spot_img
Saturday, March 28, 2026
spot_img

ಬ್ಯಾನರ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಸಂಭವಿಸಿ ಯುವಕ ಸಾವು

ಕುಂದಾಪುರ: ಸೌಕೂರು ರಥೋತ್ಸವಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಹರಿದು ಯುವಕನೋರ್ವ ಮೃತ ಪಟ್ಟ ಘಟನೆ ಫೆ.25ರ ರಾತ್ರಿ ನಡೆದಿದೆ. ಇದೇ ಸಂದರ್ಭ ಮತ್ತೋರ್ವ ವ್ಯಕ್ತಿ ತೀವ್ರ ಗಾಯಗೊಂಡಿದ್ದಾರೆ.

ಸೌಕೂರು ನಿವಾಸಿ ಮೋಹನ ದೇವಾಡಿಗ ಪುತ್ರ ಪ್ರಶಾಂತ್ ದೇವಾಡಿಗ (26ವ) ಮೃತಪಟ್ಟ ದುರ್ದೈವಿ. ಸೌಕೂರು ರಥಬೀದಿಯ ಶ್ರೀಧರ ದೇವಾಡಿಗ ಗಮಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಪ್ರಶಾಂತ್ ದೇವಾಡಿಗ ಚಿತ್ತೂರಿನಲ್ಲಿ ಸೌಪರ್ಣಿಕಾ ಸಹಕಾರ ಸಂಘದಲ್ಲಿ ಕೆಲಸ ನಿರ್ವಹಿಸಿದ್ದರು. ಉತ್ಸಾಹಿ ಯುವಕನಾಗಿದ್ದ ಪ್ರಶಾಂತ್ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಸೌಮ್ಯ ಸ್ವಭಾವದ ಪ್ರಶಾಂತ್ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತಿದ್ದರು.

ಶುಕ್ರವಾರ ರಾತ್ರಿ ದೇವಸ್ಥಾನದ ಹತ್ತಿರ ರಥೋತ್ಸವಕ್ಕೆ ಶುಭಕೋರಿ ಬ್ಯಾನರ್ ಅಳವಡಿಸುತ್ತಿದ್ದಾಗ ವಿದ್ಯುತ್ ಶಾಕ್ ಸಂಭವಿಸಿತ್ತು. ತಕ್ಷಣ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದರು ಪ್ರಯೋಜನವಾಗಲಿಲ್ಲ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!