spot_img
Tuesday, March 24, 2026
spot_img

ಲಸಿಕೆ ಗೊಂದಲ ನಿವಾರಿಸಲು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆಗ್ರಹ

ಕುಂದಾಪುರ, ಮೇ.12: ಲಸಿಕೆ ನೀಡುವುದರಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಈ ವಿಚಾರದಲ್ಲಿ ಹಿರಿಯ ನಾಗರಿಕರು ಮತ್ತು ೪೫ ವರ್ಷ ಮೇಲ್ಪಟ್ಟವರು ಆತಂಕಕ್ಕಿಡಾಗಿದ್ದು ಈ ಕುರಿತು ಸರಕಾರ ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಇರುವ ಗೊಂದಲ ಮತ್ತು ಆತಂಕ ನಿವಾರಿಸಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ಧಾರೆ.
ಬಹಳಷ್ಟು ಹಿರಿಯ ನಾಗರಿಕರು ಒಂದು ಡೋಸ್ ಲಸಿಕೆ ತೆಗೆದುಕೊಂಡು 60 ದಿನವಾದರೂ ಇನ್ನೊಂದು ಡೋಸ್ ಲಸಿಕೆ ಲಭ್ಯವಾಗಿಲ್ಲ.ಆರೋಗ್ಯ ಇಲಾಖೆಯ ಪ್ರಕಟಣೆ ಪ್ರಕಾರ ಒಂದು ಡೋಸ್ ಲಸಿಕೆ ಪಡೆದು 4 ವಾರದಲ್ಲಿ 2 ನೇ ಡೋಸ್ ಲಸಿಕೆ ಪಡೆಯಬೇಕು.ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಲಾಕಡೌನ ನಡುವೆ ಲಸಿಕಾ ಕೆಂದ್ರಕ್ಕೆ ಅಲೆದಾಡುತಿದ್ದಾರೆ. ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಸದ್ಯಕ್ಕೆ ಲಭ್ಯವಿಲ್ಲ ಎಂದು ಲಸಿಕಾ ಕೇಂದ್ರದಲ್ಲಿ ತಿಳಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ನಾಗರಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿಗದಿತ ಸಮಯಕ್ಕೆ 2ನೇ ಡೋಸ್ ಲಸಿಕೆ ತೆಗೆದುಕೊಳ್ಳದ ಕಾರಣ ತಾವು ತೆಗೆದು ಮೊದಲ ಡೋಸ್ ವ್ಯರ್ಥವಾಗಿದೆ ಎನ್ನುವ ಸಂಶಯ ಅವರಲ್ಲಿರುವ ಕಾರಣ ಅವರಿಗೆ ಕೂಡಲೇ ಲಸಿಕೆ ನೀಡಬೇಕು ಮತ್ತು ಅವರಲ್ಲಿರುವ ಸಂಶಯ ನಿವಾರಿಸಬೇಕು.


45 ವರ್ಷ ಮೇಲ್ಪಟ್ಟವರು ತಮಗೂ ಇದೇ ಸಮಸ್ಯೆ ಎದುರಾಗಬಹುದು ಎನ್ನುವ ಭೀತಿಯಲ್ಲಿದ್ದಾರೆ. ಈ ಎರಡು ಹಂತ ಯಶಸ್ವಿಯಾಗಿ ಮುಗಿಸಿ 18 ವರ್ಷ ಮೇಲಿನವರಿಗೆ ಲಸಿಕೆ ನೀಡಲು ಪ್ರಾರಂಭಿಸಬಹುದಿತ್ತು.ಯೋಜನೆ ಮತ್ತು ಯೋಚನೆ ಇಲ್ಲದ ಸರಕಾರದ ಘೋಷಣೆಯಿಂದ ಪ್ರಜೆಗಳು ಹೈರಾಣಾಗಿದ್ದಾರೆ. 2ನೇ ಡೋಸ್ ಲಸಿಕೆಗೆ ಅಲೆದಾಡುವ ಪರಿಸ್ಥಿತಿ ನಿವಾರಿಸಬೇಕು.2ನೇ ಲಸಿಕೆ ವಿಳಂಬದ ದುಷ್ಪರಿಣಾಮದ ಕುರಿತು ಜನರಿಗೆ ತೆಳುವಳಿಕೆ ನೀಡಬೇಕು.ಕಳೆದ ಒಂದು ವಾರದಿಂದ ಶ್ರೀ ಸಾಮಾನ್ಯನ ಈ ಗೊಂದಲಕ್ಕೆ ತೆರೆ ಎಳೆಯಲು ಸಾಧ್ಯವಾಗದಿದ್ದರೆ ಇಂತಹ ಸರಕಾರ ಅಧಿಕಾರದಲ್ಲಿರುವ ಔಚಿತ್ಯ ಮತ್ತು ಅನಿವಾರ್ಯತೆ ಏನು ಎಂದು ಪಶ್ನಿಸಿರುವ ಅವರು ಕೂಡಲೇ ಸರಕಾರ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!