spot_img
Monday, August 24, 2026
spot_img

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕಂಡ್ಲೂರು ಶಾಖೆಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮ

ಕುಂದಾಪುರ: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಮತ್ತು ನಬಾರ್ಡ್ ಸಹಯೋಗದೊಂದಿಗೆ ಕಂಡ್ಲೂರು ಶಾಖೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಗ್ರಾಹಕರಿಗೆ ಆರ್ಥಿಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನೆರವೇರಿತು.

ಹಾಗೂ ಬ್ಯಾಂಕಿನ ಕುರಿತು ಮತ್ತು ಆರ್ಥಿಕ ಅರಿವು ಕುರಿತು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕರಾದ ಎಂ ಮೋಹನದಾಸ್ ಹೆಬ್ಬಾರ್, ಕುಂದಾಪುರ ಶಾಖಾ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಹೆಚ್.ಕೆ, ಕೆನರಾ ಬ್ಯಾಂಕಿನ ಕೌನ್ಸಿಲರ್ ಆದ ಶ್ರೀಮತಿ ಆಶಾಲತಾರವರು ಬ್ಯಾಂಕ್ ಖಾತೆಗಳಲ್ಲಿ ವ್ಯವಹರಿಸುವ ಕುರಿತು ಹಾಗೂ ಬ್ಯಾಂಕಿನ ಯೋಜನೆಗಳ ಕುರಿತು ಮತ್ತು ಬ್ಯಾಂಕಿನಲ್ಲಿ ಸಿಗುವ ಸರ್ಕಾರಿ ಯೋಜನೆಗಳ ಕುರಿತು ವಿಸ್ತಾರವಾಗಿ ತಿಳಿಸಿದರು.

ಶಾಖಾ ವ್ಯವಸ್ಥಾಪಕರಾದ ಚಂಪಾವತಿ ಸ್ವಾಗತಿಸಿ ಗೌರವಿಸಿದರು. ಪ್ರೇರಕರಾದ ಸಂಧ್ಯಾ ಶೆಟ್ಟಿ ಪ್ರಾರ್ಥಿಸಿದರು. ನವೋದಯ ಸ್ವಸಹಾಯ ಗುಂಪುಗಳ ತಾಲ್ಲೂಕು ಮೇಲ್ವಿಚಾರಕ ಮನೋಹರ್ ಶೆಟ್ಟಿ ಹೆಚ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಗ್ರಾಹಕರು, ಸಿಬ್ಬಂದಿಗಳು, ನವೋದಯ ಪ್ರೇರಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!