Sunday, September 8, 2024

ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ: ಬೈಂದೂರು ಶಾಸಕರ ನೇತೃತ್ವದಲ್ಲಿ ಸಭೆ


ಕುಂದಾಪುರ: ಗ್ರಾಮೀಣ ಭಾಗಗಳನ್ನು ಹೆಚ್ಚು ಒಳಗೊಂಡಿರುವ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆಟ್ ವರ್ಕ್ ಸಮಸ್ಯೆ ವ್ಯಾಪಕವಾಗಿದ್ದು, ಪ್ರಸ್ತುತ ಲಾಕ್‌ಡೌನ್ ಕಾರಣದಿಂದ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಣ ಆನ್‌ಲೈನ್ ಮೂಲಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸಂಬಂಧಪಟ್ಟ ನೆಟ್‌ವರ್ಕ್ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿದರು.


ಮೊಬೈಲ್ ಅವಲಂಬಿತ ಪ್ರಸಕ್ತ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಅತಿ ಅಗತ್ಯವಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯಲ್ಲಿ ನಿಂತುಕೊಳ್ಳುವುದು, ಕಿಲೋ ಮೀಟರ್‌ಗಟ್ಟಲೆ ಹೋಗಬೇಕಾದ್ದು, ಕಾಡು ಪ್ರಾಣಿಗಳ ಕಾಟ, ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡು ಸಂಬಂಧಿಸಿದವರೊಂದಿಗೆ ಮಾತನಾಡಿದ್ದೇನೆ. ಹೊಸದಾಗಿ ಮೊಬೈಲ್ ಟವರ್ ಮಾಡುವಲ್ಲಿ ಭೂಪರಿವರ್ತನೆಯಾದ ಜಾಗಗಳ ಸಮಸ್ಯೆ ಎದುರಾಗುತ್ತಿದ್ದು ಹಾಗಾಗಿ ಅದರಿಂದ ವಿನಾಯತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಹಾಗೆಯೇ ಗ್ರಾಮ ಪಂಚಾಯತ್ ನಿರಾಪೇಕ್ಷಣ ಪತ್ರದ ಸಮಸ್ಯೆ ಎದುರಿಸುತಿದ್ದ ಗಂಗೊಳ್ಳಿ, ಕಟ್‌ಬೆಲ್ತೂರು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸಿ ಶೀಘ್ರ ಅನುಮತಿ ನೀಡುವಂತೆ ಸೂಚಿಸಲಾಗಿದೆ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!