spot_img
Tuesday, March 24, 2026
spot_img

ಸ್ಟುಡಿಯೊ ತೆರೆಯಲು ಅವಕಾಶ ಕೋರಿ ಮುಖ್ಯಮಂತ್ರಿಗೆ ಮನವಿ


ಛಾಯಾಗ್ರಾಹಕರು ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಲ್ಪಟ್ಟಿರುವುದರಿಂದ ಅವರಿಗೆ ಕೋವಿಡ್ ಪರಿಹಾರದ ಪ್ಯಾಕೇಜ್ ನೀಡಬೇಕು. ಕೋವಿಡ್ ಕಾರ್ಯಸೂಚಿ ಪಾಲಿಸಿ ಸ್ಟುಡಿಯೊ ತೆರೆಯಲು ಅವಕಾಶ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಛಾಯಾಗ್ರಾಹಕರ ಸಂಘ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭಾನುವಾರ ಶಿಕಾರಿಪುರದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು.


ರಾಜ್ಯದ ವಿವಿಧೆಡೆ ಒಂದು ಲಕ್ಷ ಛಾಯಾಗ್ರಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೃತ್ತಿ ಅವರು ಮತ್ತು ಅವರ ಅವಲಂಬಿತರು ಸೇರಿ ಆರು ಲಕ್ಷ ಜನರಿಗೆ ಅನ್ನ ನೀಡುತ್ತಿದೆ. ಸರಣಿ ಕೋವಿಡ್ ಲಾಕ್‌ಡೌನ್‌ನಿಂದ ಸಭೆ, ಸಮಾರಂಭಗಳು ನಡೆಯದ ಕಾರಣ ಅವರು ಉದ್ಯೋಗ, ಆದಾಯ ಕಳೆದುಕೊಂಡಿದ್ದಾರೆ. ಕುಟುಂಬ ನಿರ್ವಹಣೆಯ ವೆಚ್ಚ ತೂಗಿಸುವುದು ಅಸಾಧ್ಯವಾಗಿದೆ. ತಮ್ಮ ವೃತ್ತಿಗೆ ಪೂರಕವಾದ ಉಡುಪು, ಪರಿಕರಗಳ ಖರೀದಿಗೆ ಮಾಡಿದ ಸಾಲ ತೀರಿಸಲಾಗುತ್ತಿಲ್ಲ. ಆದುದರಿಂದ ಪ್ಯಾಕೇಜ್, ಸ್ಟುಡಿಯೊ ತೆರೆಯುವ ಅವಕಾಶದ ಜತೆಗೆ ಛಾಯಾಗ್ರಾಹಕ ವೃತ್ತಿಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ, ಅದಕ್ಕೆ ನೀಡುವ ಎಲ್ಲ ಸೌಲಭ್ಯಗಳನ್ನು ಕೊಡಬೇಕು. ಬ್ಯಾಂಕ್ ಸಾಲ ಬಡ್ಡಿ ಮನ್ನಾ ಮಾಡುವುದಲ್ಲದೆ, ಕಂತು ಪಾವತಿ ಮುಂದೂಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.


ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಎಲ್ಲ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆ ಯೊಂದಿಗೆ, ಸ್ಟುಡಿಯೊ ತೆರೆಯಲು ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಮೌಖಿಕ ಅನುಮೋದನೆ ನೀಡಿದರು. ಹಾಜರಿದ್ದ ಸಂಸದ ಬಿ. ವೈ. ರಾಘವೇಂದ್ರ ಛಾಯಾಗ್ರಾಹಕರ ಸಮಸ್ಯೆಗಳನ್ನು ಮುಖ್ಯ ಮಂತ್ರಿಗಳಿಗೆ ಮನದಟ್ಟು ಮಾಡಿದರು ಎಂದು ಸಂಘದ ಸಂಚಾಲಕ ಅಶೋಕಕುಮಾರ ಶೆಟ್ಟಿ ನಾವುಂದ ತಿಳಿಸಿದ್ದಾರೆ.


ಜಿಲ್ಲಾ ಸಂಘದ ಉಪಾಧ್ಯಕ್ಷ ರಾಜ ಮಠದಬೆಟ್ಟು, ಕುಂದಾಪುರ ವಲಯದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಸಂಚಾಲಕ ಜಿ. ಕೆ. ಗಿರೀಶ್, ಮಾಜಿ ಅಧ್ಯಕ್ಷ ಉಪ್ಪುಂದ ಉದಯ ಪಡಿಯಾರ್ ನಿಯೋಗದಲ್ಲಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!