spot_img
Thursday, March 26, 2026
spot_img

ಜಿಲ್ಲೆಯಲ್ಲಿ ಖಾಸಗಿ ಬಸ್ಸು ಸಂಚಾರ ಆರಂಭಿಸಲು ಸಿ‌ಐಟಿಯು ಆಗ್ರಹ


ಕುಂದಾಪುರ: ಕರಾವಳಿಯ ಜನರ ಜೀವನಾಡಿಯಾಗಿರುವ ಬಸ್ಸು ಸಂಚಾರದ ಸ್ಥಗಿತತೆ ಜನರ ಕೆಲಸಕಾರ್ಯಗಳಿಗೆ ತೊಡಕಾಗಿದೆ. ಜಿಲ್ಲೆಯಲ್ಲಿ ಕಡಿಮೆ ವೇತನದಲ್ಲಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರಿಗೆ ಲಾಕ್ ಡೌನ್ ತೆರವಿನಿಂದ ಉದ್ಯೋಗಕ್ಕೆ ಹೋಗಲು ಅವಕಾಶವಿದ್ದರು ಬಸ್ಸುಗಳ ಕೊರತೆ ಹಾಗು ವಿಪರೀತ ಪ್ರಯಾಣದರವು ದುಡಿಮೆಯಿಂದ ವಂಚಿಸಿದೆ. ಆದ್ದರಿಂದ ಸರ್ಕಾರ ಖಾಸಗಿ ಬಸ್ಸು ಉದ್ಯಮಕ್ಕೆ ಅಗತ್ಯ ನೆರವು ನೀಡುವ ಜೊತೆಗೆ ಬಸ್ಸು ಸಂಚಾರ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಿ‌ಐಟಿಯು ಜಿಲ್ಲಾ ಸಮಿತಿ ಒತ್ತಾಯಿಸಿದೆ.


ಉಡುಪಿಯಲ್ಲಿ ಕೆಲವೇ ಸರಕಾರಿ ಸಿಟಿ ಬಸ್ಸುಗಳು ಚಲಿಸುತ್ತಿವೆ. ಅದನ್ನು ಹೆಚ್ಚಿಸಬೇಕು. ಹಾಗೆಯೇ ಜನ ಸಂಚಾರ ಜಾಸ್ತಿ ಇರುವ ಸಂಧರ್ಭಗಳಲ್ಲಿ ಹೆಚ್ಚುವರಿ ಬಸ್ಸುಗಳನ್ನು ಹಾಕಬೇಕು. ಸೇವೆ ಕೊಡಬೇಕಾದ ಸರಕಾರಿ ಬಸ್ಸುಗಳು ಲಾಭ ನಷ್ಟದ ಲೆಕ್ಕಚಾರದಿಂದಾಗಿ ವಿಪರೀತ ಹಣ ವಸೂಲಿ ಮಾಡಲಾಗುತ್ತಿದೆ. ಜನರ ನೆರವಿಗೆ ಬರಬೇಕಾದ ಜಿಲ್ಲಾಡಳಿತ ಮೌನ ವಹಿಸಿರುವುದರಿಂದ ಜನರು ಸಂಕಷ್ಟದಲ್ಲಿದ್ದಾರೆ.


ಕೇರಳ ರಾಜ್ಯದಲ್ಲಿ ಅಲ್ಲಿನ ಸರಕಾರವು ಲಾಕ್‌ಡೌನ್ ಅವಧಿಯಲ್ಲಿ ಖಾಸಗಿ ಬಸ್ಸು ಉದ್ಯಮಕ್ಕೆ ತೆರಿಗೆ ರಿಯಾಯಿತಿ ನೀಡಿದ ರೀತಿಯಲ್ಲಿಯೇ ಕರ್ನಾಟಕ ಸರಕಾರವು ಅವರಿಗೆ ನೆರವು ನೀಡಿದರೆ ಕೆಲಸ ಕಳೆದುಕೊಂಡ ಬಸ್ಸು ನೌಕರರಿಗೂ ದುಡಿಮೆ ಲಭಿಸಿ ಅವರ ಕುಟುಂಬಗಳಿಗೂ ಒಂದಿಷ್ಟು ಆದಾಯ ಬರುವಂತಾಗುತ್ತದೆ. ಜಿಲ್ಲೆಯ ಜನರ ಚಟುವಟಿಕೆಗಳು ಗರಿಗೆದರಿ ಜಿಲ್ಲೆಯಲ್ಲಿ ಆರ್ಥಿಕ ಚೇತರಿಕೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಮೌನವಾಗಿರುವುದು ಸರಿಯಲ್ಲ. ಕೂಡಲೇ ಸರಕಾರದ ಗಮನ ಸೆಳೆದು ಈ ಬಗ್ಗೆ ಕಾಳಜಿ ವಹಿಸಬೇಕೆಂದು ಸಿ‌ಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!