spot_img
Saturday, March 28, 2026
spot_img

ಉದ್ಯಮಿ ಸುರೇಶ ಪಡುಕೋಣೆ ನಿಧನ

ಮುಂಬಯಿ ಉದ್ಯಮಿ, ದೇವಾಡಿಗ ಸಮಾಜದ ಮುಂದಾಳು ಸುರೇಶ ಡಿ.ಪಡುಕೋಣೆ (82ವ) ಫೆ.13ರಂದು ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಮುಂಬಯಿಲ್ಲಿ ಉದ್ಯಮ ಆರಂಭಿಸಿದ ಅವರು 1968ರಲ್ಲಿ ಅಪೋಲೊ ಬೋರಿಂಗ್ ವರ್ಕ್ಸ್ ಸ್ಥಾಪನೆ ಮಾಡಿದರು. ಉದ್ಯಮ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದರು. ಹುಟ್ಟೂರಿನ ಬಗ್ಗೆಯೂ ಅಭಿಮಾನ ಇರಿಸಿಕೊಂಡು ಧಾರ್ಮಿಕ, ಶಿಕ್ಷಣ, ಕ್ರೀಡೆ, ಸಾಮಾಜಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು.ಕುಂದಾಪುರದ ಹಂಗಳೂರಿನಲ್ಲಿ 67 ಅಡಿ ಎತ್ತರದ ಆಂಜನೇಯ ಮೂರ್ತಿಯ ಸ್ಥಾಪನೆ, ಕುಂಭಾಶಿ ಅನೆಗುಡ್ಡೆ ವಿನಾಯಕ ದೇವಸ್ಥಾನದ ಸ್ವಾಗತ ಗೋಪುರ ನಿರ್ಮಾಣ ಹೀಗೆ ಧಾರ್ಮಿಕವಾಗಿ ವಿಶೇಷ ಕೊಡುಗೆ ನೀಡಿದ್ದರು.

ದೇವಾಡಿಗ ಸಮಾಜದ ಅಭಿವೃದ್ದಿಗೆ ಒತ್ತು ನೀಡಿದ್ದ ಅವರು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದರು. ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಕ್ರೀಡಾಕೂಟಗಳ ಆಯೋಜಿಸಿ ಕ್ರೀಡಾಳುಗಳನ್ನು ಪ್ರೋತ್ಸಾಹಿಸಿದ್ದರು. ಇವರ ಸೇವೆ, ಸಾಧನೆಗೆ ಹಲವು ಪ್ರಶಸ್ತಿ, ಗೌರವಗಳು ಪ್ರಾಪ್ತವಾಗಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!