spot_img
Tuesday, March 24, 2026
spot_img

ಬೆಣ್ಣೆಕುದ್ರುವಿನ ಸುನೀತಾ ಅಣ್ಣಪ್ಪ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್


ಬ್ರಹ್ಮಾವರ: ಬಾರಕೂರು ಸಮೀಪದ ಬೆಣ್ಣೆಕುದ್ರು ಮೂಲದ ಮೊಗವೀರ ಸಮಾಜದ ಸುನೀತಾ ಅಣ್ಣಪ್ಪ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.


ಮೇಯರ್ ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಮಾ.೧೦ರಂದು ನಡೆಯಿತು. 35 ಸದಸ್ಯ ಬಲ ಹೊಂದಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುನೀತಾ ಅಣ್ಣಪ್ಪ, ಕಾಂಗ್ರೆಸ್‌ನಿಂದ ರೇವಾ ರಂಗನಾಥ ಸ್ಪರ್ಧಿಸಿದ್ದರು. ಸುನೀತಾ ಅಣ್ಣಪ್ಪ 24 ಮತಗಳನ್ನು ಪಡೆದು ವಿಜೇತರಾದರೆ, ರೇಖಾ ರಂಗನಾಥ್ 11 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.


ಶಿವಮೊಗ್ಗದ ಮಹಾಪೌರರಾಗಿ ಆಯ್ಕೆಯಾಗಿರುವ ಸುನೀತಾ ಅಣ್ಣಪ್ಪ ಅವರು ಬೆಣ್ಣೆಕುದ್ರುವಿನ ನಾಗರತ್ನ ಮತ್ತು ಸೋಮಶೇಖರ ದಂಪತಿಗಳ ಪುತ್ರಿ. ಡಿಪ್ಲೊಮಾ ಎಂಜಿನಿಯರಿಂಗ್, ಬಿ.ಕಾಂ ಮತ್ತು ಎಂ.ಕಾಂ ಪದವೀಧರೆಯಾಗಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ಶಿವಮೊಗ್ಗ ಮಹಾನಗರ ಪಾಲಿಕೆಯ 29ನೇ ವಾರ್ಡ್‌ನಿಂದ ಸತತವಾಗಿ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ.


ಸುನೀತಾ ಇವರ ಪತಿ ಅಣ್ಣಪ್ಪ ಬಿಜೆಪಿ ಕಾರ್ಯಕರ್ತರಾಗಿದ್ದು, ಕಳೆದ ಹಲವು ವರ್ಷಗಳಿಂದ ಬಿಜೆಪಿ ಮಾಧ್ಯಮ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಗವೀರ ಸಂಘಟನೆಯಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು, ಮೊಗವೀರ ಸಂಘಟನೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಏಳ್ಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!