Sunday, September 8, 2024

ನೆಂಪು ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಹುಟ್ಟೂರ ಸನ್ಮಾನ, ಸಾಂಸ್ಕೃತಿಕ ವೈಭವ


ಕುಂದಾಪುರ: ನೆಂಪು ಶ್ರೀ ವಿನಾಯಕ ಯುವಕ ಸಂಘ ಇವರ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ.7ರಂದು ನಡೆದವು. ವೇ| ಮೂ| ಅನಂತೇಶ್ ಭಟ್ ನೆಂಪು ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಚೈತ್ರ ಕುಂದಾಪುರ ಧಾರ್ಮಿಕ ಪ್ರವಚನ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಸಂಜೆ ನೆಂಪು ಶಿವರಾಮ್ ಭಟ್ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಬೆಂಗಳೂರು ಉದ್ಯಮಿ ನೆಂಪು ಸೀತಾರಾಮ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಮತ್ತು ಸಾಹಿತಿಗಳಾದ ನೆಂಪು ನರಸಿಂಹ ಭಟ್ಟ್, ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದೆ ಕುಮಾರಿ ಸಿಂಚನ ನೆಂಪು, ಹಿರಿಯ ಜನಪದ ಕಲಾವಿದ ಐತಣ್ಣ ನೆಂಪು ಅವರಿಗೆ ಹುಟ್ಟೂರ ಸನ್ಮಾನ ಸಲ್ಲಿಸಲಾಯಿತು.


ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಜಗದೀಶ್ ಎಂ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ, ಕೆರಾಡಿ ಇದರ ಧರ್ಮದರ್ಶಿ ಚಂದ್ರಶೇಖರ ಶೆಟ್ಟಿ, ಬಿ‌ಎಸ್ಸೆನೆಲ್ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ನಾಗರಾಜ್ ಭಟ್ ನೆಂಪು, ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇದರ ಪ್ರಾಂಶುಪಾಲರ ರಾಜೀವ ನಾಯಕ್, ದೀಪಕ್ ಕುಮಾರ್ ಶೆಟ್ಟಿ, ನ್ಯಾಯವಾದಿ ರಾಜ್ ಕುಮಾರ್ ನೆಂಪು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.


ಗೋಪಾಲ್ ನಾಯ್ಕ್ ಶಾರಾಳ, ಜಯರಾಜ್ ಶೆಟ್ಟಿ ನೆಂಪು ಹೆರ್ಜಾಡಿ, ರಾಮಕೃಷ್ಣ ಶೆಟ್ಟಿ ಗುಡ್ರಿ, ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೆಟ್ಟಿ, ಉಪಾಧ್ಯಕ್ಷ ಸಂತೋಷ ಪೂಜಾರಿ, ಸದಸ್ಯರಾದ ಸುಕುಮಾರ್ ಶಾರಾಳ, ರವಿ ಗಾಣಿಗ ಕೆಂಚನೂರು, ಸಂಘದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ನೀರ್‌ಕೋಡ್ಲು, ಗೌರವಾಧ್ಯಕ್ಷ ಸಂತೋಷ ಮಂಗಲ್ಸನಕಟ್ಟೆ, ಉಪಸ್ಥಿತರಿದ್ದರು.


ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರದ ಸಹಾಯಕ ಪ್ರಾಧ್ಯಾಪಕ ವೆಂಕಟರಾಮ್ ಭಟ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಉಪನ್ಯಾಸಕ ಗಿರಿರಾಜ್ ಭಟ್ ನೆಂಪು ಶಿವರಾಮ್ ಭಟ್ ಅವರ ಸಂಸ್ಮರಣಾ ಭಾಷಣ ಮಾಡಿದರು. ಸಂದೇಶ ಶೆಟ್ಟಿ ಸಳ್ವಾಡಿ ಕಾರ್ಯಕ್ರಮ ನಿರ್ವಹಿಸಿ ಸಂಘ ಉಪಾಧ್ಯಕ್ಷರಾದ ಮಂಜುನಾಥ ಆಚಾರ್ಯ ವಂದಿಸಿದರು.


ಸಭಾ ಕಾರ್ಯಕ್ರಮದ ಮೊದಲು ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪು ಇಲ್ಲಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಶ್ವಿನಿ ಕೊಂಡದಕುಳಿ ಇವರ ಸಾರಥ್ಯದಲ್ಲಿ ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇಲ್ಲಿನ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವ ರಂಗ ಮತ್ತು ಸಿಂಚನ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಮನು ಹಂದಾಡಿ ಅವರಿಂದ ನಗೆ ಹಬ್ಬ ಮತ್ತು ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಅಭಿಮನ್ಯು ಕಾಳಗ ಪ್ರದರ್ಶನಗೊಂಡಿತು.

ಶ್ರೀವಿನಾಯಕ ಯುವಕ ಸಂಘದ ಸರ್ವ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಯುವಕ ಸಂಘದ ಸದಸ್ಯರ ಉತ್ಸಾಹದ ಓಡಾಟ, ವ್ಯವಸ್ಥಿತ ಕಾರ್ಯಕ್ರಮ ಸಂಘಟನೆ, ಅತಿಥಿ ಸತ್ಕಾರ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!