spot_img
Sunday, March 29, 2026
spot_img

ಹೆಚ್.ಸುಬ್ಬಯ್ಯ ಶಿವಮೊಗ್ಗ ಅವರ ‘ಉತ್ತರದ ಸನ್ನಿಧಿಯಲ್ಲಿ’ ಪುಸ್ತಕ ಲೋಕಾರ್ಪಣೆ

ಕುಂದಾಪುರ,.14: ಪ್ರವಾಸ ಕಥನ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಸ್ಥಾನ ಪಡೆದಿದೆ. ಈ ಕರಾವಳಿಯಿಂದಲೇ ಕನ್ನಡದ ಮೊದಲ ಪ್ರವಾಸ ಕಥನ ರಚನೆಯಾಗಿದ್ದು. ಪ್ರವಾಸ ಕಥನಗಳು ಓದುಗರಿಗೆ ಹೊಸ ಅನುಭವ ನೀಡುತ್ತದೆ, ಜ್ಞಾನ ವೃದ್ದಿಸುತ್ತವೆ. ಭಾರತದ ಪ್ರವಾಸದ ವೇಳೆಯ ಅನುಭವ ಆನೇಕ ಪ್ರವಾಸಿಗರು ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ. ಹೆಚ್.ಸುಬ್ಬಯ್ಯನವರ ಉತ್ತರದ ಸನ್ನಿಧಿಯಲ್ಲಿ ಆ ಸಾಲಿನಲ್ಲಿ ಸ್ಥಾನ ಪಡೆದುಕೊಳ್ಳಲಿ ಎಂದು ಕನ್ನಡಪ್ರಭ ಪತ್ರಿಕೆಯ ನಿವೃತ್ತ ಹಿರಿಯ ಸುದ್ಧಿ ಸಂಪಾದಕ ಡಾ. ವಾಸುದೇವ ಎಮ್.ಶೆಟ್ಟಿ ಹೇಳಿದರು.

ಕಟ್‌ಬೇಲ್ತೂರು ರಾಮ ಲಕ್ಷ್ಮಣ ಸಭಾಭವನದಲ್ಲಿ ನಡೆದ ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಉದ್ಘಾಟನಾ ಸಂದರ್ಭದಲ್ಲಿ ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಹೊರ ತಂದಿರುವ ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಚ್.ಸುಬ್ಬಯ್ಯ ಗಾಣಿಗ ಶಿವಮೊಗ್ಗ ಇವರ ದ್ವಿತೀಯ ಪ್ರವಾಸ ಕಥನ ಉತ್ತರದ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರವಾಸ ಕಥನ ಸಾಹಿತ್ಯದಲ್ಲಿ ಲೇಖಕನಿಗೆ ಹೆಚ್ಚು ಸ್ವಾತಂತ್ರ್ಯವಿರುತ್ತದೆ. ತಾನು ನೋಡಿದ, ಅನುಭವಿಸಿದ, ಅನುಭವವನ್ನು ಓದುಗರ ಮುಂದೆ ತೆರೆದಿಡಲು ಸಾಧ್ಯವಿದೆ. ಸುಬ್ಬಯ್ಯನವರ ಮೊದಲ ಕೃತಿ ಕೈಲಾಸದ ಸನ್ನಿಧಿ ಕೂಡಾ ಮೌಲಿಕ ಕೃತಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಹತೆ ಮುಖ್ಯವಲ್ಲ, ಸೃಜನಾತ್ಮಕವಾಗಿ ಓದುಗರ ಮುಂದೆ ವಿಷಯ ಬಿತ್ತರಿಸುವುದು ಮುಖ್ಯ. ಆ ಹಿನ್ನೆಲೆಯಲ್ಲಿ ಉತ್ತರದ ಸನ್ನಿದಿಯಲ್ಲಿ ಕೂಡಾ ಬಹುಬೇಗ ಓದುಗರನ್ನು ಸೆಳೆಯಲಿದೆ ಎಂದರು.

ಕೃತಿ ಪರಿಚಯ ಮಾಡಿದ ಜನಪ್ರತಿನಿಧಿ ಪ್ರಕಾಶನದ ಮುಖ್ಯಸ್ಥರು, ಜನಪ್ರತಿನಿಧಿ ಪತ್ರಿಕೆ ಸಂಪಾದಕರಾದ ಸುಬ್ರಹ್ಮಣ್ಯ ಪಡುಕೋಣೆ ಅವರು, ಹೆಚ್.ಸುಬ್ಬಯ್ಯನವರು ಕೃಷಿ, ಹೋಟೆಲ್ ಉದ್ಯಮ, ಸಮಾಜ ಸೇವೆಯ ಜೊತೆಯಲ್ಲಿ ಪ್ರವಾಸದ ಆಸಕ್ತಿ ಬೆಳಸಿಕೊಂಡವರು. ಬಲು ಕಠಿಣವಾದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿಮಾನ ವ್ಯವಸ್ಥೆಗೂ ಮೊದಲೇ ಕಾಲ್ನಡಿಗೆಯಲ್ಲಿಯೇ ಮೂರು ಬಾರಿ ಯಾತ್ರೆ ಮಾಡಿದವರು. ಅದರ ಅನುಭವವನ್ನು ಕೈಲಾಸದ ಸನ್ನಿಧಿ ಎನ್ನುವ ಪುಸ್ತಕದ ರಚಿಸುವ ಮೂಲಕ ಹಂಚಿಕೊಂಡಿದ್ದಾರೆ. ‘ಕೈಲಾಸದ ಸನ್ನಿಧಿ’ ಓದುಗರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ತನ್ನ ಉತ್ತರ ಭಾರತದ ಪ್ರಮುಖ ಯಾತ್ರಾಸ್ಥಳಗಳ ಭೇಟಿಯ ಅನುಭವವನ್ನು ಉತ್ತರದ ಸನ್ನಿಧಿಯಲ್ಲಿ ಎನ್ನುವ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಇಲ್ಲಿ ಕ್ಷೇತ್ರ ಭೇಟಿ, ಪೂರಕ ಹಿನ್ನೆಲೆ, ಪುರಾಣ ಕಥೆಗಳು, ಉಪಕಥೆಗಳು, ಪ್ರಭಾವಿ ವ್ಯಕ್ತಿಗಳ ಚಿಂತನೆ ಸಾಲುಗಳು ಇದೆ. ಓದುಗರಿಗೆ ಈ ಪ್ರವಾಸ ಕಥನ ಹೊಸ ಅನುಭವ ನೀಡುತ್ತದೆ. ಸುಬ್ಬಯ್ಯನವರು ಇನ್ನಷ್ಟು ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಲಿ ಎಂದರು.

ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಚಾರಿಟೇಬಲ್ ಅಧ್ಯಕ್ಷರಾದ ಎಚ್.ಸುಬ್ಬಯ್ಯ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಕೆ.ಎ.ಎಸ್.ಅಧಿಕಾರಿ ಆರ್.ನಾಗರಾಜ ಶೆಟ್ಟಿ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಜಿ.ಕೆ ಬಸವರಾಜ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ರಿ., ಬಾರಕೂರು ಇದರ ಅಧ್ಯಕ್ಷ ವಾಸುದೇವ ಬೈಕಾಡಿ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕುಂಭಾಶಿ, ಉತ್ತರ ಕನ್ನಡ ಗಾಣಿಗ ಸಂಘ ಕುಮಟಾ ಇದರ ಅಧ್ಯಕ್ಷ ದಾಮೋದರ ಕೆ.ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ನಾಗರಾಜ, ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಫ್ ಸೊಸೈಟಿ ಬೆಂಗಳೂರು ಅಧ್ಯಕ್ಷ ಎಮ್.ವೇಣುಗೋಪಾಲಕೃಷ್ಣ, ಸಂಪರ್ಕಸುಧಾ ಪತ್ರಿಕೆ ಸಂಪಾದಕ ರಘುರಾಮ ಬೈಕಾಡಿ, ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿನ ಮುಖ್ಯೋಪಾಧ್ಯಾಯರಾದ ಗಣೇಶ ಚೆಲ್ಲಿಮಕ್ಕಿ, ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಗಣೇಶ ಗಾಣಿಗ, ಬೆಂಗಳೂರು ಉದ್ಯಮಿ ಸೂರ್ಯನಾರಾಯಣ ಜಡ್ಡಿನಹಿತ್ಲು, ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಮಾಲ್ತಾರು, ಸುರೇಶ ಶೆಟ್ಟಿ ಜೀವನ ಸುಪಾರಿ, ಬಾಸ್ಕೇರಿ ಹೊನ್ನಾವರ, ಹಕ್ಲಾಡಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ.ಕಿಶೋರ್ ಕುಮಾರ್ ಶೆಟ್ಟಿ, ಟ್ರಸ್ಟಿನ ಟ್ರಸ್ಟಿಗಳು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕ, ಲೇಖಕ ಶ್ರೀರಾಜ್ ವಕ್ವಾಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!