spot_img
Saturday, March 28, 2026
spot_img

ಭಾರತೀಯ ಸಂಗೀತ ಗುರುಗಳಿಗೆ ಅಭಿನಂದನೆ ಕಾರ್ಯ ನಿಜಕ್ಕೂ ಸ್ತುತ್ಯರ್ಹ: ಸುಜಯೀಂದ್ರ ಹಂದೆ

ಕುಂದಾಪುರ: ಸಂಗೀತ, ನಾಟಕ, ಸಾಹಿತ್ಯ ಇವೆಲ್ಲವೂ ನಮ್ಮ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರೆ ಅದೇ ದೊಡ್ಡ ಯಶಸ್ಸು. ಸತೀಶ್ ಭಟ್ ಮಾಳಕೋಡ್ ಅದೃಷ್ಟವಶಾತ್ ಈ ಕರಾವಳಿ ಭಾಗದಲ್ಲಿ ನೆಲೆನಿಂತದ್ದು, ಅನೇಕ ಶಿಷ್ಯರನ್ನು ಹೊಂದಿರುವಂತದ್ದು ನಮಗೆಲ್ಲ ಅತ್ಯಂತ ಸಂತೋಷದ ವಿಷಯ. ಇಂತಹ ಕರಾವಳಿ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಬೆಳೆಸುವಲ್ಲಿ, ಉಳಿಸುವಲ್ಲಿ, ಆಸಕ್ತಿ ಮೂಡಿಸುವಲ್ಲಿ ಸತೀಶ್ ಭಟ್ ಹಾಗೂ ಪ್ರತಿಮಾ ಭಟ್ ಸಾಕಷ್ಟು ಕೆಲಸ ಮಾಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಮನೆಮನೆಗೆ ಹೋಗಿ ಪಾಠ ಮಾಡುತ್ತ ಶಿಷ್ಯರ ಜೊತೆಗೆ ಸಲುಗೆ ಮೂಡಿಸಿಕೊಂಡು, ಪ್ರೀತಿಯಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವ ಮುಖೇನ ಹಿಂದೂಸ್ಥಾನಿ ಸಂಗೀತ ಬೆಳಿಸುವ ಕಾರ್ಯ ಸಮಾಜಕ್ಕೆ ಆರೋಗ್ಯಕರ ಬೆಳವಣಿಗೆ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ಗುರುಪರಂಪರಾ ಸಂಗೀತ ಸಭಾ, ಕುಂದಾಪುರ ಇದರ ಸಂಗೀತೋಪಾಸನ ಕಾರ್ಯಕ್ರಮದಲ್ಲಿ ಪಂಚಮಿ ವೈದ್ಯರ ಗುರುಗಳಾದ ಸತೀಶ್ ಭಟ್ ಮಾಳಕೋಡು, ಪ್ರತಿಮಾ ಭಟ್, ಶಾರದಾ ಹೊಳ್ಳ, ಹಾಗೂ ವೀಣಾ ನಾಯಕ್‌ರನ್ನು ಅಭಿನಂದಿಸಿ ಮಾತನಾಡಿದರು.

ಭಾರತೀಯ ಸಂಗೀತಗಳು ಗುರುವಿನಂದಲೇ ಬರುವಂತಹ ವಿದ್ಯೆಗಳು. ಆದರೆ ಇತ್ತೀಚೆಗೆ ಎಲ್ಲಾ ರಂಗದಲ್ಲೂ ಗುರು ಶಿಷ್ಯರ ಸಂಬಂಧ ಕಳೆದು ಹೋಗುತ್ತಿದೆ. ಉದ್ದೇಶ, ಕಾರಣಗಳಿಗೆ ಎಲ್ಲರೂ ಕಾರಣ. ಪ್ರಯತ್ನಕ್ಕೆ ವೇದಿಕೆ ಇದ್ದೇ ಇದೆ. ಆದರೆ ನನ್ನೆಲ್ಲಾ ವಿದ್ಯಾರ್ಥಿಗಳೂ ಗುರುವೇನು ಎಂಬುದನ್ನರಿತವರಾದ್ದರಿಂದ ನನಗೆ ಸಂಗೀತ ಸುಲಭವಾಗಿದೆ. ಕುಂದಾಪುರ ನನಗೆ ಅದ್ಭುತ ವೇದಿಕೆಯಾಗಿದೆ. ಪರಂಪರೆಯಿಂದೊಡಗೂಡಿದ ಇಂತಹ ಸಂಪ್ರದಾಯಗಳೂ ಈ ಭಾಗದಲ್ಲಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ವಿದ್ವಾನ್ ಸತೀಶ್ ಭಟ್ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷೀಯ ಮಾತನ್ನಾಡಿದರು. ಗುರುಪರಂಪರಾ ಶಿಷ್ಯರು ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪರಿಣಿತ ವೈದ್ಯ ಪ್ರಾರ್ಥಿಸಿ, ಪಂಚಮಿ ವೈದ್ಯ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಪೂಜಾ ಆಚಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಬಳಿಕ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಶಿಷ್ಯ ಬಳಗದವರಿಂದ ಗಾನ ಯಾನ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!