spot_img
Wednesday, September 2, 2026
spot_img

ಸೆ.6ರಂದು ಮಂದಾರ್ತಿಯಲ್ಲಿ ಯಕ್ಷ ನಕ್ಷತ್ರ ‘ಕಿರಾಡಿ ಉತ್ಸವ’: ಅದ್ದೂರಿ ಯಕ್ಷಗಾನ ಕರ್ಣ ಕಥಾಮೃತ

ಕುಂದಾಪುರ: ಯಕ್ಷ ನಕ್ಷತ್ರ ಟ್ರಸ್ಟ್ ರಿ., ಕಿರಾಡಿ ಆವರ್ಸೆ ಇವರ ನೇತೃತ್ವದಲ್ಲಿ ಯಕ್ಷ ನಕ್ಷತ್ರ ಕಿರಾಡಿ ಉತ್ಸವ ಸೆ.6 ಭಾನುವಾರ ಮಂದಾರ್ತಿಯ ದುರ್ಗಾ ಸನ್ನಧಿ ಶೇಡಿಕೊಡ್ಲು ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷ ನಕ್ಷತ್ರ ಪ್ರಶಸ್ತಿ, ಕಲಾ ಪೋಷಕ ಪ್ರಶಸ್ತಿ, ವಿದ್ಯಾನಿಧಿ ಗೌರವ, ಸಾಂಸ್ಕೃತಿಕ ವೈಭವ ನಡೆಯಲಿದೆ.

ಬೆಳಿಗ್ಗೆ 11.30ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಪ್ರಮೋದ್ ಅಧ್ಯಕ್ಷತೆ ವಹಿಸಲಿದ್ದಾರೆ. ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದಾರೆ. ಸಣಜೆ 4 ಘಂಟೆಯಿಂದ ಸಮಾರೋಪ ನಡೆಯಲಿದೆ. ಸಮಾರೋಪದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ ಆಳ್ವ ವಹಿಸಲಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ.ಜಿ.ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್, ಪೆರ್ಡೂರು ಮೇಳದ ಯಜಮಾನರಾದ ವೈ.ಕರುಣಾಕರ ಶೆಟ್ಟಿ ಸೇರಿದಂತೆ ಶಾಸಕರು, ಉದ್ಯಮಿಗಳು, ಧಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ.

ಟ್ರಸ್ಟ್ ವತಿಯಿಂದ ನೀಡುವ ಕಲಾಪೋಷಕ ಪ್ರಶಸ್ತಿ-2026ನ್ನು ಜಿ.ಶಂಕರ್ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಅವರಿಗೆ ಪ್ರದಾನ ಮಾಡಲಾಗುವುದು. ಯಕ್ಷನಕ್ಷತ್ರ ಪ್ರಶಸ್ತಿ-2026ನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಐರ್‌ಬೈಲ್ ಆನಂದ ಶೆಟ್ಟಿ ಅವರಿಗೆ ಪ್ರದಾನ ನೀಡಲಾಗುವುದು. ಈ ಸಾಲಿನ ಕಲಾಪೋಷಕ ಪ್ರಶಸ್ತಿಯನ್ನು ರಮೇಶ್ ಶೆಟ್ಟಿ, ಚಾರಾ ನಾಗಯ್ಯ ಶೆಟ್ಟಿ, ಶಂಭು ತಿಂಗಳಾಯ, ಪ್ರದೀಪ್ ಶೆಟ್ಟಿ, ರಮೇಶ ಕಾಂಚನ್, ಸುಮತಿ ಶೆಡ್ತಿ ಅವರಿಗೆ ನೀಡಲಾಗುವುದು. ಹಿರಿಯ ಪ್ರಸಂಗಕರ್ತ ರಮೇಶ್ಮಂಜು ಕುಂಭಾಸಿ, ಹಿರಿಯ ಚಂಡೆ ವಾದಕರಾದ ಶಿವಾನಂದ ಕೋಟ, ಹಿರಿಯ ಕಲಾವಿದರಾದ ರಮೇಶ್ ಭಂಡಾರಿ, ಮಹಮ್ಮದ್ ಗೌಸ್, ಮೊಳಹಳ್ಳಿ ಕೃಷ್ಣ, ಚಕ್ರಮೈದಾನ ಕೃಷ್ಣ ಅವರನ್ನು ಸನ್ಮಾನಿಸಲಾಗುವುದು. ಮರಣೋತ್ತರವಾಗಿ ದಿ.ಕಣ್ಣಿಮನೆ ಗಣಪತಿ ಭಟ್ ಗೌರವಾರ್ಪಣೆ ನಡೆಯಲಿದೆ. ಪ್ರತಿಭಾವಂತ ಕಲಾವಿದರಾದ ಪ್ರಸಂಗಕರ್ತ, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು, ಭಾಗವತರಾದ ಕರುಣಾಕರ ಶೆಟ್ಟಿ, ಪುರಂಧರ ಮುಡ್ಕಣಿ, ವಿಜಯ ಬೀಜಮಕ್ಕಿ, ಕಾವ್ಯಶ್ರೀ ಅಜೇರು, ಸುನಿಲ್ ಹೊಲಾಡು ಅವರನ್ನು ಸನ್ಮಾನಿಸಲಾಗುವುದು.

ದಿ.ಹಳ್ಳಿ ರಾಮಚಂದ್ರ ಶಾಸ್ತ್ರಿ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ. ಸ್ವರ ಸಪ್ತಮಿ ತೆಂಕು ಬಡಗಿನ ಏಳು ಜನ ಭಾಗವತರಿಂದ ಸ್ವರ ಮಾಧುರ್ಯ ನಡೆಯಲಿದೆ. ಭಾಗವತರುಗಳಾದ ಶ್ರೀರಕ್ಷಾ, ಮೂಡುಬೆಳ್ಳೆ, ಬ್ರಹ್ಮೂರು, ಕಾನಗೋಡು, ಕನ್ನಡಿಕಟ್ಟೆ, ಮೊಗೆಬೆಟ್ಟು, ಕಾವ್ಯಶ್ರೀ, ಕರ್ಕಿ, ಯಲ್ಲಾಪುರ, ಮಂದಾರ್ತಿ, ಹೆಗ್ಗಾರ್, ಪದ್ಯಾಣ, ಕೌಶಲ್, ಜೋಗಿ, ಮೂಡುಬಗೆ ಭಾಗವಹಿಸಲಿದ್ದಾರೆ.

ಬಳಿಕ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ನಂತರ ಯಕ್ಷನಕ್ಷತ್ರ ಟ್ರಸ್ಟ್ ಕಿರಾಡಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕರ್ಣ ಕಥಾಮೃತ ಎನ್ನುವ ಅದ್ದೂರಿಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಯಕ್ಷನಕ್ಷತ್ರ ಟ್ರಸ್ಟ್ ಮುಖ್ಯಸ್ಥರಾದ ಪ್ರಕಾಶ್ ಮೊಗವೀರ ಕಿರಾಡಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!