spot_img
Saturday, March 28, 2026
spot_img

ಹಳ್ಳಿಗಳಿಗೆ ಬಸ್ ಓಡಿಸದಿದ್ದರೆ ಕುಂದಾಪುರ ಕೆ.ಎಸ್.ಆರ್.ಟಿ.ಸಿ ಡಿಪೋಗೆ ವಿದ್ಯಾರ್ಥಿಗಳಿಂದಲೇ ಮುತ್ತಿಗೆ- ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಎಚ್ಚರಿಕೆ

ಕುಂದಾಪುರ, ಮಾ.12: ಇವತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಂಠಿತವಾಗುತ್ತಿದ್ದರೆ ಅಲ್ಲಿ ಕೆ.ಎಸ್.ಆರ್.ಟಿ.ಸಿ ಪಾತ್ರವೂ ಇದೆ. ಹೆದ್ದಾರಿಯಲ್ಲಿ ಬಸ್ ಓಡಿಸಲು ತೋರಿಸುವ ಆಸಕ್ತಿ ಹಳ್ಳಿಗಳಲ್ಲಿ ಬಸ್ ಓಡಿಸಲು ತೋರಿಸುವುದಿಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕೆ‌.ಎಸ್.ಆರ್.ಟಿ.ಸಿ ಬಸ್‌ನ ಅಗತ್ಯತೆ ಇರುತ್ತದೆ. ಹಳ್ಳಿಗಳ ಮಾರ್ಗಕ್ಕೆ ಬಸ್ ಓಡಿಸುವಂತೆ ಸೂಚಿಸಿದರೂ ಅಧಿಕಾರಿಗಳ ಸ್ಪಂದನವಿಲ್ಲ. ಮುಂದಿನ ಶೈಕ್ಷಣಿಕ ವರ್ಷದ ಆರಂಭದೊಳಗೆ ಬೇಡಿಕೆ ಇರುವ ಗ್ರಾಮಾಂತರ ಮಾರ್ಗದಲ್ಲಿ ಬಸ್ ಓಡಿಸದೇ ಇದ್ದರೆ ಕುಂದಾಪುರ ಕೆ.ಎಸ್.ಆರ್.ಟಿ.ಸಿ ಡಿಪೋ ಎದುರು ಸುಮಾರು 25 ಸಾವಿರ ವಿದ್ಯಾರ್ಥಿಗಳು ಮುತ್ತಿಗೆ ಹಾಕಲಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಗುಡುಗಿದ್ದಾರೆ.

ನೂಜಾಡಿ-೨ ಬಗ್ವಾಡಿ ಶಾಲೆಯ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.

ಗ್ರಾಮೀಣ ಪ್ರದೇಶಕ್ಕೆ ಬಸ್ ಓಡಿಸುವಂತೆ ಸಾಕಷ್ಟು ಮನವಿಗಳು ಬರುತ್ತಲೇ ಇದೆ. ಅದಕ್ಕೆ ಕೆ.ಎಸ್.ಆರ್.ಟಿ.ಸಿ ಡಿಪೋ ಮೆನೇಜರ್ ಸ್ಪಂದಿಸುತ್ತಿಲ್ಲ. ಹಳ್ಳಿಗಳ ಮಾರ್ಗದಲ್ಲಿ ಬಸ್ ಓಡಿಸಿದರೆ ನಷ್ಟ ಎನ್ನುವ ಭಾವನೆ ಅಧಿಕಾರಿಗಳಲ್ಲಿ ಇರಬಹುದು. ಕೆ.ಎಸ್.ಆರ್.ಟಿ.ಸಿ ಇರುವುದು ಜನರಿಗೆ ಸೇವೆ ನೀಡಲು, ಲಾಭ ಗಳಿಕೆಗೆ ಉದ್ದೇಶಕ್ಕೆ ಅಲ್ಲ ಎನ್ನುವುದನ್ನು ಅಧಿಕಾರಿಗಳು ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಮಾಡಲಿದ್ದೇನೆ ಎಂದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!