Sunday, September 8, 2024

ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್: ಅರ್ಧಕ್ಕೆ ನಿಂತ ಮನೆ ಪೂರ್ಣಗೊಳಿಸಿ ಕುಟುಂಬಕ್ಕೆ ಹಸ್ತಾಂತರ


ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಪ್ಪುಂದ ಗ್ರಾಮದ ಕಾಸನಾಡಿಯಲ್ಲಿ ಪೂರ್ಣಗೊಳಿಸಿರುವ ‘ಶ್ರೀ ವರಲಕ್ಷ್ಮೀ’ ನೂತನ ಗೃಹದ ಪ್ರವೇಶೋತ್ಸವ, ಹಸ್ತಾಂತರ ಕಾರ್ಯಕ್ರಮ ಶನಿವಾರ ಜರುಗಿತು.


ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಹಾಗೂ ಪತ್ನಿ ಮಾಲತಿ ಗೋವಿಂದ ಬಾಬು ಪೂಜಾರಿ ಮನೆಯ ಮುಖ್ಯಸ್ಥರಾದ ರಮೇಶ-ವಿಜಯಾ ದಂಪತಿಗೆ ಮನೆಯ ಕೀ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾಮಾಜಿಕ ಸೇವೆಯನ್ನು ಗುರಿಯಾಗಿರಿಸಿಕೊಂಡ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್, ಮನೆ ಪೂರ್ಣಗೊಳಿಸಲಾಗದೆ ಒದ್ದಾಡುತ್ತಿದ್ದ ಉಪ್ಪುಂದದ ಕಾಸನಾಡಿ ರಮೇಶ ಪೂಜಾರಿ-ವಿಜಯಾ ದಂಪತಿಯ ಮನೆಯನ್ನು ಪೂರ್ಣಗೊಳಿಸಿ, ಇಂದು ಅವರಿಗೆ ಹಸ್ತಾಂತರಿಸಿದೆ. ಟ್ರಸ್ಟ್ ಬಡವರಿಗೆ ನಿರ್ಮಿಸಿಕೊಟ್ಟ ಎರಡನೆ ಮನೆ ಇದಾಗಿದ್ದು, ಇನ್ನೆರಡು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದರು.


ಬಾಲ್ಯದಲ್ಲಿ ಬಡತನದ ಕಹಿಯುಂಡು ಬೆಳೆದ ನನಗೆ ಬಡವರ ಸಂಕಷ್ಟದ ಅರಿವಿದೆ. ಶ್ರಮದ ದುಡಿಮೆಯಿಂದ ಮೇಲೆಬಂದ ಬಳಿಕ ದುಡಿಮೆಯ ಒಂದಂಶವನ್ನು ಬಡವರಿಗಾಗಿ ವೆಚ್ಚ ಮಾಡುತ್ತಿದ್ದೇನೆ. ಬಿಜೂರು, ಉಪ್ಪುಂದ ಭಾಗದ ಜನರ ಕುಡಿಯುವ ನೀರಿನ ಕೊರತೆ ನೀಗುವುದರ ಜತೆಗೆ ಕೋವಿಡ್ ಸಂಕಷ್ಟ ಕಾಲದಲ್ಲಿ ಸಾವಿರಾರು ಜನರಿಗೆ ಆಹಾರ ಪೂರೈಸಿದ್ದೇನೆ. ಅನ್ಯ ಸಾಮಾಜಿಕ ಕಾರ್ಯಗಳಿಗೂ ನನ್ನಿಂದಾದ ಸಹಾಯ ಮಾಡುತ್ತಿದ್ದೇನೆ. ಕಷ್ಟದಲ್ಲಿರುವವರ ಕಣ್ಣೀರು ತೊಡೆದಾಗ ಸಂತೋಷ, ನೆಮ್ಮದಿ ಸಿಗುತ್ತಿದೆ ಎಂದು ಗೋವಿಂದ ಬಾಬು ಪೂಜಾರಿ ಹೇಳಿದರು


ಗೋವಿಂದ ಪೂಜಾರಿ ಅವರ ತಂದೆ, ತಾಯಿ ಬಾಬು ಪೂಜಾರಿ-ಮಂಜಮ್ಮ ಪೂಜಾರಿ ಮನೆಯನ್ನು ಉದ್ಘಾಟಿಸಿದರು. ಮಣಿಪಾಲದ ರಘುನಾಥ ಜೋಯಿಸ್ ಮನೆಯ ನಾಮ ಫಲಕ ಅನಾವರಣ ಮಾಡಿ ಆಶೀರ್ವದಿಸಿದರು.


ನೂತನ ಗೃಹದ ವಿಜಯಾ ರಮೇಶ್ ಪೂಜಾರಿ ಮಾತನಾಡಿ, ನಾನು ಪೈಂಟರ್ ವೃತ್ತಿ ಮಾಡುತ್ತಿದ್ದರೆ ಪತ್ನಿ ವಿಜಯಾ ಹಾಲಿನ ಸಹಕಾರಿ ಸಂಘದಲ್ಲಿ ಸಹಾಯಕಳಾಗಿ ದುಡಿಯುತ್ತಿದ್ದಾಳೆ. ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಐದು ರ್ಷಗಳ ಹಿಂದೆ ಮನೆ ಕಟ್ಟಿಕೊಳ್ಳುವ ಕನಸಿನೊಂದಿಗೆ ಕೆಲಸ ಆರಂಭಿಸಿದೆ. ಐದು ವರ್ಷಗಳಿಂದ ಆರ್ಥಿಕ ಅಡಚಣೆಯಿಂದ ನಿರ್ಮಾಣ ಅರ್ಧಕ್ಕೆ ನಿಂತಿತು. ದಾನಿಗಳಾಗಿ ಗುರುತಿಸಿಕೊಂಡಿರುವ ಗೋವಿಂದ ಬಾಬು ಪೂಜಾರಿ ಅವರ ಔದಾರ್ಯದಿಂದ ಇಂದು ನನ್ನ ಕನಸು ನನಸಾಗಿದೆ. ಅವರಿಗೆ, ಅವರ ಕುಟುಂಬಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.


ಈ ಸಂದರ್ಭ ಶ್ರೀನಿವಾಸ ಉಬ್ಜೇರಿ, ಎನ್.ಎ. ಪೂಜಾರಿ, ಗುರುರಾಜ ಪಂಜು ಪೂಜಾರಿ, ಜಯರಾಮ ಶೆಟ್ಟಿ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!