Sunday, September 8, 2024

ಸುಂದರ ಬರಹ ಜೀವನವನ್ನು ಎತ್ತರಕ್ಕೆ ಏರಿಸುತ್ತದೆ-ಅಶೋಕ್ ತೆಕ್ಕಟ್ಟೆ


ತೆಕ್ಕಟ್ಟೆ, ಜೂ.25: ಅಂದವಾದ ಅಕ್ಷರಗಳು ಪಠ್ಯದಲ್ಲಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಓದುವುದಕ್ಕೂ, ಬರೆಯುವುದಕ್ಕೂ ಅಸಕ್ತಿಯನ್ನು ಬೆಳೆಸುತ್ತದೆ. ಇದರಿಂದಾಗಿ ನಮ್ಮ ಚಟುವಟಿಕೆಗಳು ಕಲಾತ್ಮಕವಾಗಿರುತ್ತದೆ. ವಿದ್ಯಾರ್ಥಿಗಳು ಸಾಹಿತ್ಯಾತ್ಮಕವಾಗಿ ಮುಂದುವರಿಯುವುದಕ್ಕೆ ಉತ್ತೇಜನ ದೊರೆಯುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಸುಂದರ ಬರವಣಿಗೆಯು ಜೀವನವನ್ನು ಎತ್ತರಕ್ಕೆ ಏರಿಸುತ್ತದೆ. ಅಭ್ಯಾಸ ಮಾಡಿ ಎಂದು ಅಧ್ಯಾಪಕ ಅಶೋಕ್ ತೆಕ್ಕಟ್ಟೆ ಉಪದೇಶಿಸಿದರು.


ಯಶಸ್ವಿ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ರಜಾರಂಗು-21 ಆನ್‌ಲೈನ್ ಉಚಿತ ಶಿಬಿರದ ಎರಡನೇ ದಿನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಶೋಕ್ ತೆಕ್ಕಟ್ಟೆ ಇವರಿಗೆ ಡಸ್ಟರ್ ಹಾಗೂ ಬಳಪವನ್ನು ಕಾರ್ಯದರ್ಶಿ ವೆಂಕಟೇಶ ವೈದ್ಯ ನೀಡಿ ಗೌರವಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಪನ್ಯಾಸಕ ಶಂಕರನಾರಾಯಣ ಉಪಾದ್ಯ, ಮಲ್ಯಾಡಿ ಲೈವ್‌ನ ಮುಖ್ಯಸ್ಥ ಪ್ರಶಾಂತ್ ಮಲ್ಯಾಡಿ ಉಪಸ್ಥಿತರಿದ್ದರು. ಶಿಬಿರದ ಮಾರ್ಗದರ್ಶಕರಾದ ರೋಹಿತ್ ಎಸ್. ಬೈಕಾಡಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!