spot_img
Friday, March 27, 2026
spot_img

ಕುಂದಾಪುರ ಕಾಂಗ್ರೆಸ್: ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕುಂದಾಪುರ: ರಾಜ್ಯಾದ್ಯಂತ ಡಿ.11ರಂದು ಬೆಳಿಗ್ಗೆ 11ಗಂಟೆಗೆ ಏಕಕಾಲದಲ್ಲಿ ಝೂಮ್ ಮೂಲಕ ನಡೆಯುತ್ತಿರುವ ಸದಸ್ಯತ್ವ ಅಭಿಯಾನದ ಭಾಗವಾಗಿ ಕುಂದಾಪುರ ಪುರಸಭೆಯ ಬೂತ್ ನಂಬರ್ 12ರಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಿ.ದೇವಕಿ ಸಣ್ಣಯ್ಯ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ, ಆಶಾ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶಾ ಕರ್ವಾಲೋ, ನಾಗರಾಜ ನಾಯ್ಕ, ಅಶೋಕ ಸುವರ್ಣ, ದಿನೇಶ್ ಬೆಟ್ಟ, ಪ್ರಭಾಕರ್ ಕಡ್ಗಿಮನೆ, ಸಚಿನ್ ಕುಮಾರ್, ಕೆ.ಲಲಿತಾ, ಗೌರಮ್ಮ, ಸುಶೀಲ ಪದ್ಮನಾಭ, ಮುತ್ತು, ಜಯ, ವೀಣಾ, ಸರಸ್ವತಿ ಶ್ರೀನಿವಾಸ, ಸುಶೀಲಾ ಮಾಣಿಮನೆ, ಶೋಬಾ ಮಾಣಿಮನೆ, ಲೀಲಾವತಿ ದೇವಾಡಿಗ, ಮುಕಾಂಬಿಕಾ, ಮಹಿಮಾಬಿ, ರಾಜೀವಿ, ವಿಜಯಕುಮಾರ್ ದೇವಾಡಿಗ ಮುಂತಾದವರು ತಮ್ಮಗಳ ಸದಸ್ಯತ್ವವನ್ನು ನವೀಕರಿಸಿದರು.

ಈ ಅಭಿಮಾನದ ಉದ್ಘಾಟನೆಯು ಇಂದು ಬೆಳಿಗ್ಗೆ 11 ಗಂಟೆಗೆ ಝೂಮ್ ಮೂಲಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನವರ ಮನೆಯ ವಾರ್ಡ್‌ಗಳಲ್ಲಿ ನೆರವೇರಿತ್ತು. ಆ ನಂತರ ಅದರ ಭಾಗವಾಗಿ ರಾಜ್ಯಾದ್ಯಂತ ಎಲ್ಲಾ ನಾಯಕರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ವಾರ್ಡುಗಳಲ್ಲಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಈ ಅಭಿಯಾನದಲ್ಲಿ ಭಾಗವಹಿಸಿದರು ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!