spot_img
Thursday, May 14, 2026
spot_img

ನಾವುಂದ: ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನರಿಗೆ ಗೌರವ ಸನ್ಮಾನ

ಬೈಂದೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ದೈವಾರಾಧನೆ ಮತ್ತು ಜಾನಪದ ವಿದ್ವಾಂಸ, ಹಿರಿಯರಾದ ಬನ್ನಂಜೆ ಬಾಬು ಅಮೀನ್ ಅವರನ್ನು ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯ ಸ್ಥಾಪಕ ಅಧ್ಯಕ್ಷ ಡಾ. ಎನ್.ಕೆ ಬಿಲ್ಲವ ಗೌರವಿಸಿದರು.

“ನಾವುಂದ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಂದರ್ಭದಲ್ಲಿ ಹಲವಾರು ಬಾರಿ ಆಗಮಿಸಿ, ವಾಸ್ತುವಿನ್ಯಾಸ, ಪಾರಂಪರಿಕ ವಿಚಾರಗಳ ಕುರಿತು ಸಲಹೆ ನೀಡಿದ್ದನ್ನು ನೆನಪಿಸಿಕೊಂಡು, ಅಮೀನರದು ನಿಜವಾದ ಅರ್ಥದಲ್ಲಿ ಹೋರಾಟದ ಬದುಕು, ಹಲವು ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಬೆರಗು ಹುಟ್ಟಸುವಂತಹದ್ದು, ಮುಂಬೈಯಲ್ಲಿ ನನ್ನ ನಿಕಟವರ್ತಿಗಳಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಶ್ರದ್ಧೆ, ಕುತೂಹಲ, ಆಸಕ್ತಿ, ನಿರಂತರ ಶ್ರಮ ಮತ್ತು ಸಂಸ್ಕೃತಿ ಪ್ರೀತಿಯಿಂದ ಹೇಗೆ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂಬುದಕ್ಕೆ ಬನ್ನಂಜೆ ಬಾಬು ಅಮೀನರ ಜೀವನ ನಮಗೆಲ್ಲ ಮಾದರಿ ಎಂದರು”.

ಬಿ.ಎ.ಹಂಝಾ ನಾವುಂದ,ರಮೇಶ್.ಎಮ್. ಹುಬ್ಳಿ ಆಲೂರು, ಆಡಳಿತ ಮಂಡಳಿಯ ಸದಸ್ಯರು,ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!