spot_img
Tuesday, March 24, 2026
spot_img

ಕನ್ನುಕರೆ ಫಾಲ್ಕನ್ ಕ್ಲಬ್ ವತಿಯಿಂದ ಅಕ್ಸಿಜನ್ ಒಳಗೊಂಡ ಅಂಬುಲೆನ್ಸ್ ಸೇವೆ ಆರಂಭ


ಕುಂದಾಪುರ: ಕನ್ನುಕರೆ ಫಾಲ್ಕನ್ ಕ್ಲಬ್ ವತಿಯಿಂದ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ 19 ಸೋಂಕಿತರಿಗಾಗಿ ಆಕ್ಸಿಜನ್ ಸಿಲಿಂಡರ್ ಒಳಗೊಂಡಿರುವ ಉಚಿತ ಅಂಬುಲೆನ್ಸ್ ತುರ್ತು ಸೇವಾ ಕಾರ್ಯಕ್ಕೆ ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಚಾಲನೆ ನೀಡಿದರು.


ಕೋಟೇಶ್ವರ ನಾರಾಯಣ ಹೆಲ್ತ್‌ಕೇರ್‌ನ ವೈದ್ಯಾಧಿಕಾರಿ ಡಾ| ಪ್ರಸಾದ್ ಅವರು ತುರ್ತುಸೇವೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಮುಖ ಅಂಶಗಳ ಬಗ್ಗೆ ವಿಶೇಷವಾದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.


ಈ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ, ಗ್ರಾ.ಪಂ. ಸದಸ್ಯ ವಿಜಯ ಭಂಡಾರಿ, ಪಾಲ್ಕನ್ ಕ್ಲಬ್ ತೆಕ್ಕಟ್ಟೆ ಕನ್ನುಕರೆ ಇದರ ಅಧ್ಯಕ್ಷ ಮಹಮದ್ ಸಲಾಂ, ತೆಕ್ಕಟ್ಟೆ ಕನ್ನುಕೆರೆ ಮಸೀದಿ ಇದರ ಅಧ್ಯಕ್ಷ ಶಾನ್ವಾಜ್, ಅಬ್ದುಲ್ ಖಾದರ್, ಇರ್ಫಾನ್ ಶೇಖ್, ಮಹಮದ್ ಆಸೀಫ್, ಆದಿಲ್ ಗಫರ್, ಇರ್ಫಾನ್ ಮೊಯ್ದಿನ್, ರಿಯಾಜ್, ನಿಸಾರ್, ಅಲ್ಫಾಜ್, ಶೌದ್ ಮತ್ತಿತರರು ಉಪಸ್ಥಿತರಿದ್ದರು.


ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕೋವಿಡ್ ಸೋಂಕಿತರಿಗೆ ತುರ್ತು ಸ್ಪಂದನೆ ಮಾಡುವ ನಿಟ್ಟಿನಿಂದ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸನ್‌ಟ್ರೇಟರ್ ವ್ಯವಸ್ಥೆಯನ್ನು ಒಳಗೊಂಡಂತೆ 24×7 ಆಂಬುಲೆನ್ ಉಚಿತ ಸೇವೆ ನೀಡುವ ಮಹತ್ವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಮೊದಲು ಗ್ರಾಮ ಮಟ್ಟದ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ತುರ್ತು ಸೇವೆಗಾಗಿ ಮೊಬೈಲ್ ಸಂಖ್ಯೆ: 8277170424 ಗೆ ಸಂಪರ್ಕಿಸಬಹುದು. ಎಂದು ಮಹಮದ್ ಸಲಾಂ ಕನ್ನುಕೆರೆ ಅಧ್ಯಕ್ಷರು, ಫಾಲ್ಕನ್ ಕ್ಲಬ್ ಕನ್ನುಕರೆ, ತೆಕ್ಕಟ್ಟೆ ಇವರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!