಣೇಶ ಚೆಲ್ಲಿಮಕ್ಕಿ, ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ ಗಾಣಿಗ, ಬೆಂಗಳೂರು ಉದ್ಯಮಿ ಸೂರ್ಯನಾರಾಯಣ ಜಡ್ಡಿನಹಿತ್ಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಮಾಲ್ತಾರು, ಸುರೇಶ ಶೆಟ್ಟಿ ಜೀವನ ಸುಪಾರಿ, ಬಾಸ್ಕೇರಿ ಹೊನ್ನಾವರ, ಶೈಕ್ಷಣಿಕ ಸಾಧಕಿ ಸ್ಮಿತಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಾದ ಬೆಂಗಳೂರು ಜಯದೇವ ಆಸ್ಪತ್ರೆಯ ಹೃದಯ ತಜ್ಞರಾದ ಡಾ.ಎಸ್.ಎಮ್.ಜೈಕುಮಾರ, ಕುಮಟಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ನಾಗಭೂಷಣ ಕಲ್ಮನೆ, ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಆಜ್ರಿ ಗೋಪಾಲ ಗಾಣಿಗ, ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ದಿನೇಶ ಗಾಣಿಗ ಕೋಟಾ, ಹಿರಿಯ ವಕೀಲರು ಪತ್ರಕರ್ತರಾದ ಎಮ್.ರಾಘವೇಂದ್ರ ಸಾಗರ, ಎಮ್.ಐ.ಟಿ ಮಣಿಪಾಲ ಉಪನ್ಯಾಸಕಿ ಡಾ|ಪೂರ್ಣಿಮಾ ಪಾಂಡುರಂಗ ಕುಂದಾಪುರ, ನಿವೃತ್ತ ಇಂಜಿನಿಯರ್, ವಿ.ಐ.ಎಸ್.ಎಲ್ ಭದ್ರಾವತಿ ಇದರ ಕುಸುಮಾಕರ, ಮುಂಬಯಿಯಲ್ಲಿ ಮಕ್ಕಳ ತಜ್ಞೆ ಆಗಿರುವ ಡಾ.ರಕ್ಷಾ ರತ್ನಾಕರ ಗಾಣಿಗ, ಅಂತರಾಷ್ಟ್ರೀಯ ವೈಟ್‌ಲಿಫ್ಟರ್ ವಿಶ್ವನಾಥ ಬಾಳಿಕೆರೆ, ಡಾ.ಸರಸ್ವತಿ ಬೈಂದೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಗಾಣಿಗ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಇಲಾಖೆಯ ಶೇಖರ ಗಾಣಿಗ ಬೀಜಮಕ್ಕಿ, ಚಿತ್ರಕಲಾ ಶಿಕ್ಷಕ ಗಿರೀಶ ಗಾಣಿಗ ತಗ್ಗರ್ಸೆ ಇವರುಗಳನ್ನು ಸನ್ಮಾನಿಸಲಾಯಿತು.

ಸಾಧನಾ ಅಕಾಡೆಮಿಯ ಮಂಜುನಾಥ ಶಿಕಾರಿಪುರ ಇವರನ್ನು ಅಭಿನಂದಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷರಾದ ಹೆಚ್.ಸುಬ್ಬಯ್ಯ ಅವರಿಗೆ ರಥದ ಪ್ರತಿಕೃತಿಯನ್ನು ನೀಡಿ ಗೌರವಿಸಲಾಯಿತು.

ಟ್ರಸ್ಟ್ ಉಪಾಧ್ಯಕ್ಷ ಸಂತೋಷ ಆನಂದ, ಕಾರ್ಯದರ್ಶಿ ಶುಭಕರ ಗಾಣಿಗ, ಟ್ರಸ್ಟಿಗಳಾದ ಕೆ.ಎಮ್. ರಾಮ, ಕೆ.ಎಮ್.ಲಕ್ಷ್ಮಣ, ಹೆಚ್.ಟಿ ಮಂಜುನಾಥ, ಮಂಜುನಾಥ ಎನ್.ಗಾಣಿಗ ಸೇಲಂ, ಸಾಧನಾ ಅಕಾಡೆಮಿಯ ಮಂಜುನಾಥ, ಮಂಜುನಾಥ ಹುಲುವಾಡಿ, ಶ್ರೀಮತಿ ಸವಿತಾ ಬೈಂದೂರು, ನವೀನ್ ನಾರಾಯಣ ನಾವುಂದ, ಶಿವಾನಂದ ಗಾಣಿಗ, ಬಾಬುರಾವ್ ಬಿಜೂರು, ಸುಬ್ರಹ್ಮಣ್ಯ ಜಡ್ಡಿನಹಿತ್ಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೆಚ್.ಸುಬ್ಬಯ್ಯ ಶಿವಮೊಗ್ಗ ಅವರು ಬರೆದ ಉತ್ತರದ ಸನ್ನಿಧಿಯಲ್ಲಿ ಪುಸ್ತಕವನ್ನು ಕನ್ನಡಪ್ರಭ ಪತ್ರಿಕೆಯ ನಿವೃತ್ತ ಹಿರಿಯ ಸುದ್ಧಿ ಸಂಪಾದಕ ಡಾ| ವಾಸುದೇವ ಎಮ್.ಶೆಟ್ಟಿ ಬಿಡುಗಡೆಗೊಳಿಸಿದರು. ಜನಪ್ರತಿನಿಧಿ ಪ್ರಕಾಶನದ ಸುಬ್ರಹ್ಮಣ್ಯ ಪಡುಕೋಣೆ ಕೃತಿ ಪರಿಚಯಿಸಿದರು.

ಯು.ಪಿ.ಎಸ್.ಸಿ, ಕೆಪಿ‌ಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಹೇಗೆ ಇನ್ನುವ ಕುರಿತು ಸಾಧನಾ ಅಕಾಡೆಮಿ, ಯುಟ್ಯೂಬ್ ಚಾನೆಲ್ ಶಿಕಾರಿಪುರ ಇದರ ಮಂಜುನಾಥ ಬಿ ಉಪನ್ಯಾಸ ನೀಡಿದರು.

ಟ್ರಸ್ಟಿ ಸುಭಾಷ್ ಮಹಾಬಲೇಶ್ವರ ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ಯು. ಅನಂತ ಗಾಣಿಗ ವಂದಿಸಿದರು. ಟ್ರಸ್ಟಿ ಕೆ.ಎಮ್.ಶೇಖರ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!