spot_img
Sunday, March 29, 2026
spot_img

ವಿದ್ಯಾರ್ಜನೆಗೆ ಸುಂದರ ತಾಣ ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು

ಕುಂದಾಪುರ: ಶ್ರೀ ವೆಂಕಟರಮಣ ದೇವ್ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ) ನ ಶೀರ್ಷಿಕೆಯಲ್ಲಿ ಶೈಕ್ಷಣಿಕ ಗುಣಮಟ್ಟ ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಬೇಕು ಎಂಬ ಮಹತ್ವಕಾಂಕ್ಷೆಯಿಂದ ಕುಂದಾಪುರದ ಹೃದಯ ಭಾಗದಲ್ಲಿ ನಿರ್ಮಾಣವಾದ ವಿದ್ಯಾಸಂಸ್ಥೆಯೇ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು.

2010-2011 ರಿಂದ ಪ್ರಾರಂಭವಾದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿಜ್ಞಾನ ಹಾಗೂ ವ್ಯವಹಾರಿಕ ಅಧ್ಯಯನ ವಿಭಾಗದ ಶಿಕ್ಷಣ ಕ್ರಮವನ್ನು ನೀಡುತ್ತ ಬಂದಿದ್ದು ವಿಜ್ಞಾನ ವಿಭಾಗದಲ್ಲಿ PCMB, PCMS, PCMC ಹಾಗೂ ವಾಣಿಜ್ಯ ವಿಭಾಗದಲ್ಲಿ EBAS, EBAC, EBAB ಪಠ್ಯಕ್ರಮ ವಿಭಾಗಗಳನ್ನು ಹೊಂದಿದ್ದು ಹಂತ ಹಂತವಾಗಿ ಪ್ರಗತಿ ಪಥದಲ್ಲಿ ಸಾಗುತ್ತಿದೆ.

ಈ ವಿದ್ಯಾಸಂಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಿ ಜ್ಞಾನ ಕೌಶಲ್ಯವನ್ನು ವೃದ್ಧಿಸುವ ಸಲುವಾಗಿ ಅವರ ಕಲಿಕಾ ಸಮಸ್ಯೆಗಳಿಗೆ ಮಿಡಿಯುವ ಮಾನವೀಯ ಅನುಕಂಪದ ಅಮೃತ ಸ್ಪರ್ಶವಿದೆ. ಇದರ ಫಲವಾಗಿ ಸಂಸ್ಥೆಯು 2017-18 ರಿಂದ ಮೊದಲುಗೊಂಡು ನೂರಕ್ಕೆ ನೂರು ಪರಿಪೂರ್ಣ ಫಲಿತಾಂಶವನ್ನು ದಾಖಲಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ 2017-18 ರಲ್ಲಿ ಸತ್ಯಶ್ರೀ 4ನೇ ರ್‍ಯಾಂಕ್, ವಾಣಿಜ್ಯ ವಿಭಾಗದಲ್ಲಿ ಸೌಜನ್ಯ 8ನೇ ರ್‍ಯಾಂಕ್, 2018-19 ರಲ್ಲಿ ಹುಮಾ ಹುಸ್ನಾ 10ನೇ ರ್‍ಯಾಂಕ್, 2019-20 ರಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ವಾತಿ ಪೈ 4ನೇ ರ್‍ಯಾಂಕ್, ದೀಕ್ಷಾ ಶ್ಯಾನುಭಾಗ್ 10ನೇ ರ್‍ಯಾಂಕ್, ವಿಜ್ಞಾನ ವಿಭಾಗದಲ್ಲಿ ಸೋಹಾನ್ ಕುಮಾರ್ ಶೆಟ್ಟಿ 7ನೇ ರ್‍ಯಾಂಕ್ ಹಾಗೂ ಭುವನ್ 8ನೇ ರ್‍ಯಾಂಕ್ ಪಡೆಯುವುದರ ಮೂಲಕ ಕಾಲೇಜು ತನ್ನ ಗರಿಮೆಯನ್ನು ಹೆಚ್ಚಿಸಿದೆ.

ವಿದ್ಯಾರ್ಥಿಗಳ ಜ್ಞಾನದಾಹದ ಸುಂದರ ಸುಮಧುರ ಕನಸಿಗೆ ಭದ್ರ ಬುನಾದಿಯಾಗಿ CET, NEET, JEE, CA, CS ತರಬೇತಿಯ ಅವಶ್ಯಕತೆಯನ್ನು ಮನಗಂಡು ಕಾಲೇಜಿನ ಅವಧಿಯಲ್ಲಿಯೇ ಪರಿಣಿತ, ಅನುಭವಿ, ಉಪನ್ಯಾಸಕ ವೃಂದದವರಿಂದ ತರಬೇತಿ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅದ್ವಿತೀಯ ಫಲಿತಾಂಶವನ್ನು ದಾಖಲಿಸುವುದರ ಮೂಲಕ ತಮ್ಮ ಭವ್ಯ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ವಿಪುಲ ಸ್ಥಳಾವಕಾಶ, ನುರಿತ ಉಪನ್ಯಾಸಕ ವೃಂದ, ಸುಸಜ್ಜಿತ ಗ್ರಂಥ ಭಂಡಾರ, ಸಕಲ ಸೌಲಭ್ಯಗಳುಳ್ಳ ವೈಜ್ಞಾನಿಕ ಪ್ರಯೋಗಾಲಯಗಳು, ಅತ್ಯಾಧುನಿಕ ಕಂಪ್ಯೂಟರ್ ಕೊಠಡಿ, ವಿದ್ಯಾರ್ಥಿಗಳ ಸಾಂಸ್ಕ್ರತಿಕ ಪುನಶ್ಚೇತನಕ್ಕೆ ಅನುವು, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿತವಾದ ಗುಣಮಟ್ಟದ ತರಬೇತಿ, ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನಕ್ಕಾಗಿ Business Day, Industrial visit, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಕಾಲೇಜ್ ಬಸ್ ವ್ಯವಸ್ಥೆ, ಮಧ್ಯಾಹ್ನದ ಭೋಜನ ವ್ಯವಸ್ಥೆ ಇವು ಕಾಲೇಜಿನ ವಿಶೇಷತೆಗಳು.
ಶಿಸ್ತುಬದ್ಧ, ಮೌಲ್ಯಯುತ, ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು ಎನ್ನುವುದು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾರ್‍ಯದರ್ಶಿ ಕೆ. ರಾಧಾಕೃಷ್ಣ ಶೆಣೈಯವರ ಕನಸು. ಈ ಕನಸು ನನಸು ಮಾಡಲು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತುದಾರರಾಗಿ ಕಾರ್ಯನಿರ್ವಹಿಸಿರುವ ಶ್ರೀಮತಿ ರಾಗಿಣಿಯವರ ಸಾರಥ್ಯದಲ್ಲಿ ಅನುಭವಿ, ನುರಿತ ಉಪನ್ಯಾಸಕ ಬಳಗದೊಂದಿಗೆ ಕಾಲೇಜು ಯಶಸ್ಸಿನ ಮುನ್ನಡೆಯತ್ತ ಸಾಗುತ್ತಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ೯೮ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದ ಪ್ರಥಮ ಪಿ.ಯು.ಸಿ ಯ ಪ್ರವೇಶ ಪ್ರಕ್ರಿಯೆಯಲ್ಲಿ ಉಚಿತ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು ಸಂಸ್ಥೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಅಜ್ಞಾನದ ಕಳೆಯ ಕಿತ್ತು, ಸುಜ್ಞಾನದ ಬೀಜ ಬಿತ್ತಿ, ಸದ್ಗುಣಗಳ ಗೊಬ್ಬರ ಹಾಕಿ, ನವ ಚೇತನದ ಫಲವ ಮೂಡಿಸಿ, ಸಮಾಜಕ್ಕೆ ಸತ್ಪ್ರಜೆಯನ್ನು ನೀಡುವುದೇ ಶ್ರೀ ವೆಂಕಟರಮಣ ಕಾಲೇಜಿನ ಧ್ಯೇಯ.

ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಬೇರೆ ಯಾವುದೇ ಶಾಖೆಗಳು ಇರುವುದಿಲ್ಲ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!