spot_img
Friday, March 27, 2026
spot_img

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೈಂದೂರು ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟನೆ

ಬೈಂದೂರು: ಕುಂದಾಪುರದಲ್ಲಿ ಪ್ರಧಾನ ಕಛೇರಿ ಹಾಗೂ 8 ಶಾಖೆಗಳನ್ನು ಹೊಂದಿರುವ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರು ಶಾಖೆಯ ಸ್ವಂತ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಡಿ.19ರಂದು ನಡೆಯಿತು.

ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ.ವಂ. ಸ್ಟ್ಯಾನಿ ತಾವ್ರೊ ಬೈಂದೂರು ಶಾಖೆಯ ಸ್ವಂತ ಕಟ್ಟಡ ಉದ್ಘಾಟಿಸಿ, ಬಾಡಿಗೆ ಮನೆಯಲ್ಲಿರುವರು ನಮ್ಮ ಸ್ವಂತ ಮನೆಗೆ ಹಾತೊರೆಯುವುದು ಸಹಜ. ಸ್ವಂತ ಮನೆಯಲ್ಲಿ ನಮಗೆ ಅತ್ಯಂತ ಖುಷಿ ಕೊಡುವ ವಿಚಾರ. ಅದರಂತೆ. ರೋಜರಿ ಸೊಸೈಟಿ ಇವತ್ತು ತಮ್ಮ ಇನ್ನೊಂದು ಶಾಖೆಗೆ ಸ್ವಂತ ಕಟ್ಟಡವನ್ನು ನಿರ್ಮಿಸಿದೆ. ಇದು ಬೆಳವಣಿಗೆಯ ಸಂಕೇತ. ಇನ್ನಷ್ಟು ಸೇವೆ ಬೈಂದೂರು ಶಾಖೆಯ ಮೂಲಕ ಸದಸ್ಯರಿಗೆ ಸಿಗುವಂತಾಗಲಿ ಎಂದರು.

ಬೈಂದೂರು ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರು ವಂ. ವಿನ್ಸೆಂಟ್ ಕುವೆಲ್ಲೊ ಆಶೀರ್ವಚನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಜರಿ ಸೊಸೈಟಿಯ ಅಧ್ಯಕ್ಷರಾದ ಜೋನ್ಸನ್ ಡಿ‌ಆಲ್ಮೇಡಾ ಮಾತನಾಡಿ, ಕುಂದಾಪುರ ವಲಯ ಕಥೊಲಿಕ್ ಸಭಾದ ಹಿರಿಯರು ದೂರದರ್ಶಿತ್ವ ಇಟ್ಟುಕೊಂಡು ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಅಲ್ಪ ಮೊತ್ತದೊಂದಿಗೆ ಆರಂಭಗೊಂಡು, ಸಂಸ್ಥೆ ಇಂದು ಬಹು ಎತ್ತರಕ್ಕೆ ಬೆಳೆದಿದೆ, ನಮ್ಮ ಸಂಸ್ಥೆಯ ಗ್ರಾಹಕರಿಗೆ ನಾವು ಉತ್ತಮ ಸೇವೆ ನೀಡಲು ಸದಾ ಬದ್ದ, ಸದಸ್ಯರಿಗೆ ಪ್ರಾಮಾಣಿಕ ನಿಸ್ವಾರ್ಥ ಸೇವೆ ನೀಡಲು ಸದಾ ಸಿದ್ಧರಿದ್ದೇವೆ. ಇವತ್ತಿನ ಈ ಬೆಳವಣಿಗೆಗೆ ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರ ಮತ್ತು ಸಿಂಬಂದಿ ಉತ್ತಮ ಸೇವೆಯಿಂದ ಕಾರಣವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್.ರಾಜು ಪೂಜಾರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ಪ್ರಕಾಶ್ ಲೋಬೊ, ವಿಲ್ಫ್ರೆಡ್ ಮಿನೇಜೆಸ್, ಶಾಂತಿ ಕರ್ವಾಲ್ಲೊ, ಬ್ಯಾಪ್ಟಿಸ್ಟ್ ಡಾಯಸ್ ಇನ್ನಿತರರು ಉಪಸ್ಥಿತರಿದ್ದರು.

ಬೈಂದೂರು ಶಾಖಾ ಸಭಾಪತಿ ಶಾಂತಿ ಡಾಯಸ್ ಸ್ವಾಗತಿಸಿ. ಉಪಾಧ್ಯಕ್ಷ ಕಿರಣ್ ಲೋಬೊ ಅತಿಥಿಗಳನ್ನು ಗೌರಿಸಿದರು. ಸೊಸೈಟಿಯ ಪ್ರಭಾರ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ‌ಅಲ್ಮೇಡಾ ವಂದಿಸಿದರು. ನಿರ್ದೇಶಕಿ ಡಾಯ್ನಾ ಡಿ‌ಆಲ್ಮೇಡಾ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!