spot_img
Saturday, March 28, 2026
spot_img

ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ : ಮಹಾಸಭೆ

ಕುಂದಾಪುರ: ನಾವೇಷ್ಟು ಸುಖ ಶಾಂತಿ ನೆಮ್ಮದಿಯಿಂದ ಇದ್ದೇವೆ ಎನ್ನುವುದಕ್ಕಿಂತ ಯಾವುದೇ ಫಲಾಪೇಕ್ಷೆ ಇಲ್ಲದ ಸಮರ್ಪಣಾ ಮನೋಭಾವದಿಂದ ಅರ್ಪಿಸಿದ ಸೇವೆ ಜನ್ಮ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ನಿವೃತ್ತ ಸಹಾಯಕ ಕಮೀಶನರ್‌ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಪದ್ಮಲೇಖ ಪತ್ರಿಕೆ ಸಂಪಾದಕ ಜಿ. ಗಿರೀಶ್ ಶೆಟ್ಟಿಗಾರ್ ವಿಟ್ಲ ಹೇಳಿದರು.

ಅವರು ಕೋಟೇಶ್ವರ ಸರಸ್ಪತಿ ಕಲ್ಯಾಣ ಮಂಟಪದಲ್ಲಿ ನಡೆದ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ ಇದರ 35ನೇ ವಾರ್ಷಿಕ ಮಹಾಸಭೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ವಕ್ವಾಡಿ ಜನಾರ್ದನ ಶೆಟ್ಟಿಗಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಾ ಕೈಂಕರ್ಯದಿಂದ ತನ್ನ ಎಳಿಗೆಯೊಂದಿಗೆ ಎಲ್ಲರ ಎಳಿಗೆ ಸಾಧಿಸಿದಾಗ ತನ್ನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಬೆಳೆದಾಗ ಸಮಾಜದ ಅಭಿವೃದ್ಧಿ ಸಾದ್ಯ ಎಂದು ಕಲಾವಿದ ರಮೇಶ್ ಕೊಡವೂರು ಹೇಳಿದರು.

ಯೋಗದ ಮೂಲಕ ಅಂತರಂಗ ಮತ್ತು ಬಹಿರಂಗ ಶುದ್ಧಿಯಾದಾಗ ನಲಿವು ಗೆಲುವು ಜಾಸ್ತಿಯಾಗಿ ಸಂಸ್ಕಾರ ಮತ್ತು ಅರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಯೋಗ ಶಿಕ್ಷಕಿ ಮಮತಾ ರೂಪೇಶ್ ಶೆಟ್ಟಿಗಾರ್ ಹೇಳಿದರು.

ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ್ ಶೆಟ್ಟಿಗಾರ್ ಅವರು ಸಂಘದ ಸ್ಥಾಪಕ ಅಧ್ಯಕ್ಷ ದಿ. ಗೋವಿಂದ ಶೆಟ್ಟಿಗಾರರ ಸಂಸ್ಮರಣೆ ಭಾಷಣಗೈದರು. ಸಭೆಯಲ್ಲಿ ಉಡುಪಿ ಉಪವಿಭಾಗದ ಲೋಕೋಪಯೋಗಿ ಕಿರಿಯ ಇಂಜಿನಿಯರ್ ಮಂಜುನಾಥ ಶೆಪೂರ್, ಸಂಘದ ಮಹಿಳಾ ವೇದಿಕೆ ಸಂಚಾಲಕರಾದ ಪ್ರೇಮಾ ಮಂಜುನಾಥ ಶೆಟ್ಟಿಗಾರ್ ಉಪಸ್ಥಿತರಿದ್ದರು. ದೇವುಮನೆ ವಕ್ವಾಡಿ ದಿ. ದುರ್ಗಿ ಮತ್ತು ದಿ. ಶೀನ ಶೆಟ್ಟಿಗಾರ್ ಸ್ಮರಣಾರ್ಥ ದತ್ತಿ ನಿಧಿಯಿಂದ ಮೆಟ್ರಿಕ್ ನಂತರದ ಎಲ್ಲಾ ವಿದ್ಯಾರ್ಥಿಗಳಿಗೆ ವಕ್ವಾಡಿ ಚಂದ್ರ ಶೇಖರ ಶೆಟ್ಟಿಗಾರ ವಿ.ಎಸ್ ಅವರು ಪ್ರೋತ್ಸಾಹ ಧನ ವಿತರಿಸಿದರು.

ಮೂಡು ಗೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ಶೆಟ್ಟಿಗಾರ್, ಗೋವತ್ಸ ಪ್ರಿಯ ಪ್ರಶಶ್ತಿ ಪುರಸ್ಕೃತ ಕುಂಭಾಶಿ ಜ್ಯೋತಿ ಲಕ್ಷ್ಮೀ ಅಶೋಕ್ ಶೆಟ್ಟಿಗಾರ ಸಮಾಜದ ಹಿರಿಯ ಸಾಧಕರಾದ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಕ್ವಾಡಿ ಮಹಾಬಲ ಶೆಟ್ಟಿಗಾರ, ಕುಂಭಾಶಿ ಗುಲಾಬಿ ಟೀಚರ್, ಕೋಟೇಶ್ವರ ಕಮಲಮ್ಮ ಶೆಟ್ಟಿಗಾರ್, ಪಾರ್ವತಿ ಶೆಟ್ಟಿಗಾರ್ ಮಾರ್ಕೋಡು, ಕೃಷ್ಣ ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು. ಸುಶೀಲ ಶೆಟ್ಟಿಗಾರ ಮತ್ತು ತಂಡದವರಿಂದ ಕುಣಿತ ಭಜನೆ, ರಮೇಶ್ ಶೆಟ್ಟಿಗಾರ್ ಇವರಿಂದ ಪದ್ಮಶಾಲಿ ಸಹಸ್ರಾಧಿಪತಿ ಕಾರ್ಯಕೃಮ ನಡೆಸಿಕೊಟ್ಟರು. ವಿಜೇತರಾದ ರಾಜೀವಿ ಶೆಟ್ಟಿಗಾರ ಅವರಿಗೆ ಕಾಳಾವರ ಗಣಪಯ್ಯ ಶೆಟ್ಟಿಗಾರ್ ಬಹುಮಾನ ವಿತರಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ನಿವೃತ್ತ ಪಶು ಸಂಗೋಪನಾ ಇಲಾಖೆಯ ಹಿರಿಯ ನಿರೀಕ್ಷಕರಾದ ಮಂಜುನಾಥ ಶೆಟ್ಟಿಗಾರ್ ಅತಿಥಿಗಳನ್ನು ಗೌರವಿಸಿದರು.

ಇಂದಿರಾ ಜಿ.ಶೆಟ್ಟಿಗಾರ್ ಸ್ವಾಗತಿಸಿದರು. ರಾಜೀವಿ ಲಕ್ಷ್ಮಣ ಶೆಟ್ಟಿಗಾರ್ ವಿದ್ಯಾರ್ಥಿವೇತನ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ವೆಂಕಟೇಶ್ ಶೆಟ್ಟಿಗಾರ್ ವರದಿ ವಾಚಿಸಿದರು. ಖಜಾಂಚಿ ಕೃಷ್ಣ ಮೂರ್ತಿ ಶೆಟ್ಟಿಗಾರ್ ಲೆಕ್ಕಪತ್ರ ಮಂಡಿಸಿದರು. ಪ್ರಮೋದ್ ಶೆಟ್ಟಿಗಾರ್ ಮತ್ತು ನವ್ಯ ನಿರೂಪಿಸಿದರು. ಪ್ರೇಮ ಮಂಜುನಾಥ ಶೆಟ್ಟಿಗಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!