spot_img
Saturday, August 29, 2026
spot_img

ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಿರಿಮಂಜೇಶ್ವರ ವಾರ್ಷಿಕ ಮಹಾಸಭೆ | 66 ಲಕ್ಷ ನಿವ್ವಳ ಲಾಭ: ಶೇ.18 ಡಿವಿಡೆಂಡ್ ಘೋಷಣೆ

ಕುಂದಾಪುರ: 1990ರಲ್ಲಿ ಸ್ಥಾಪನೆಗೊಂಡ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ವರದಿ ವರ್ಷದಲ್ಲಿ ರೂ.31,40,52,298.34 ಠೇವಣಾತಿಗಳನ್ನು ಹೊಂದಿದ್ದು, ರೂ.24,98,05,503 ಸಾಲ ನೀಡಿದ್ದು, 2025-26ನೇ ಸಾಲಿನಲ್ಲಿ ರೂ.66,72,026.4 ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ 18% ಡಿವಿಡೆಂಟ್ ನೀಡಲಯ ನಿರ್ಧರಿಸಲಾಗಿದೆ ಎಂದು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕಿರಿಮಂಜೇಶ್ವರ ಇದರ ಅಧ್ಯಕ್ಷರಾದ ಅನ್ನಪೂರ್ಣ ಉಡುಪ ಹೇಳಿದರು.

ಆ.29ರಂದು ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕಿರಿಮಂಜೇಶ್ವರ ಇದರ 2025 26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದಲ್ಲಿ ‘ಅ’ ತರಗತಿಯ ಒಟ್ಟು ಸದಸ್ಯರು 1930, ಆ ತರಗತಿ 2, ಇ ತರಗತಿ ಸದಸ್ಯರು 4949, ಈ ತರಗತಿ ಸದಸ್ಯರು 93, ಉ ತರಗತಿ ಸದಸ್ಯರು 424 ಆಗಿದೆ. ಒಟ್ಟ ಸದಸ್ಯರಿಂದ 54,12,200 ಪಾಲು ಬಂಡವಾಳವನ್ನು ಹೊಂದಿದೆ ಎಂದರು.

ಸಂಘವು ಪಡಿತರ ವ್ಯಾಪಾರ ವಹಿವಾಟು ವಿಭಾಗದಲ್ಲಿ ರೂ.7,02,075,84 ವ್ಯಾಪಾರ ಲಾಭ ಗಳಿಸಿದೆ. ಮುದ್ರಣ ವಿಭಾಗದಲ್ಲಿ ರೂ.2,66,859.11ರಷ್ಟು ವ್ಯಾಪಾರ ಲಾಭ ಗಳಿಸಿದೆ. ಹೇರಂಜಾಲು ಗ್ರಾಮದಲ್ಲಿರುವ ಕೃಷಿ ನಿವೇಶನದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಮಾರಾಟದಿಂದ ರೂ.37,042,74 ಲಾಭ ಗಳಿಸಿದೆ ಎಂದರು.

ಸಂಘವು ವರದಿ ವರ್ಷದ ಅಂತ್ಯಕ್ಕೆ ವಿವಿಧ ಸಹಕಾರಿ ಸಂಘ ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ರೂ.12,06,88,904.59 ವಿನಿಯೋಗ ಮಾಡಿದ್ದು ಇತರ ಠೇವಣಿ ಮುಂಗಡ ರೂ.1,14,64,962 ಒಟ್ಟು ರೂ.5,75,89,884.84 ಮೊತ್ತದ ವಿವಿಧ ನಿಧಿಗಳು ಹಾಗೂ ರೂ.1,36,30,540.64 ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಸಂಘವು ಹೊಂದಿದೆ ಎಂದರು.

ಸಂಘವು ‘ಬಿ’ ತರಗತಿಗೆ ಆಡಿಟ್ ವರ್ಗೀಕರಣಗೊಂಡಿದೆ. ಸದಸ್ಯರು ಪಡೆದ ಸಾಲಗಳನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದ ಸದಸ್ಯರಿಗೆ ಶೇ.2ರ ಬಡ್ಡಿ ರಿಯಾಯತಿ ಸೌಲಭ್ಯ ನೀಡಲಾಗುತ್ತಿದ್ದು ವರದಿ ವರ್ಷದಲ್ಲಿ ರೂ.13,49,186 ಬಡ್ಡಿ ರಿಯಾಯತಿ ನೀಡಲಾಗಿದೆ. ವರದಿ ವರ್ಷದಲ್ಲಿ ರೂ.35,000 ಮರಣನಿಧಿ ಪಾವತಿಸಲಾಗಿದ್ದು, ಪರಿಸರದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಸಲುವಾಗಿ 12 ಸಂಸ್ಥೆಗಳಿಗೆ ರೂ.87,501 ದಾನಧರ್ಮದ ನಿಧಿಯಿಂದ ದೇಣಿಗೆ ನೀಡಲಾಗಿದೆ 11 ಫಲಾನುಭವಿಗಳಿಗೆ ರೂ.53,260 ಜನೋಪಕಾರಿ ನಿಧಿಯಿಂದ ವೈದ್ಯಕೀಯ ನೆರವು ನೀಡಲಾಗಿದೆ ಎಂದರು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಖಾರ್ವಿ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ತಿಳುವಳಿಕೆ ಪತ್ರ ಓದಿ ದಾಖಲಿಸಿದರು.

ಈ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳನ್ನು ಸಭೆಯಲ್ಲಿ ಗೌರವಿಸಿ ಪುರಸ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗಾಯತ್ರಿ ಜಿ ಶಾನುಭಾಗ್ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಬಿ ರತ್ನ ಹೆಬ್ಬಾರ್, ಶ್ರೀಮತಿ ಪುಷ್ಪಲತಾ ಶಾನುಭೋಗ್, ಶ್ರೀಮತಿ ಶಾರದಾ, ಶ್ರೀಮತಿ ವಸಂತಿ ಪೂಜಾರಿ, ಶ್ರೀಮತಿ ಕಮಲಾಕ್ಷಿ ವಿ ನಾವಡ, ಶ್ರೀಮತಿ ರೇಣುಕಾ ನಾಯಿರಿ, ಉಪಸ್ಥಿತರಿದ್ದರು ಜಯಂತಿ ಎಚ್ ಬಿಲ್ಲವ ಪ್ರಾರ್ಥಿಸಿ , ಸಂಘದ ಸಿಬ್ಬಂದಿ ಸುಮಂಗಲ ವರದಿ ವಾಚಿಸಿದರು ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಖಾರ್ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

“ಸಂಘದ ಗ್ರಾಹಕರಿಗಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಶೀಘ್ರದಲ್ಲಿ ನೀಡಲಿದ್ದು, ಎಲ್ಲಾ ಸದಸ್ಯರು ತಮ್ಮ ವ್ಯವಹಾರಕ್ಕೆ ಅಗತ್ಯವಿರುವ ಸ್ಟ್ಯಾಂಪ್ ಪೇಪರ್ ಗಳನ್ನು ಸಂಘದಲ್ಲಿಯೇ ಪಡೆದುಕೊಂಡು ಸಹಕರಿಸಬೇಕು, ಡಿಜಿಟಲ್ ಫೋಟೋ ಕೋಫಿ, ಪ್ರಿಂಟಿಂಗ್ ಮೆಷಿನ್ ಅಳವಡಿಸಿದ್ದು ಗ್ರಾಹಕರು ಸ್ಮಾರ್ಟ್ ಕಾರ್ಡ್, ಇ-ಶ್ರಮ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೌಲಭ್ಯವನ್ನು ಪಡೆದುಕೊಳ್ಳಬಹುದು-ಅನ್ನಪೂರ್ಣ ಉಡುಪ ಅಧ್ಯಕ್ಷರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!