spot_img
Friday, March 27, 2026
spot_img

ಅಂಪಾರು: ಅಪರಾಧ ತಡೆ ಮಾಸಾಚರಣೆ

ಕುಂದಾಪುರ: ಸಂಜಯಗಾಂಧಿ ಪ್ರೌಢ ಶಾಲೆ, ಸಂಜಯಗಾಂಧಿ ಆಂಗ್ಲಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಂಕರನಾರಾಯಣ ಪೊಲೀಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಸಂಜಯಗಾಂಧಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಶಂಕರನಾರಾಯಣ ಠಾಣಾ ಪಿ‌ಎಸ್‌ಐ ಸುದರ್ಶನ್ ಮಾತನಾಡಿ, ಪ್ರತಿ ವರ್ಷ ಡಿಸೆಂಬರ್ ತಿಂಗಳು ಅಪರಾಧ ತಡೆ ಮಾಸಾಚರಣೆ ನಡೆಸಲು ಕಾರಣ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದಾಗಿದೆ. ವಿದ್ಯಾರ್ಥಿಜೀವನದಲ್ಲಿ ಕಲಿಕೆಯ ಕಡೆ ವಿಶೇಷ ಗಮನವಿಡಿ, ಪೊಲಿಸ್ ಇಲಾಖೆಗೆ ಸೇರಿ, ದೇಶಸೇವೆಯನ್ನು ಮಾಡಿ ಎಂದರು.

ಶಂಕರನಾರಾಯಣ ಠಾಣೆಯ ಎ.ಎಸ್.ಐ ಸುಧಾಕರ್, ಎ.ಎಸ್.ಐ.ಆಚಾರ್ಯ ರಾಜ ಗಣಪತಿ, ಹೆಡ್ ಕಾನ್ಸ್ಟೇಬಲ್ ಪ್ರಭಾಕರ್ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು, ಶಿಕ್ಷಕವ್ರಂದ, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಉದಯ ಕುಮಾರ್. ಬಿ.ಹಾಯ್ಕಾಡಿ. ಸ್ವಾಗತಿಸಿದರು, ಗೌರವ ಶಿಕ್ಷಕರಾದ ಗೋವಿಂದ ಲಮಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!