spot_img
Friday, August 28, 2026
spot_img

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆಯಲ್ಲಿ ವಂಡ್ಸೆ ಹೋಬಳಿ ಅಕ್ರಮ ಸಕ್ರಮ ಬಗರ್ ಹುಕುಂ ಹೆಚ್ಚುವರಿ ಸಮಿತಿ ಪ್ರಥಮ ಸಭೆ

ಕುಂದಾಪುರ: ವಂಡ್ಸೆ ಹೋಬಳಿ ಅಕ್ರಮ ಸಕ್ರಮ ಸಮಿತಿ ಪ್ರಥಮ ಸಭೆ ಕುಂದಾಪುರ ತಾಲೂಕು ಕಛೇರಿಯಲ್ಲಿ ಅಕ್ರಮ ಸಕ್ರಮ ಬಗರ್ ಹುಕುಂ ಹೆಚ್ಚುವರಿ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಿತು.

ನ್ಯಾಯಾಲಯದ ಆದೇಶದ ನಂತರ ನಡೆದ ಪ್ರಥಮ ಸಭೆ ಇದಾಗಿದ್ದು, ಆರ್ಹ 7 ಫಲಾನುಭವಿಗಳನ್ನು ಮೊದಲ ಹಂತದಲ್ಲಿ ಮಂಜೂರಾತಿಗೆ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಕೆ.ಗೋಪಾಲ ಪೂಜಾರಿ ಅವರು ಕಂದಾಯ ಅಧಿಕಾರಿಗಳು ಪ್ರತಿ ವಾರ 25 ಅರ್ಜಿಗಳು ಸಭೆಗೆ ಬರುವಂತೆ ಮಾಡಬೇಕು, ಬಡವರಿಗೆ ಮೊದಲ ಆದ್ಯತೆ ನೀಡಬೇಕು. ಶೀಘ್ರವಾಗಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಮಾಡಲು ಗ್ರಾಮ ಕರಣಿಕರು, ಗ್ರಾಮ ಆಡಳಿತ ಅಧಿಕಾರಿಗಳು ಶ್ರಮ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ, ತಹಶೀಲ್ದಾರ್ ಪ್ರದೀಪ ಹುರುಡೆಕರ್, ಸಮಿತಿ ಸದಸ್ಯರಾದ ಶ್ರೀನಿವಾಸ ಸೌಡ, ದಿನೇಶ ನಾಯ್ಕ, ಹೇಮಾವತಿ ಪೂಜಾರಿ ಹಾಗೂ ಕಂದಾಯ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಗೋಪಾಲ ಪೂಜಾರಿ ಅವರು, ಸರಕಾರ ಅಕ್ರಮ ಸಕ್ರಮ ಬಗರ್ ಹುಕುಂ ಹೆಚ್ಚುವರಿ ಸಮಿತಿ ಮಾಡಿ ದಾಗ ಅನಗತ್ಯವಾಗಿ ಎರಡು ಕೇಸ್ ಹಾಕಲಾಯಿತು. ಮೂರು ವರ್ಷದಿಂದ 29 ಬಾರಿ ವಿಚಾರಣೆ ಆಗಿ ಸರಕಾರ ರಚನೆ ಮಾಡಿದ ಬಗರ್ ಹುಕುಂ ಹೆಚ್ಚುವರಿ ಸಮಿತಿಯನ್ನು ಉಚ್ಚನ್ಯಾಯಾಲಯ ಎತ್ತಿ ಹಿಡಿದಿದೆ. ಪ್ರಕರಣವನ್ನು ವಜಾ ಮಾಡಿದೆ. ಇವತ್ತು ಮೊದಲ ಸಭೆ ನಡೆಸಿದ್ದೇವೆ. ಮೊದಲ ಸಭೆಯಲ್ಲಿ 7 ಆರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದೆ ಎರಡನೇ ಹಂತದಲ್ಲಿ ಹಕ್ಕು ಪತ್ರ ನೀಡಲಾಗುವುದು. ಇನ್ನೂ ಪ್ರತೀ ಶುಕ್ರವಾರ ಬೆಳಿಗ್ಗೆ 10-30 ಸಮಿತಿ ಸಭೆ ನಡೆಯಲಿದೆ. 25 ಅರ್ಜಿಗಳನ್ನು ಸಮಿತಿ ಮುಂದೆ ಇಡುವಂತೆ ಸೂಚಿಸಲಾಗಿದೆ. ಈಗಾಗಲೇ ಬೈಂದೂರು ಹೋಬಳಿಯಲ್ಲಿ ಸುಮಾರು 2696, ವಂಡ್ಸೆ ಹೋಬಳಿಯಲ್ಲಿ ಸುಮಾರು 1900 ಒಟ್ಟು ಬೈಂದೂರು ಕ್ಷೇತ್ರದಲ್ಲಿ 4ಸಾವಿರ ಅಕ್ರಮ ಸಕ್ರಮ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಮಾಡುವಂತೆ ಈಗಾಗಲೇ ಸರಕಾರ ಸ್ಪಷ್ಟ ಪಡಿಸಿದೆ. ಹಾಗಾಗಿ ಕಂದಾಯ ಅಧಿಕಾರಿಗಳು 30-40 ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವಿಸುತ್ತಿರುವ ಅರ್ಜಿದಾರರ ಸ್ಥಳ ಪರಿಶೀಲನೆ ಮಾಡಿ ಅರ್ಜಿಯನ್ನು ಸಮಿತಿಯ ಮುಂದಿಡುವಂತೆ ಸೂಚಿಸಲಾಗಿದೆ. ತಕರಾರುಗಳು ಇದ್ದರೆ ತಹಶೀಲ್ದಾರರು ಹಾಗೂ ಸಮಿತಿ ಸದಸ್ಯರು ಸ್ಥಳ ಪರಿಶೀಲನೆಗೆ ಬರುತ್ತಾರೆ. ಒಟ್ಟಾರೆಯಾಗಿ ಆರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕೆಲಸ ಶೀಘ್ರವಾಗಿ ಆಗಬೇಕಾಗಿದೆ ಎಂದರು.

ನನ್ನ ಶಾಸಕತ್ವದ ಅವಧಿಯಲ್ಲಿ ಹೆಚ್ಚುವರಿ ಸಮಿತಿಯಾಗಿದೆ, ಎಸಿ ಸಮಿತಿ ಆಗಿದೆ. ಆದರೆ ನಾನು ಕೋರ್ಟಿಗೆ ಹೋಗಲಿಲ್ಲ. ಇವತ್ತು ಮೂರು ವರ್ಷದಿಂದ ಕೋರ್ಟಿಗೆ ತಿರುಗಿ ಸಮಯ ವ್ಯರ್ಥವಾಗಿದೆ. ಉಚ್ಚನ್ಯಾಯಲಯನ್ನು ಅದನ್ನು ವಜಾ ಮಾಡಿದ್ದರಿಂದ ಬಡವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿದೆ ಎಂದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!