spot_img
Monday, August 24, 2026
spot_img

ಉಳ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಅರ್ಥಾಂಕುರ’ಸರಣಿ ತಾಳಮದ್ದಳೆ ಉದ್ಘಾಟನೆ

ಮೊಗೆಬೆಟ್ಟು ವಿರಚಿತ ನಾನ್ ಕುಂದಾಪ್ರ ಕನ್ನಡದ ಪ್ರಸಂಗ ಬಿಡುಗಡೆ
ಕುಂದಾಪುರ: ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಆ.23ರಂದು ನಮ್ಮ ಉಳ್ತೂರು ಬಳಗ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಹಯೋಗದಲ್ಲಿ ಆಯೋಜಿಸಿದ ಅರ್ಥಾಂಕುರ-28 ಸರಣಿ ಕಾರ್ಯಕ್ರಮವನ್ನು ಶ್ರೀಮತಿ ವಿಜಯಲಕ್ಷ್ಮಿ ರಾಮದಾಸ ಅಡಿಗ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯಕ್ಷಕವಿ, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಕುಂದಾಪ್ರ ಕನ್ನಡದ ಪ್ರಸಂಗ ನಾನ್ ಯಕ್ಷಕೃತಿಯನ್ನು ಪ್ರಾಚಾರ್ಯ ದೇವದಾಸ್ ರಾವ್ ಅನಾವರಣಗೊಳಿಸಿ ಯಕ್ಷಗಾನವನ್ನು ಕುಂದಾಪ್ರ ಕನ್ನಡದಲ್ಲಿ ಬರೆಯುವ ಕಾಯಕ ಕಷ್ಟಕರವಾದದ್ದು. ಸಾಹಿತ್ಯವನ್ನು ಹೊಂದಿಸಿಕೊಂಡು ಛಂದಸ್ಸಿಗನುಗುಣವಾಗಿ ಪದ್ಯ ರೂಪಕ್ಕೆ ತರುವುದು ಸುಲಭ ಸಾಧ್ಯವಲ್ಲ. ಇಂತಹ ಕ್ಲಿಷ್ಟಕರ ಸಾಹಸಗೈದ ಪ್ರಸಾದ್ ಮೊಗೆಬೆಟ್ಟು ಯಕ್ಷ ಕೃತಿಯನ್ನು ಶ್ಲಾಘಿಸಲೇಬೇಕು ಎಂದರು.

ಈ ಸಂದರ್ಭದಲ್ಲಿ ಎ. ರವೀಂದ್ರ ಶೆಟ್ಟಿ, ರಮೇಶ್ ಅಡಿಗ ಉಳ್ತೂರು, ಬಾಬು ಪೂಜಾರಿ ಮಲ್ಯಾಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

ಯಶಸ್ವಿ ಕಲಾವೃಂದದ ಗೌರವಾಧ್ಯಕ್ಷ ಗೋಪಾಲ ಪೂಜಾರಿ ಸ್ವಾಗತಿಸಿ, ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದರು. ಪ್ರತಾಪ್ ಶೆಟ್ಟಿ ಉಳ್ತೂರು ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ‘ನಾನ್’ ರಂಗ ಪ್ರಸ್ತುತಿಗೊಂಡಿತು. ತಾಳಮದ್ದಳೆಯಲ್ಲಿ ಭಾಗವತರು-ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮದ್ದಳೆ-ಎನ್.ಜಿ ಹೆಗಡೆ ಯಲ್ಲಾಪುರ, ಚಂಡೆ-ರಾಹುಲ್ ಕುಂದರ್ ಕೋಡಿ ಕನ್ಯಾಣ. ಅರ್ಥಧಾರಿಗಳು ಸುದರ್ಶನ ಪಾತ್ರದಲ್ಲಿ ಸತೀಶ ಶೆಟ್ಟಿ ಮೂಡುಬಗೆ, ವಿಷ್ಣು ಪಾತ್ರದಲ್ಲಿ ಡಾ.ಜಗದೀಶ ಶೆಟ್ಟಿ ಸಿದ್ದಾಪುರ, ಲಕ್ಷ್ಮೀ ಪಾತ್ರದಲ್ಲಿ ಸಂತೋಷ ಹಿಲಿಯಾಣ, ಶತ್ರುಪ್ರಸೂಧನನಾಗಿ ಮನು ಹಂದಾಡಿ, ದೇವೇಂದ್ರನಾಗಿ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ದೂತನ ಪಾತ್ರವನ್ನು ಅನಂತ ಕೃಷ್ಣ ನಾವಡ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!