Sunday, September 8, 2024

‘ಕಣ್ತೆರೆದು ಕಂಗೊಳಿಸು…’ಕೂಡ್ಲು ಕ್ಷೇತ್ರದ 2ನೇ ಧ್ವನಿಸುರುಳಿ ಬಿಡುಗಡೆ


ಕುಂದಾಪುರ: ‘ಕಣ್ತೆರೆದು ಕಂಗೊಳಿಸು….’ ಎನ್ನುವ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಕ್ಷೇತ್ರದ 2ನೇ ಧ್ವನಿಸುರುಳಿಯ ಬಿಡುಗಡೆ ಸಮಾರಂಭವು ಇತ್ತೀಚೆಗೆ ನಡೆಯಿತು.

ಹಟ್ಟಿಯಂಗಡಿ ಗ್ರಾಮದ ಸಮೀಪವಿರುವ ಕರ್ಕಿ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಹಾಗೂ ಶ್ರೀ ಚೌಡೇಶ್ವರೀ ದೇವಳದಲ್ಲಿ ಇತ್ತೀಚೆಗಷ್ಟೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನಡೆದ ಅಶ್ವತ್ಥ ವೃಕ್ಷ ಉಪನಯನ ಹಾಗೂ, ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿದ್ದು, ಅದರ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ‘ಕಣ್ತೆರೆದು ಕಂಗೊಳಿಸು…’ ಧ್ವನಿಸುರುಳಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಶಯದೇವಿಸುತೆ ಮರವಂತೆ (ಜ್ಯೋತಿ ಎಸ್.ಡಿ)ಯವರು ಈ ಧ್ವನಿಸುರುಳಿಗೆ ನಿರೂಪಣಾ ಸಾಹಿತ್ಯ, ಸುಪ್ರಭಾತ ಹಾಗೂ ಭಕ್ತಿಗೀತೆಗಳ ರಚನೆಯನ್ನು ಮಾಡಿದ್ದು, ನಾಡಿನ ಹೆಸರಾಂತ ಸಂಗೀತ ನಿರ್ದೇಶಕಿ ಕಲಾಶ್ರೀ ಡಾ. ಜಯಶ್ರೀ ಅರವಿಂದ್‌ರವರು ಇವರ ಸಾಹಿತ್ಯಕ್ಕೆ ಸಂಗೀತವನ್ನು ನಿರ್ದೇಶಿಸಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನಾಡಿನ ಹೆಸರಾಂತ ಗಾಯಕ ರಮೇಶ್ಚಂದ್ರ ಬೆಂಗಳೂರು, ಝೀ ಟಿವಿ ಖ್ಯಾತಿಯ ಆಲಾಪ್ ಮೈಸೂರು, ಮತ್ತು ಪ್ರಸಿದ್ಧ ಸುಗಮ ಸಂಗೀತ ಹಾಗೂ ಚಲನಚಿತ್ರಗಳ ಖ್ಯಾತ ಹಿನ್ನಲೆ ಗಾಯಕಿ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀರಕ್ಷಾ ಪ್ರಿಯರಾಮ್ ಬೆಂಗಳೂರು ಇವರ ಗೀತೆಗಳಿಗೆ ತಮ್ಮ ಕಂಠಸಿರಿಯನ್ನಿತ್ತಿದ್ದಾರೆ. ಬೆಂಗಳೂರಿನ ಅರವಿಂದ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ರೆಕಾರ್ಡಿಂಗ್ ಆಗಿದ್ದು, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಅರವಿಂದ್ ಕಿಗ್ಗಾಲ್ ಇದಕ್ಕೆ ಸೌಂಡ್ ಇಂಜಿನಿಯರ್ ಆಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾಲಚಂದ್ರ ಭಟ್ ಧಾರ್ಮಿಕ ಸಭೆ ಉದ್ಘಾಟಿಸಿದ್ದರು. ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕರಾದ ಬಿ. ಗಣೇಶ್, ನ್ಯಾಯವಾದಿ ಹಕ್ಲಾಡಿ ವೈ. ಶರತ್ ಶೆಟ್ಟಿ, ಪುರೋಹಿತರಾದ ಗುರುರಾಜ ಸೋಮಯಾಜಿ ಬ್ರಹ್ಮನಜೆಡ್ಡು (ನೇರಳಕಟ್ಟೆ), ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ, ಶಾರದಾ ದೇವಾಡಿಗ ಚಿತ್ರಾಡಿ, ಅಶ್ವಥವೃಕ್ಷದ ಉಪನಯನ ಉತ್ಸವ ಸಮಿತಿಯ ಕಾರ್ಯದರ್ಶಿ ರಾಜು ಸೌಕೂರು, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಜಗದೀಶ್ ಆಚಾರ್, ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೇಶ್ ಶೆಟ್ಟಿ, ಜಗದೀಶ್ ಆಚಾರ್, ಕೂಡ್ಲು ಶ್ರೀ ಶನೀಶ್ವರ ದೇವಸ್ಥಾನದ ಮೊಕ್ತೇಸರ ಮರ್ಲಣ್ಣ ಹಾಗೂ, ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ಜಯರಾಮ ಬಾಡಬೆಟ್ಟು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಬಿಡುಗಡೆಗೊಂಡ ಧ್ವನಿಸುರುಳಿಯ ಸಂಪೂರ್ಣ ರಚನಕರ್ತೆ ಶಯದೇವಿಸುತೆ ಮರವಂತೆ (ಜ್ಯೋತಿ ಎಸ್.ಡಿ)ಯವರನ್ನು ಸನ್ಮಾನಿಸಲಾಯಿತು.

ತಲ್ಲೂರು ಸಪ್ತಸ್ವರ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ರವಿ ದೇವಾಡಿಗ ಉಪ್ಪಿನಕುದ್ರು ಸ್ವಾಗತಿಸಿದರು. ಹಟ್ಟಿಯಂಗಡಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಿ. ರಾಘವೇಂದ್ರ ಉಡುಪ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ವೆಂಕಟೇಶ ಗಾಣಿಗ ನೇರಳಕಟ್ಟೆ ವಂದಿಸಿದರು.

ತದನಂತರ, ಕುಂದಗನ್ನಡ ರಾಯಬಾರಿ ಮನು ಹಂದಾಡಿ ಅವರಿಂದ ನಗೆ ಹಬ್ಬ ನಡೆಯಿತು. ರಾತ್ರಿ ಪಾವಂಜೆ ಮೇಳದವರಿಂದ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!