spot_img
Saturday, March 28, 2026
spot_img

ಕುಂದಾಪುರ ರೈಲು ನಿಲ್ದಾಣದ ಪಿ.ಆರ್.ಎಸ್‌ಗೆ ಜನಮನ್ನಣೆ: ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ

ಕುಂದಾಪುರದಂತ ಧಾರ್ಮಿಕ ಪ್ರವಾಸಿ ನಿಲ್ದಾಣಕ್ಕೆ ಪಿ.ಆರ್.ಎಸ್ ಬೇಕು ಎಂಬ ಕುಂದಾಪುರ ರೈಲ್ವೇ ಸಮಿತಿಯ ಹೋರಾಟ ಮತ್ತು ಅದಕ್ಕೆ ಸಿಕ್ಕ ಯಶಸ್ಸಿಗೆ ಸರಿಯಾಗಿ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ದಿನದಿಂದ ದಿನಕ್ಕೆ ಕುಂದಾಪುರ ರೈಲು ನಿಲ್ದಾಣಕ್ಜೆ ಬಂದು ಪಿ ಆರ್ ಎಸ್ ಟಿಕೇಟ್ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕುಂದಾಪುರ ರೈಲ್ವೇ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳ ಬುಕ್ಕಿಂಗ್ ಗಮನಿಸಿದರೆ ಕೆಲವೊಂದು ದಿನಗಳಲ್ಲಿ ಒಂದೂವರೆ ಲಕ್ಷದಷ್ಟು ಆದಾಯ ಕೇವಲ ಪಿ.ಆರ್.ಎಸ್ ವ್ಯವಹಾರದಲ್ಲಿ ಬಂದಿದೆ. ಪೋಸ್ಟ್ ಆಫೀಸಲ್ಲಿ ಪಿ.ಆರ್.ಎಸ್ ಇದ್ದಾಗ ಟಿಕೇಟ್ ಮೇಲೆ ಹೆಚ್ಚುವರಿಯಾಗಿ ಒಂದಷ್ಟು ಸರ್ವಿಸ್ ಚಾರ್ಜ್ ಕೊಡ ಬೇಕಾಗಿತ್ತು. ಅದೂ ಅಲ್ಲದೇ ಟಿಕೇಟ್ ರದ್ದತಿ ಕೂಡಾ ಸುಲಭವಾಗಿರಲಿಲ್ಲ. ಅದರೆ ಕುಂದಾಪುರ ರೈಲು ನಿಲ್ದಾಣದಲ್ಲೇ ಟಿಕೇಟ್ ಬುಕ್ ಮಾಡಿದರೆ ಸರ್ವಿಸ್ ಚಾರ್ಜ್ ಉಳಿತಾಯದ ಜತೆ ಸುಲಭವಾಗಿ ಟಿಕೇಟ್ ರದ್ದತಿಗಳಂತಹ ಸೇವೆಗಳನ್ನೂ ಪಡೆಯಬಹುದು.
ಅದೂ ಅಲ್ಲದೇ ಪೋಸ್ಟ್ ಆಫೀಸ್ ಭಾನುವಾರ ಮತ್ತು ರಜಾದಿನಗಳಲ್ಲಿ ಕಾರ್ಯನಿರ್ವಹಿಸಿದೇ ಇರುವುದು ಮತ್ತಿತರ ತಾಂತ್ರಿಕ ಸಮಸ್ಯೆಗಳನ್ನೂ ಹೊಂದಿತ್ತು. ಆದರೆ ಕುಂದಾಪುರ ರೈಲು ನಿಲ್ದಾಣದಲ್ಲಿ ವಾರದ ಎಲ್ಲಾ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ನುರಿತ ಸಿಬ್ಬಂದಿಯಿಂದ ಟಿಕೇಟ್ ಮುಂಗಡ ಕಾಯ್ದಿರಿಸುವಿಕೆ ಅತ್ಯಂತ ಸುಲಭವಾಗಿದೆ.

ದೂರದ ಊರುಗಳಾದ ಗಂಗೊಳ್ಳಿ, ಸಿದ್ದಾಪುರ, ಕೋಟಾ ಕಡೆಯಿಂದ ಸಾರ್ವಜನಿಕರು ಕುಂದಾಪುರ ನಿಲ್ದಾಣದಲ್ಲಿ ಟಿಕೇಟ್ ಕಾಯ್ದಿರಿಸುತ್ತಿದ್ದು, ಕುಂದಾಪುರ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್, ಕುಂದಾಪುರ ಮುಂಬಯಿ ಮತ್ಸ್ಯಗಂಧಾ ಎಕ್ಸ್‌ಪ್ರೆಸ್, ದೆಹಲಿ ಗುಜರಾತ್ ಕೇರಳ ರೈಲುಗಳೂ ಅತೀ ಹೆಚ್ಚು ಬೇಡಿಕೆಯಲ್ಲಿವೆ.
ಕೊಂಕಣ ರೈಲ್ವೆ ಈ ಪಿ.ಆರ್.ಎಸ್ ಸೌಲಭ್ಯ ಎಷ್ಟೋ ಹಿಂದೆಯೇ ಒದಗಿಸಬೇಕಾಗಿದ್ದು, ನಿರ್ಲಕ್ಷ್ಯ ವಹಿಸಿದ ಕಾರಣ ಹಲವು ವರ್ಷಗಳ ಕಾಲ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಈಗ ಕುಂದಾಪುರ ನಿಲ್ದಾಣದಲ್ಲೇ ಟಿಕೇಟ್ ಮುಂಗಡ ಬುಕ್ಕಿಂಗ್ ಸಾದ್ಯವಾದ ಕಾರಣ, ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ಕುಂದಾಪುರ ರೈಲ್ವೇ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!